ಪುತ್ತೂರು: ನರಿಮೊಗರು ಗ್ರಾಮದ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಶ್ರಯದಲ್ಲಿ, ಗೋಸೇವಾ ಗತಿ ವಿಧಿ, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಆರೋಗ್ಯ ಭಾರತಿ, ಪುತ್ತೂರು ಜಿಲ್ಲೆ ಇದರ ಸಹಯೋಗದಲ್ಲಿ ಪಂಚಗವ್ಯ ಚಿಕಿತ್ಸೆ ಮತ್ತು ಆಯುರ್ವೇದ ತಜ್ಞ ಡಾ .ಡಿ .ಪಿ .ರಮೇಶ್ ಬೆಂಗಳೂರು ಇವರಿಂದ ಪಂಚಗವ್ಯ ಚಿಕಿತ್ಸಾ ಶಿಬಿರ ಹಾಗೂ ಪಂಚಗವ್ಯ ಚಿಕಿತ್ಸೆ ವಿಚಾರ ಗೋಷ್ಠಿ, ನರಿಮೊಗರು ಪ್ರಸಾದಿನೀ ಆಸ್ಪತ್ರೆಯಲ್ಲಿ ಆ.11ರಂದು ನಡೆಯಲಿದೆ.
ಗೋಸೇವಾ ಗತಿವಿಧಿ ಮಂಗಳೂರು ವಿಭಾಗ ಸಂಯೋಜಕ ಗಂಗಾಧರ ಪೆರ್ಮಂಕಿ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಮೊದಲ ಗೋಷ್ಠಿಯಲ್ಲಿ ಡಾ . ಡಿ .ಪಿ .ರಮೇಶ್ ಇವರು ಪಂಚಗವ್ಯ ಚಿಕಿತ್ಸೆಗೆ ಮಣಿಯುವ ಕಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದರ ಮಹತ್ವದ ಬಗ್ಗೆ, ಎರಡನೆಯ ಗೋಷ್ಠಿಯಲ್ಲಿ ಸೈಕೋನ್ಯೂರೋ ಇಮ್ಮ್ಯೂನೊಲೊಜಿಸ್ಟ್ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳ ತಜ್ಞ ಡಾ .ಅವಿನಾಶ್ ಸಲ್ಗರ್ ಅವರು “ಪಂಚಗವ್ಯ ಚಿಕಿತ್ಸೆ – ಸಂಶೋಧನೆ, ಅಧ್ಯಯನ ಮತ್ತು ಪ್ರಸ್ತುತತೆ ಬಗ್ಗೆ, ಮೂರನೆಯ ವಿಚಾರ ಗೋಷ್ಠಿಯಲ್ಲಿ ಡಾ .ಅವಿನಾಶ್ ಸಲ್ಗರ್ ಅವರು “ಮನೋದೈಹಿಕ ಕಾಯಿಲೆಗಳು & ತಡೆಗಟ್ಟುವಿಕೆ ಮತ್ತು ಪಂಚಗವ್ಯದಂತಹ ನೈಸರ್ಗಿಕ ಪರಿಹಾರೋಪಾಯ”ದ ಬಗ್ಗೆ ವಿಚಾರಗಳನ್ನು ತಿಳಿಸಲಿದ್ದಾರೆ. ವಿಚಾರಗೋಷ್ಠಿಗೆ ಹಾಗೂ ತಪಾಸಣೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ. ಯಾವುದೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಈಗ ಗುಣ ಹೊಂದಿದವರು ಅದು ಮರುಕಳಿಸದಂತೆ, ಕ್ಯಾನ್ಸರ್ ಎಂದು ಈಗ ತಾನೇ ಪತ್ತೆಯಾದ ಹಂತದಲ್ಲಿ ಇರುವವರು, ಚಿಕಿತ್ಸೆ ಪಡೆಯುತ್ತಾ ಇರುವವರು ಸಂದರ್ಶಿಸಿ ಚಿಕಿತ್ಸೆ ಪಡೆಯಬಹುದು . ಚಿಕಿತ್ಸೆಗೆ ಬರುವವರು ಹಳೆಯ ಎಲ್ಲಾ ರಿಪೋರ್ಟ್ ಗಳನ್ನು ತರಬೇಕು .ಹೆಚ್ಚಿನ ಮಾಹಿತಿಗೆ ವಾಟ್ಸಪ್ ಸಂಖ್ಯೆ 9019273522, ಹರ್ಷಿತ್ ಬೆಟ್ಟಂಪಾಡಿ ( 9019934581) , ಗಣೇಶ್ ಮುವ್ವಾರು ( 9449009499 ), ಜಯಾನಂದ . ಕೆ . (9448445828) ಇವರುಗಳನ್ನು ಸಂಪರ್ಕಿಸಲು ಆಸ್ಪತ್ರೆಯ ಆಡಳಿತ ನಿರ್ದೇಶಕ , ಆಯುರ್ವೇದ ತಜ್ಞ ವೈದ್ಯ ಡಾ .ರಾಘವೇಂದ್ರ ಪ್ರಸಾದ್ ಬಂಗಾರಡ್ಕ ವಿನಂತಿಸಿಕೊಂಡಿದ್ದಾರೆ.