ಕಡಬ: ತುಳುನಾಡ ತುಡರ್ ಕುಂತೂರು-ಪೆರಾಬೆ ಇದರ ಆಶಯದಲ್ಲಿ ’ಕಂಡೊಡೊಂಜಿ ದಿನ’ ಕಾರ್ಯಕ್ರಮ ಕುಂತೂರು ಗ್ರಾಮದ ಕುಂತೂರು ಮಜಲು ಬಾಬು ಗೌಡ ಇವರ ಬಾಕಿಮಾರು ಗದ್ದೆಯಲ್ಲಿ ಜು.28ರಂದು ನಡೆಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಳುನಾಡ ತುಡರ್ ಇದರ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕೇವಳಪಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉದ್ಘಾಟನೆಯನ್ನು ಗದ್ದೆ ಮಾಲೀಕ ಪುಷ್ಪ ಮತ್ತು ಬಾಬು ಗೌಡ ಕುಂತೂರು ಮಜಲು ದೀಪ ಪ್ರಜ್ವಲಿಸುವ ಮೂಲಕ ನೆರವೇರಿಸಿದರು. ಬಾಕಿಮಾರು ಗದ್ದೆಗೆ ಸೇಕ್ರೆಡ್ ಹಾರ್ಟ್ ಪದವಿ ಕಾಲೇಜು ಮಡಂತ್ಯಾರು ಇಲ್ಲಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಈಶ್ವರ ಗೌಡ ಇವರು ಹಾಲೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿ ಇಂದಿನ ಆಧುನಿಕ ಕಾಲದ ಕೃಷಿ ಪದ್ಧತಿಯನ್ನು ಬತ್ತದ ನಾಟಿಯನ್ನು ಮುಂದುವರಿಸುವ ಬಾಬು ಗೌಡರಿಗೆ ಅಭಿನಂದನೆ ಸಲ್ಲಿಸಿ ಗದ್ದೆಯ ಮಣ್ಣಿನಿಂದ ಕೆಲವು ಕಾಯಿಲೆಗಳಿಗೆ ಆಗುವಂತಹ ಲಾಭವನ್ನು ತಿಳಿಸಿದರು. ಮುಖ್ಯ ಅತಿಥಿಗಳಾದ ಪ್ರಗತಿಪರ ಕೃಷಿಕ ಸೀತಾರಾಮ ರೈ ಕೇವಳ, ಕುಂತೂರು ಮಂಜುನಾಥ ಕ್ಲಿನಿಕ್ನ ವೈದ್ಯ ಡಾ.ಕುಮಾರ ಸುಬ್ರಹ್ಮಣ್ಯ, ನಿವೃತ್ತ ಹಿರಿಯ ಪಶುವೈದ್ಯ ಪರಿವೀಕ್ಷಕ ಅಶೋಕ್ ಕುಮಾರ್ ಕೊಯಿಲ, ಕುಂತೂರು ಅದಿತಿ ಟ್ರಾನ್ಸ್ಪೋರ್ಟ್ ಮಾಲಕ ಸುರೇಶ್ ಕುಂಡಡ್ಕ, ಕ್ರೀಡಾ ಜ್ಯೋತಿ ಉದ್ಘಾಟಿಸಿದ ಕಡಬ ಶ್ರೀಜಾ ಫೈನಾನ್ಸ್ನ ಸೋನಿಕ್ ರೈ ಅಗತ್ತಾಡಿ, ಪೆರಾಬೆ ಗ್ರಾ.ಪಂ.ಸದಸ್ಯ ಚಂದ್ರಶೇಖರ ರೈ ಅಗತ್ತಾಡಿ ಶುಭ ಹಾರೈಸಿದರು.
ಅಧಿತಿ, ಭೂಮಿಕ, ಆರಾಧ್ಯ, ಸಿಂಚನ ಪ್ರಾರ್ಥಿಸಿದರು. ತುಳುನಾಡ ತುಡರ್ ಕುಂತೂರು ಪೆರಾಬೆ ಇದರ ಕಾರ್ಯದರ್ಶಿ ಮಮತಾ ಅಂಬರಾಜೆ ವರದಿ ವಾಚಿಸಿದರು. ಕೋಶಾಧಿಕಾರಿ ಮೇಘನಾಥ ಬಲತ್ತನೆ ವಂದಿಸಿದರು. ಗೌರವ ಸಲಹೆಗಾರ ಚೆನ್ನಕೇಶವ ರೈ ಗುತ್ತುಪಾಲು ಕಾರ್ಯಕ್ರಮ ನಿರೂಪಿಸಿದರು.
