ಕೊಯಿಲ: ಎಸ್‌ಕೆಎಸ್‌ಎಸ್‌ಎಫ್ ಆತೂರು ಕ್ಲಸ್ಟರ್ ವತಿಯಿಂದ ಜನಸಂಚಲನ ಶಿಬಿರ

0

ಕಡಬ: ಎಸ್‌ಕೆಎಸ್‌ಎಸ್‌ಎಫ್ ಆತೂರು ಕ್ಲಸ್ಟರ್ ವತಿಯಿಂದ ಮಾದಕ ವ್ಯಸನದ ವಿರುದ್ಧ ಜನಸಂಚಲನ ಶಿಬಿರ ಜು.27ರಂದು ಕೊಯಿಲ ಜಂಕ್ಷನ್‌ನಲ್ಲಿ ನಡೆಯಿತು.
ಮಾಹಿತಿ ನೀಡಿದ ಕಡಬ ಠಾಣೆಯ ಕ್ರೈಂ ಪಿಎಸ್‌ಐ ಅಕ್ಷಯ್ ಅವರು, ಗಾಂಜಾ ಮಾತ್ರ ಮಾದಕ ದ್ರವ್ಯವಲ್ಲ. ಆಫೀಮು, ಮಾರ್ ಫಿನ್, ಎಮಿಡಿಯನ್ ಮುಂತಾದವುಗಳು ಮಾದಕ ದ್ರವ್ಯಗಳಾಗಿವೆ. ಎಮಿಡಿಯನ್ ಉಪ್ಪಿನ ತರ ಇರುತ್ತದೆ. ಮಾದಕ ವ್ಯಸನದ ವಿರುದ್ಧ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಹೇಳಿದರು. ಮುಹಮ್ಮದ್ ರಫೀಕ್ ಅರ್ಶದಿ ದುಆಗೆ ನೇತೃತ್ವ ನೀಡಿದರು. ರಾಮಕುಂಜ ಕ್ಲಸ್ಟರ್ ಸಿಆರ್‌ಪಿ, ರಾಮಕುಂಜ ಸರಕಾರಿ ಹಿ.ಪ್ರಾ ಶಾಲೆ ಮುಖ್ಯಗುರು ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಎನ್. ಸಿದ್ದೀಕ್ ಅಧ್ಯಕ್ಷತೆ ವಹಿಸಿದರು. ಯಾಸೀರ್ ಆರಾಫಾತ್ ವಿಷಯ ಮಂಡನೆ ಮಾಡಿದರು. ಕಡಬ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಹರೀಶ್, ಆಸೀಫ್ ಆಝ್ಹರಿ ಕೊಡಗು ಸಂದರ್ಭೋಚಿತವಾಗಿ ಮಾತನಾಡಿದರು. ಯಾಹ್ಯ ಫೈಝಿ ಪ್ರತಿಜ್ಞಾ ಬೋಧನೆ ಮಾಡಿದರು.


ಅಬ್ದುಲ್ ರಹಿಮಾನ್ ಪೈಝಿ ಪೆರಿಯಡ್ಕ, ಹಾರೀಸ್ ಅಝ್‌ಹರಿ ನೀರಾಜೆ, ಮನ್ಸೂರ್ ಆತೂರುಬೈಲು, ಅಬ್ದುಲ್ಲಾ ಮಸ್ಲಿಯಾರ್ ಕೆಮ್ಮಾರ, ಬದ್ರುದ್ದೀನ್ ಮುಸ್ಲಿಯಾರ್, ಎನ್.ಬಿ ದಾರಿಮಿ, ಬಿ.ಕೆ ಅಬ್ದುಲ್ ರಝಾಕ್ ಆತೂರು, ಮುಹಮ್ಮದ್ ರಫೀಕ್ ಗಂಡಿಬಾಗಿಲು, ಅಬ್ದುಲ್ ಅಝೀಝ್ ಪೆರಿಯಡ್ಕ, ಶರೀಫ್ ಪೆರಿಯಡ್ಕ, ನಾಸೀರ್ ಕಲಾಯಿ, ಇಸಾಕ್ ಬೊಳುಂಬುಡ, ಹನೀಫ್ ಜನಪ್ರಿಯ, ಅಝೀಝ್ ಹಾಲ್ಯಾರ, ಅಬ್ದುಲ್ ಅಝೀಝ್ ಪಲ್ತಾಡಿ, ಎಸ್‌ಕೆಎಸ್‌ಎಸ್‌ಎಫ್ ಕಾರ್ಯಕರ್ತರು, ಎಸ್‌ಕೆಎಸ್‌ಬಿವಿ ವಿದ್ಯಾರ್ಥಿಗಳು, ವಿಖಾಯ ಕಾರ್ಯಕರ್ತರು ಉಪಸ್ಥಿತರಿದ್ದರು. ಝಕರಿಯಾ ಮುಸ್ಲಿಯಾರ್ ಸ್ವಾಗತಿಸಿದರು. ರಫೀಕ್ ಗೊಳಿತ್ತಡಿ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here