ಹಿಂಬಡ್ತಿ ವಿರುದ್ಧ ಆ.12ರ ಬೆಂಗಳೂರು ಚಲೋ ಹೋರಾಟ- ಪ್ರಾಥಮಿಕ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಕೆ

0

ಪುತ್ತೂರು : ಪದವೀಧರ ಶಿಕ್ಷಕರಿಗೆ ಆದ ಅನ್ಯಾಯ ಹೋಗಲಾಡಿಸಿ 2016ಕ್ಕೂ ಮೊದಲು ನೇಮಕವಾದ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ಪದನಾಮೀಕರಿಸಬೇಕು ಎಂದು ಆಗ್ರಹಿಸಿ ಆ.12 ರಂದು ಬೆಂಗಳೂರು ಚಲೋ ಹೋರಾಟದ ಭಾಗವಾಗಿ ಆ.7 ರಂದು ಪುತ್ತೂರಿನಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಲಾಗಿದೆ.


ಪುತ್ತೂರಿನಲ್ಲಿ ಆ.7ರಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಸದಸ್ಯರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ನೀಡಿದರು. ವೃಂದ ಮತ್ತು ನೇಮಕಾತಿ ಬದಲಾವಣೆಯಿಂದ ಬಂದ ಆದೇಶ ನಮ್ಮೆಲ್ಲರನ್ನು ಹಿಂಬಡ್ತಿಗೊಳಿಸಿ ಮಾನಸಿಕವಾಗಿ ನಮ್ಮನ್ನು ಕುಗ್ಗಿಸಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ನೇಮಕಾತಿ ಆದೇಶದಿಂದ ಬಹಳಷ್ಟು ತೊಂದರೆ ಆಗಿದೆ. ಹಾಗಾಗಿ ರಾಜ್ಯ ಸಂಘದ ನಿರ್ದೇಶನದಂತೆ ಬೆಂಗಳೂರು ಚಲೋ ಹೋರಾಟ ನಡೆಸಲಾಗುವುದು.ಆ.12ರಂದು ಎಲ್ಲಾ ಶಿಕ್ಷಕರು ರಜೆ ಮಾಡಿ ಬೆಂಗಳೂರು ಚಲೋ ಹೋರಾಟದಲ್ಲಿ ಭಾಗವಹಿಸಲಿದ್ದರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಸರಕಾರಿ ನೌಕರರ ಸಂಘದ ಅಶ್ರಫ್ ಮತ್ತು ತನುಜ ಅವರು ಮಾತನಾಡಿದರು. ಈ ಸಂದರ್ಭ ಶಿಕ್ಷಕರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಅವರು ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here