ಪುತ್ತೂರು:ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಟ್ರಸ್ಟ್ ನಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕದ ಒಂದರಿಂದ 7ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ಶಾಲಾ ಹಿರಿಯ ವಿದ್ಯಾರ್ಥಿ ಶಿವಕುಮಾರ್ ದಂಪತಿಗಳು ಅವರ ಸುಪುತ್ರ ಮಾಸ್ಟರ್ ನಕ್ಷ್ಎಸ್ ಪೂಜಾರಿ ಇವರ ಹುಟ್ಟು ಹಬ್ಬದ ಸವಿನೆನಪಿಗಾಗಿ ಟ್ರಸ್ಟ್ ಜಂಟಿ ಸಹಭಾಗಿತ್ವದಲ್ಲಿ ಮಕ್ಕಳಿಗೆ ವಿತರಿಸಿದರು.
ಕಾರ್ಯಕ್ರಮವನ್ನು ಹಣ್ಣಿನ ಗಿಡ ನೆಡುವುದರ ಮೂಲಕ ಅತಿಥಿಗಳು ಉದ್ಘಾಟನೆಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ನಕ್ಷ್ ಅವರ ತಾಯಿ ಸಂಧ್ಯಾ ಶಿವಕುಮಾರ್, ಅಜ್ಜ ಅಜ್ಜಿ ಕಿಟ್ಟಣ್ಣ ಪೂಜಾರಿ, ಜಲಜಾಕ್ಷಿ ,ರೇವತಿ. ,ಟ್ರಸ್ಟ್ ನ ಕಾರ್ಯದರ್ಶಿ ವಿಜಯ ಅಮ್ಟಾಡಿ, ಬ್ರಹ್ಮಶ್ರೀ ನಾರಾಯಣ ಗುರು ವೈದಿಕ ಸಮಿತಿ ದಕ್ಷಿಣ ಕನ್ನಡ ಇದರ ಅಧ್ಯಕ್ಷ ಹರೀಶ್ ಶಾಂತಿ, ಜೊತೆ ಕಾರ್ಯದರ್ಶಿ ನಳಿನಿ, ಕೋಶಾಧಿಕಾರಿ ಶ್ರೇಯಸ್, ಜೊತೆ ಕಾರ್ಯದರ್ಶಿ ಗಣೇಶ್ ದಾಸ್ , ಸದಸ್ಯರುಗಳಾದ ದಿನೇಶ್ ಸುವರ್ಣ, ಅಶಾಂತ್, ನರಿಮೊಗರು ಗ್ರಾಮ ಪಂಚಾಯಿತಿನ ಸದಸ್ಯರುಗಳಾದ ದಿನೇಶ್, ತಾರಾನಾಥ್ ,ಶಾಲಾ ದಾನಿಗಳಾದ ಜಯರಾಮ ಆಚಾರ್ಯ ,ಎಸ್ ಡಿ ಎಂ ಸಿ ಅಧ್ಯಕ್ಷ ನಾರಾಯಣ ,ಶಾಲಾ ಪ್ರಭಾರ ಮುಖ್ಯ ಗುರು ಫೆಲ್ಸಿಟಾ ಡಿಕುನ್ಹಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು ,ಪೋಷಕರು, ಹಿರಿಯ ವಿದ್ಯಾರ್ಥಿಗಳು, ಊರವರು ಉಪಸ್ಥಿತರಿದ್ದರು .ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಕೃತಿ ಅನಿಸಿಕೆ ವ್ಯಕ್ತಪಡಿಸಿದರು. ದಾನಿಗಳಿಗೆ ಕಿರುಕಾಣಿಕೆಯನ್ನಿತ್ತು ಗೌರವಿಸಲಾಯಿತು. ಶಾಲಾ ಮುಖ್ಯಗುರು ಫೆಲ್ಸಿಟಾ ಸ್ವಾಗತಿಸಿ ,ಶಿಕ್ಷಕಿ ವಿಶಾಲಾಕ್ಷಿ ವಂದಿಸಿದರು. ಶಿಕ್ಷಕಿ ಮಾಲತಿಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸುನಿಲ್, ನೀತಾ ಹಾಗೂ ಸೌಮ್ಯ ಸಹಕರಿಸಿದರು.