ಸಂಪ್ಯ ಪೊಲೀಸ್ ಠಾಣಾ ಬಳಿ ಕೌಂಪೌಂಡ್ ಕುಸಿತ, ವಾಹನಗಳಿಗೆ ಹಾನಿ

0

ಪುತ್ತೂರು: ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಠಾಣೆಯ ಕಟ್ಟಡದ ಹಿಂಬದಿಯಲ್ಲಿರುವ ಕೌಂಪೌಂಡ್ ಜು.30 ರಂದು ಕುಸಿತಗೊಂಡಿದ್ದು ಹಲವು ವಾಹನಗಳಿಗೆ ಹಾನಿಯುಂಟಾಗಿದೆ. ಭಾರೀ ಮಳೆಗೆ ಕೌಂಪೌಂಡ್ ಕುಸಿತಗೊಂಡಿದೆ. ಕೌಂಪೌಂಡ್ ಬದಿಯಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್ ಸಿಬ್ಬಂದಿಗಳ ಕಾರು ಹಾಗೂ ಬೈಕ್ ಸೇರಿದಂತೆ 6 ವಾಹನಗಳಿಗೆ ಹಾನಿಯುಂಟಾಗಿದೆ.ಅದೇ ರೀತಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಠಾಣೆಯಲ್ಲಿ ತಂದಿರಿಸಲಾಗಿದ್ದ 5 ಮೋಟಾರ್ ಬೈಕ್‌ಗಳಿಗೆ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here