ಪುತ್ತೂರು: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಉಪ್ಪಿನಂಗಡಿ ಪರಿಸರದ ಮಠ, ಪಂಜಾಲ ಮತ್ತಿತರ ಕಡೆ ದಿಢೀರನೆ ಮಳೆ ನೆರೆ ವ್ಯಾಪಕವಾಗಿ ನುಗ್ಗಿ, ಹಲವು ಕುಟುಂಬಗಳು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿರುವ ಬಗ್ಗೆ ವರದಿಯಾಗಿದೆ.
ಈಗಾಗಲೇ ನೆರೆ ನೀರಿಗೆ ಸಿಲುಕಿದ ಮನೆಗಳಿಂದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವು ಮನೆಗಳು ಜಲಾವೃತಗೊಂಡ ವಿಷಯ ತಿಳಿದ ಉಪ್ಪಿನಂಗಡಿ ಝೋನ್ ವ್ಯಾಪ್ತಿಯ ಕೆ ಎಂ ಜೆ,ಎಸ್ ವೈ ಎಸ್,ಎಸ್ಸೆಸ್ಸೆಫ್ ಸಾಂತ್ವನ ಇಸಾಬದ ಸ್ವಯಂಸೇವಕರ ತಂಡ ಬೆಳಗ್ಗಿನಿಂದಲೇ ಸಾಂತ್ವನ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.
ರಾಷ್ಟೀಯ ಹೆದ್ದಾರಿಗೂ ನೆರೆ ನೀರು ನುಗ್ಗಿದ್ದು ಸುಗಮ ವಾಹನ ಸಂಚಾರಕ್ಕೆ ಪೋಲಿಸ್ ಅಧಿಕಾರಿಗಳೊಂದಿಗೆ ಕೈ ಜೋಡಿಸುವ ಮೂಲಕ.ಇಸಾಬದ ಕಾರ್ಯಕರ್ತರ ಈ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.
ತಂಡದಲ್ಲಿ ಇಸಾಬ ಸಾಂತ್ವನ ತಂಡದ ಜಿಲ್ಲಾ ನಾಯಕ ಉಸ್ಮಾನ್ ಸೋಕಿಲ, ಉಪ್ಪಿನಂಗಡಿ ಝೋನ್ ಕಾರ್ಯದರ್ಶಿ ಎಂ ಎಂ ಶರೀಫ್ ನೆಕ್ಕಿಲ್, ನಾಯಕರಾದ ಬಾವುಞ್ಞಿ, ಇಬ್ರಾಹೀಂ ಮಠ, ನಾಸಿರ್ ಮಠ, ರಝಾಕ್ ನೇರಂಕಿ, ಅಬ್ದುರ್ರಹ್ಮಾನ್, ಹನೀಫ್ ಮದನಿ, ದಾವುದ್ ಅಂಬ್ಯುಲನ್ಸ್, ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಶರೀಫ್ ಸಖಾಫಿ, ಶಿಹಾಬ್, ಇಕ್ಬಾಲ್ ಕೊಲ್ಯ, ರಶೀದ್ ಮಠ, ಕೈಸ್, ಮನ್ಸೂರು, ಸಿದ್ದೀಕ್, ಅಶ್ರಫ್, ಮಜೀದ್, ಸುಹೈಲ್, ಶಾಮಿದ್, ಜುನೈದ್, ಮುಸ್ಥಫಾ, ಹುದೈಫ್, ಮಿದ್ಲಾಜ್, ಜಾಬಿರ್, ಆಸಿಫ್ ಸಹಿತ ಇಸಾಬ ತಂಡದ ಹಲವು ಕಾರ್ಯಕರ್ತರು ಕಾರ್ಯಚರಣೆಯಲ್ಲಿ ಭಾಗವಹಿಸಿದರು.