ಪುತ್ತೂರು: ಪುತ್ತೂರು ಆಸುಪಾಸಿನಲ್ಲಿ ಕಳೆದ ಹಲವು ದಿನಗಳಿಂದ ಕಳವಾದ ಸಾಕು ದನಗಳು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ ನಗರಸಭೆ ಸದಸ್ಯ ಪಿ ಜಿ ಜಗನ್ನಿವಾಸ ರಾವ್ ಮತ್ತು ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಗೋವನ್ನು ಅಪಹರಿಸುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಜು.27ಕ್ಕೆ ಬನ್ನೂರು ಕರ್ಮಲದಲ್ಲಿ ನಿರಾಶ್ರಿತ ಎರಡು ಗೋವುಗಳು ಪತ್ತೆಯಾಗಿತ್ತು. ಬಳಿಕ ಅದು ಕಳವಾದ ಗೋವುಗಳೆಂದು ವಾರಿಸುದಾರಿಂದ ತಿಳಿದು ಬಂದಿದೆ. ಆ.1ರಂದು ಗಾಯಗೊಂಡ ಸ್ಥಿತಿಯಲ್ಲಿ ಮತ್ತೊಂದು ಗೋವು ರಕ್ತೇಶ್ವರಿ ವಠಾರದಲ್ಲಿ ಪತ್ತೆಯಾಗಿತ್ತು. ಗೋವಿನ ಮೈಯೆಲ್ಲ ಗಾಯವಾಗಿದ್ದು, ಯಾರೋ ಗೋ ಕಳ್ಳರು ಗೋವನ್ನು ಅಪಹರಿಸುವ ಯತ್ನ ಮಾಡಿರುವ ಸಂಶಯ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಗೋ ಅಪಹರಿಸುವವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಂಡು ಸಾಕು ದನಗಳಿಗೆ ರಕ್ಷಣೆ ನೀಡುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.