ಆಲಂಕಾರು: ಆಲಂಕಾರಿನಲ್ಲಿ ಕಾರ್ಯಚರಿಸುತ್ತಿದ್ದ ಆಯುಷ್ಮಾನ್ ಆರೋಗ್ಯ ಉಪಕೇಂದ್ರದ ಚಿಕಿತ್ಸಾ ಕೊಠಡಿಯ ಬಾಗಿಲು ಮುರಿದ ಕಿಡಿಗೇಡಿಗಳು ಕೊಠಡಿಯನ್ನು ಅನೈತಿಕ ಚಟುವಟಿಕೆಗೆ ಬಳಸಿಕೊಂಡ ಘಟನೆ ನಡೆದಿದೆ.
ರಜಾ ದಿನವಾದ ಭಾನುವಾರ ಈ ಘಟನೆ ನಡೆದಿರುವುದಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಡಬ ಅರಕ್ಷಕ ಠಾಣೆಗೆ ದೂರು ನೀಡಿದ್ದಾರೆ.ಜು.22ರಂದು ಆಯುಷ್ಮಾನ್ ಆರೋಗ್ಯ ಕೇಂದ್ರದ ಚಿಕಿತ್ಸಾ ಕೊಠಡಿಯ ಶೌಚಾಲಯದ ಕಿಟಕಿಯ ಬಾಗಿಲು ಮುರಿದು ಕೊಠಡಿಯ ಒಳ ಪ್ರವೇಶಿಸಿ ಅನೈತಿಕ ಚಟುವಟಿಕೆಗೆ ಉಪಯೋಗಿಸಲಾಗಿದೆ.
ಇದಾದ ಬಳಿಕ ಜು.27ರಂದು ಕೊಠಡಿಯ ಹಿಂದಿನ ಬಾಗಿಲು ಮುರಿದು ಒಳ ಪ್ರವೇಶಿಸಿದ ದುಷ್ಕರ್ಮಿಗಳು ಶಾಲಾ ಸಮವಸ್ತ್ರವನ್ನು ಹರಿದು ನೆಲಕ್ಕೆ ಚಾಪೆಯಂತೆ ಬಳಸಿದ್ದು, ಬಳಕೆ ಮಾಡಿದ ಕಾಂಡೋಮ್ ಗಳನ್ನು ಹತ್ತಿರದಲ್ಲೇ ಎಸೆದು ಹೋಗಿದ್ದಾರೆ. ಶಾಲಾ ಮಕ್ಕಳಿಗೆ ಸರಕಾರ ನೀಡುತ್ತಿರುವ ಸಮವಸ್ತ್ರವನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಕ್ರೋಶಗಳು ವ್ಯಕ್ತವಾಗಿದ್ದು, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಘಟನೆ ಕುರಿತಂತೆ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿ ಸರೋಜಿನಿ ಮತ್ತು ಸಿ.ಎಚ್.ಒ ಬೀನ್ಸಿ ಅಂಟೋನಿ ಕಡಬ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲಾ, ಉಪಾಧ್ಯಕ್ಷ ರವಿಪೂಜಾರಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತ, ಕಾರ್ಯದರ್ಶಿ ವಸಂತ ಶೆಟ್ಟಿ ಹಾಗೂ ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತು ಮಾತನಾಡಿದ ಆಲಂಕಾರು ಆಯುಷ್ಮಾನ್ ಆರೋಗ್ಯ ಕೇಂದ್ರದ ಸಿ.ಎಚ್.ಓ ಬೀನ್ಸಿ ಅಂಟೋನಿ, ಜು.21ರಂದು ಅದಿತ್ಯವಾರ ರಜಾ ದಿನದಂದು ಕಿಡಿಗೇಡಿಗಳು ಆರೋಗ್ಯ ಕೇಂದ್ರದ ಶೌಚಾಲಯದ ಕಿಟಕಿಯ ಬಾಗಿಲು ಮುರಿದು ಒಳಪ್ರವೇಶಿಸಿ ಅನೈತಿಕ ಚಟುವಟಿಕೆ ಉಪಯೋಗಿಸಿರಬಹುದು.ನಂತರ ಜು.28ರಂದು ಅದಿತ್ಯವಾರ ಕೊಠಡಿಯ ಹಿಂಬಾಗಿಲಿನ ಮೂಲಕ ಒಳ ಪ್ರವೇಶಿಸಿ ಕಟ್ಟಡದ ದುರ್ಬಳಕೆ ಮಾಡಿದ್ದಾರೆ. ಈ ಬಗ್ಗೆ ಪೋಲಿಸ್ ಇಲಾಖೆಗೆ ದೂರನ್ನು ನೀಡಿದ್ದೇವೆ. ಇದೀಗ ಇಲ್ಲಿ ಕರ್ತವ್ಯ ನಿರ್ವಹಿಸಲು ಭಯದ ವಾತಾವರಣ ನಿರ್ಮಾಣವಾಗಿದೆ. ಕೀಡಿಗೇಡಿಗಳ ಈ ಕೃತ್ಯ ಬೇಸರದ ತಂದಿದೆ. ಈ ಬಗ್ಗೆ ಪೋಲಿಸ್ ಇಲಾಖೆಗೆ ದೂರನ್ನು ನೀಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಆಲಂಕಾರು ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ದುರುಪಯೋಗ ಪಡಿಸಿದ ಕೀಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಪೋಲಿಸ್ ಇಲಾಖೆಗೆ ಮನವಿ ಮಾಡಿದ್ದೇವೆ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಪೋಲಿಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲಾ ಆಗ್ರಹಿಸಿದ್ದಾರೆ.
ಆಲಂಕಾರು ಆಯುಷ್ಮಾನ್ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಆ.5 ರಂದು ಬೆಳಿಗ್ಗೆ ಆಲಂಕಾರು ಗ್ರಾ.ಪಂ ಗೆ ಬಂದು ಅನೈತಿಕ ಚಟುವಟಿಕೆ ನಡೆದ ಬಗ್ಗೆ ತಿಳಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚರ್ಚಿಸಿ ಸಂಬಂಧ ಪಟ್ಟ ಇಲಾಖೆಗೆ ಮೌಖಿಕವಾಗಿ ದೂರನ್ನು ನೀಡಲಾಗಿದೆ. ಗ್ರಾ.ಪಂ ವತಿಯಿಂದ ಗ್ರಾ.ಪಂ ಉಪಾಧ್ಯಕ್ಷ ರವಿಪೂಜಾರಿ ಯವರ ನೇತೃತ್ವದಲ್ಲಿ ತಾತ್ಕಾಲಿಕವಾಗಿ ಕಿಟಕಿ ಮತ್ತು ಬಾಗಿಲನ್ನು ದುರಸ್ತಿ ಮಾಡಲಾಗಿದೆ.