ನಂತರ ಗದ್ದೆಯಲ್ಲಿ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಮುಖ್ಯ ನಿರೂಪಣೆಯಲ್ಲಿ ದೀಪಕ್ ನೆಲ್ಯಾಡಿ ಸಹಕರಿಸಿದರೆ, ಸಹ ನಿರೂಪಣೆಯಲ್ಲಿ ಪ್ರವೀಣ ಆಳ್ವ ನೂಜಿಲ, ಗುರುಕಿರಣ್ ಶೆಟ್ಟಿ ಬಾಲಾಜೆ ಸಹಕರಿಸಿದರು. ಮಧ್ಯಾಹ್ನ ತುಳು ಮದಿಪು ಎನ್ನುವ ವಿಶೇಷ ಕಾರ್ಯಕ್ರಮ ಕುಂತೂರು ಪ್ರಗತಿಪರ ಕೃಷಿಕ ಬಾಲಾಜೆ ಮಹಾಬಲ ಶೆಟ್ಟಿ ಇವರಿಂದ ನಡೆಯಿತು. ತುಳು ನಾಡಿನ ಸಂಸ್ಕೃತಿ, ಗದ್ದೆ ವಿಶೇಷತೆ, ಹಿಂದಿನ ಕಾಲದಲ್ಲಿ ವ್ಯವಸಾಯದಲ್ಲಿ ಪಡುತ್ತಿದ್ದ ಕಷ್ಟ ಸುಖ, ನೋವು ನಲಿವು ಹಾಗೂ ಕಂಬಳ ಕ್ಷೇತ್ರದಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಅನುಭವ ಹಂಚಿಕೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆದ್ದೊಟ್ಟೆ ವಹಿಸಿದ್ದರು. ಕೆಪಿಸಿಎಲ್ ನಿವೃತ್ತ ಇಂಜಿನಿಯರ್ ಮೋನಪ್ಪ ಗೌಡ ಅಗತ್ತಾಡಿ, ಪೆರಾಬೆ ಗ್ರಾ.ಪಂ.ಸದಸ್ಯ ಮೋಹನ್ ದಾಸ್ ರೈ ಪರಾರಿ ಶುಭಹಾರೈಸಿದರು. ಹಿರಿಯ ದೈವ ಪಾತ್ರಿಯಾದ ರಾಮಣ್ಣ ಗೌಡ ಅರ್ಬಿ ಇವರಿಗೆ ಗೌರವ ಸಮರ್ಪಣೆ ನೆರವೇರಿಸಲಾಯಿತು. ಸನ್ಮಾನ ಪತ್ರವನ್ನು ಗುರುಕಿರಣ್ ಶೆಟ್ಟಿ ಬಾಲಾಜೆ ವಾಚಿಸಿದರು.
ಕಾರ್ಯದರ್ಶಿ ಮಮತಾ ಅಂಬರಾಜೆ ಸ್ವಾಗತಿಸಿ ಕೋಶಾಧಿಕಾರಿ ಮೇಘನಾಥ ಬಲತ್ತನೆ ವಂದಿಸಿದರು. ಕುಮಾರಿ ಅನುಷಾ ಅರ್ಬಿ ಬಹುಮಾನ ಪಟ್ಟಿ ವಾಚಿಸಿದರು. ಚೆನ್ನಕೇಶವ ರೈ ಗುತ್ತುಪಾಲು ಕಾರ್ಯಕ್ರಮ ನಿರೂಪಿಸಿದರು.
ಮುಖ್ಯ ತೀರ್ಪುಗಾರರಾಗಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ದೈಹಿಕ ನಿರ್ದೇಶಕ ಗಣೇಶ್ ಕೆ., ಕುಂತೂರು ಮಾರ್ ಇವಾನಿಯೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಾರೀರಿಕ ನಿರ್ದೇಶಕ ಭರತ್ ಶೆಟ್ಟಿ ಕೇವಳ ಪಟ್ಟೆ, ನಿವೃತ್ತ ಹಿರಿಯ ಪಶು ಪರಿವೀಕ್ಷಕ ಅಶೋಕ್ ಕೊಯಿಲ ಸಹಕರಿಸಿದರು. ಗೌರವ ಸಲಹೆಗಾರ ಗುರುರಾಜ್ ರೈ ಕೇವಳ, ಉಪಾಧ್ಯಕ್ಷ ಜಯರಾಜ್ ಪಾಲೆಚ್ಚಾರು, ಜೊತೆ ಕಾರ್ಯದರ್ಶಿ ವಸಂತ ಕುದ್ರೊಟ್ಟು, ಸದಸ್ಯರಾದ ವಸಂತ ಗುರಿಯಡ್ಕ, ಕೆ. ರಾಜು ಪದವು, ಲೋಕೇಶ್ವರಿ, ಗೀತಾ ಕುದ್ರೊಟ್ಟು, ಶಶಿಕಲ ಕುದ್ರೊಟ್ಟು, ಅಶೋಕ್ ರೈ ಗಾಣಜಾಲು ಇವರುಗಳು ಸಹಕರಿಸಿದರು. ಸುಮಾರು 700 ಜನರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.