ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಇತ್ತೀಚೆಗೆ ನಡೆದ ‘ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಸ್ಪರ್ಧೆ 2024 – 25’ ರಲ್ಲಿ
ಸಂತ ಫಿಲೋಮಿನಾ ಪ. ಪೂ ಕಾಲೇಜಿನ 7 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂದಿರುತ್ತಾರೆ.
ದ್ವಿತೀಯ ವಿಜ್ಞಾನ ವಿಭಾಗದ ನಂದನ್ ನಾಯ್ಕ್ 4 ಬೆಳ್ಳಿ, ಪ್ರಾರ್ಥನಾ ಬಿ 3 ಬೆಳ್ಳಿ, ಪ್ರಥಮ ವಿಜ್ಞಾನ ವಿಭಾಗದ ದಿಗಂತ್ ವಿ ಎಸ್ 3 ಚಿನ್ನ 2 ಬೆಳ್ಳಿ, ಅರ್ ಅಮನ್ ರಾಜ್ 4 ಬೆಳ್ಳಿ 1 ಕಂಚು, ಅನ್ವಿತ್ ರೈ 5 ಬೆಳ್ಳಿ, ಪ್ರಧಿ ಕ್ಲಾರೆ ಪಿಂಟೋ 3 ಚಿನ್ನ 2 ಬೆಳ್ಳಿ ಹಾಗೂ ಪ್ರಥಮ ವಾಣಿಜ್ಯ ವಿಭಾಗದ ತನುಶ್ರೀ ಎಸ್ ಗೌಡ 1 ಚಿನ್ನ 2 ಬೆಳ್ಳಿ ಪದಕವನ್ನು ಪಡೆದುಕೊಂಡು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ದ್ವಿತೀಯ ವಾಣಿಜ್ಯ ವಿಭಾಗದ ಸಿಂಚನ ಕೆ 2 ಬೆಳ್ಳಿ ಪದಕವನ್ನು ಪಡೆದುಕೊಂಡಿರುತ್ತಾರೆ.
ಇವರುಗಳಿಗೆ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ರೋಹಿತ್ ಪ್ರಕಾಶ್, ದೀಕ್ಷಿತ್ ರಾವ್ ಇವರು ತರಬೇತಿ ನೀಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.