ಪುತ್ತೂರು ಮೀನು ಮಾರ್ಕೆಟ್ ರಸ್ತೆಯ ಬದಿ ಅಪಾಯದ ಗುಂಡಿಗೆ ಬೀಳುತ್ತಿದೆ ವಾಹನಗಳು !

0

ಪುತ್ತೂರು: ನಗರಸಭೆ ವ್ಯಾಪ್ತಿಯ ಮೀನು ಮಾರ್ಕೆಟ್ ರಸ್ತೆಯ ಬದಿ ಯೂನಿಯನ್ ಕ್ಲಬ್ ಕಟ್ಟಡದ ಮುಂಭಾಗ ಅಪಾಯದ ಗುಂಡಿಗೆ ಅನೇಕ ವಾಹನಗಳು ಬೀಳುತ್ತಿರುವ ಘಟನೆ ನಡೆಯುತ್ತಿದೆ.


ಮೀನು ಮಾರ್ಕೆಟ್ ರಸ್ತೆಯ ಬಳಿ ಯೂನಿಯನ್ ಕ್ಲಬ್ ಕಟ್ಟಡದ ಮುಂಭಾಗ ಚರಂಡಿಯ ಸ್ಲಾಬ್ ಕಿತ್ತು ಹೋಗಿದ್ದು, ವಾಹನ ಚಾಲಕರಿಗೆ ಅರಿವಿಲ್ಲದೆ ಚಲಾಯಿಸಿದಾಗ ಒಡೆದ ಸ್ಲಾಬ್ ಗೆ ವಾಹನದ ಟಯರ್ ಸಿಕ್ಕಿ ಹಾಕಿಕೊಳ್ಳುತ್ತದೆ. ಆ.6ರಂದು ಆಟೋ ರಿಕ್ಷಾವೊಂದರ ಮುಂದಿನ ಟಯರ್ ಸ್ಲಾಬ್‌ನಲ್ಲಿ ಬಾಕಿಯಾಗಿ ಸಾರ್ವಜನಿಕರ ಪ್ರಯತ್ನದಿಂದಾಗಿ ಆಟೋ ರಿಕ್ಷಾವನ್ನು ಮೇಲೆತ್ತಲಾಗಿದೆ. ಇನ್ನು ಇದೇ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದು, ಅಪಾಯ ಸಂಭವಿಸುವ ಮುಂಚೆ ನಗರಸಭೆ ಎಚ್ಚೆತ್ತು ಸ್ಲಾಬ್ ಬದಲಾಯಿಸುವುದು ಉತ್ತಮ ಎಂದು ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬರುತ್ತಿವೆ.

LEAVE A REPLY

Please enter your comment!
Please enter your name here