ಫುಣಚ: ಊರಿನ ಮಾರಿಯನ್ನು ಓಡಿಸುವ ಆಟಿ ಕಳೆಂಜ ಕುಣಿತಕ್ಕೆ ತುಳುನಾಡಿನಲ್ಲಿ ವಿಶೇಷ ಸ್ಥಾನಮಾನವಿದ್ದು, ತುಳುನಾಡಿನ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಆಟಿ ಕಳೆಂಜ ಕುಣಿತ ಪಾಡ್ಡನದೊಂದಿಗೆ ಮತ್ತೆ ನೆನಪಿಸುವ ನಿಟ್ಟಿನಲ್ಲಿ ಪುಣಚ ಗ್ರಾಮದ ತೋರಣಕಟ್ಟೆ ಧೂಮಾವತಿಮೂಲೆ ಆನಂದ, ಮೋಹನ ಮತ್ತು ಬಳಗದವರ ಆಟಿ ಕಳೆಂಜ ವೇಷ ತೊಟ್ಟು ಗ್ರಾಮದ ಆಜೇರು,ದೇರಣಮೂಲೆ,ಮೊಟ್ಟೆತ್ತಡ್ಕ,ಕಲ್ಲಾಜೆ,ಕೊಪ್ಪರತೊಟ್ಟು,ಏರಣಿಕಟ್ಟೆ,ದೇವರಗುಂಡಿ, ಮನಿಲ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ತನ್ನ ಕಲೆಯನ್ನು ಪ್ರದರ್ಶಿಸುವ ಆಟಿ ಕಳೆಂಜನ ವಿಶೇಷತೆಯನ್ನು ಸಾರಿದರು. ಹಲವು ವರ್ಷಗಳ ಬಳಿಕ ಆಟಿ ಕಳೆಂಜ ನಲಿಕೆಯನ್ನು ನೋಡಿ ಜನರು ಖುಷಿ ಪಡುವಂತಾಯಿತು.ಈ ಕಲೆಗೆ ಗ್ರಾಮದ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.