ಭ್ರಷ್ಟಾಚಾರ ಆರೋಪ:ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನೇತೃತ್ವದಲ್ಲಿ ಮೈಸೂರು ಚಲೋ ಪಾದಯಾತ್ರೆ-ಪುತ್ತೂರು,ಕಡಬದ ಸಾವಿರಾರು ಮಂದಿ ಭಾಗಿ

0

ಪುತ್ತೂರು: ಪುತ್ತೂರು:ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಸೇರಿದಂತೆ ಹಲವು ಹಗರಣಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ ಯಾತ್ರೆಯಲ್ಲಿ ಪುತ್ತೂರು,ಕಡಬ,ವಿಟ್ಲ,ಸುಳ್ಯದಿಂದಲೂ ಸಾವಿರಾರು ಮಂದಿ ಕಾರ್ಯಕರ್ತರು,ಪಕ್ಷದ ಪ್ರಮುಖರು,ಬೆಂಬಲಿಗರು ಪಾಲ್ಗೊಂಡಿದ್ದಾರೆ.


ಪುತ್ತೂರಿನಿಂದ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ, ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರ ನೇತೃತ್ವದಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಮೈಸೂರು ಚಲೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.


ಕರ್ನಾಟಕದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಬೇಕು-ಪುತ್ತಿಲ:
ಪಾದಯಾತ್ರೆಯ ಐದನೇ ದಿನವಾದ ಆ.7ರಂದು ಜಾಥಾದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಂಡ್ಯದಲ್ಲಿ ‘ಸುದ್ದಿ’ಯೊಂದಿಗೆ ಮಾತನಾಡಿದರು.ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಕರ್ನಾಟಕದಲ್ಲಿ ಆಡಳಿತ ಮಾಡುತ್ತಿರುವ ಸಿದ್ಧರಾಮಯ್ಯ ಸರಕಾರವನ್ನು ಪತನಗೊಳಿಸಬೇಕು.ಹಗರಣದಲ್ಲಿ ಭಾಗಿಯಾಗಿರುವ ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕೆನ್ನುವ ಆಗ್ರಹದೊಂದಿಗೆ ಬಿಜೆಪಿ,ಜೆಡಿಎಸ್ ಜಂಟಿಯಾಗಿ ಬೆಂಗಳೂರುನಿಂದ ಮೈಸೂರು ಪಾದಯಾತ್ರೆ ನಡೆಸುತ್ತಿದೆ.ಕಳೆದೊಂದು ವರ್ಷದಿಂದ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ನಂತರ ನಡೆದ ಅನೇಕ ಭ್ರಷ್ಟಾಚಾರದ ಆಡಳಿತ ವಿಶೇಷವಾಗಿ ವಾಲ್ಮೀಕಿ, ಮುಡಾ ಹಗರಣದಲ್ಲಿ ನೇರವಾಗಿ ಸಿದ್ದರಾಮಯ್ಯ, ಮತ್ತವರ ಸಚಿವರು ಪಾಲ್ಗೊಂಡಿರುವುದು ಜಗಜ್ಜಾಹೀರಾಗಿರುವ ಈ ಸಂದರ್ಭದಲ್ಲಿ ಮತ್ತೆ ಈ ರೀತಿಯ ಭ್ರಷ್ಟ ಸರಕಾರ ಕರ್ನಾಟದಕಲ್ಲಿರಬಾರದೆನ್ನುವ ಆಶಯದಲ್ಲಿ ರಾಜ್ಯದ ಜನತೆ ತೀರ್ಮಾನ ಮಾಡಿಬಿಟ್ಟಿದೆ.ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು, ಹಗರಣದಲ್ಲಿ ಶಾಮೀಲಾದವರನ್ನು ವಜಾಗೊಳಿಸಬೇಕು ಮತ್ತು ಕರ್ನಾಟಕದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಬೇಕು ಎನ್ನುವ ಆಗ್ರಹದೊಂದಿಗೆ ಈ ರೀತಿಯ ಜಾಥಾಗಳನ್ನು ನಡೆಸಲಾಗುತ್ತಿದೆ ಎಂದರು.


ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ-ಮಠಂದೂರು:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಕರ್ನಾಟಕದಲ್ಲಿ ಭ್ರಷ್ಟಾಚಾರ ಪ್ರತಿ ಇಲಾಖೆಯಲ್ಲಿ ಬಹುಷ:ಪ್ರತಿ ಮಂತ್ರಿಗಳಲ್ಲಿ ತಾಂಡವವಾಡುತ್ತಿದ್ದು ಇದಕ್ಕೆ ಇತಿಶ್ರೀ ಹಾಕುವ ಮೂಲಕ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ತೊಲಗಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಜಂಟಿ ನೇತೃತ್ವದಲ್ಲಿ ಬೆಂಗಳೂರುನಿಂದ ಮೈಸೂರು ತನಕ ಯಶಸ್ವಿ ಪಾದಯಾತ್ರೆ ನಡೆಯುತ್ತಿದ್ದು ನಾನೂ ಮೊನ್ನೆಯಿಂದಲೇ ಇದರಲ್ಲಿ ನಿರಂತರ ಭಾಗವಹಿಸಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಖಜಾನೆಯನ್ನು ಲೂಟಿ ಮಾಡುವ ಕೆಲಸ ಮಾಡುತ್ತಿದೆ.ನಾನು ಮಿಸ್ಟರ್ ಕ್ಲೀನ್, 40 ವರ್ಷಗಳಲ್ಲಿ ನನ್ನ ಶರ್ಟಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲವೆಂದು ಹೇಳಿದ ಸಿದ್ಧರಾಮಯ್ಯರವರು ತನ್ನ ಹೆಂಡ್ತಿ ಹೆಸರಲ್ಲಿ ಮುಡಾದಲ್ಲಿ ಭ್ರಷ್ಟಾಚಾರ ಮಾಡುವ ಕೆಲಸ ಮಾಡಿದ್ದಾರೆ.ಜೊತೆಗೆ ರಾಜ್ಯದಲ್ಲಿ ಪೊಲೀಸ್ ಅಽಕಾರಿಗಳು ರಾತ್ರಿ ಬೆಳಗಾಗುವಾಗ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಡೀ ಕರ್ನಾಟದಲ್ಲಿ ಪ್ರತಿ ಇಲಾಖೆಯಲ್ಲಿ, ಪ್ರತಿ ಮಂತ್ರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಇದಕ್ಕೆ ಇತಿಶ್ರೀ ಹಾಡಿ, ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ತೊಲಗಿಸಬೇಕಾಗಿದೆ ಎಂದು ಮಠಂದೂರು ಹೇಳಿದರು.


ಪುತ್ತೂರಿನಿಂದ 250 ಮಂದಿ-ಪಿ.ಜಿ.ಜಗನ್ನಿವಾಸ್ ರಾವ್:
ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷರೂ ಆಗಿರುವ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್ ಅವರು ಮಾತನಾಡಿ, ನಾವು ಪುತ್ತೂರಿನಿಂದ 250 ಮಂದಿ ಬಂದಿದ್ದೇವೆ.ರಾಜ್ಯದಲ್ಲಿರುವ ಭ್ರಷ್ಟ ಸರಕಾರವನ್ನು ತೊಲಗಿಸಬೇಕೆಂದು ನಡೆಯುತ್ತಿರುವ ಈ ಪಾದಯಾತ್ರೆಯಲ್ಲಿ ಜಿಲ್ಲೆಯಿಂದ 3ರಿಂದ 4 ಸಾವಿರ ಮಂದಿ ಪಾಲ್ಗೊಂಡಿದ್ದೇವೆ.ಹಗರಣಗಳಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.


ಮಹಿಳೆಯರೂ ಬಂದಿದ್ದೇವೆ-ವಿದ್ಯಾ ಗೌರಿ:
ರಾಜ್ಯದ ಕಾಂಗ್ರೆಸ್ ಸರಕಾರದ ಹಗರಣ ವಿರೋಧಿಸಿ,ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ನಾವು ಮಹಿಳೆಯರೂ ಬಂದಿದ್ದೇವೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿಯಲೇಬೇಕು ಎಂದು ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ ಹೇಳಿದರು.


ಗ್ಯಾರಂಟಿ ನೀಡದೆ ಸತಾಯಿಸುತ್ತಿರುವ ಸರಕಾರ-ವಿಶ್ವನಾಥ ಗೌಡ:
ನಗರಸಭೆಯ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು ಮಾತನಾಡಿ, ಕಳೆದ 70 ವರ್ಷಗಳಿಂದ ನಿರಂತರ ಲೂಟಿ ಮಾಡಿದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ನಡೆಯುತ್ತಿದೆ.ಬಡವರು,ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಎಲ್ಲ ಸಮುದಾಯಗಳ ಭೂಮಿಯನ್ನು ಹೊಡೆಯುವ ಹುನ್ನಾರದ ಕಾಂಗ್ರೆಸ್ ಸರಕಾರ ತೊಲಗಬೇಕು.ಗ್ಯಾರಂಟಿ ಆಶ್ವಾಸನೆಗಳನ್ನು ನೀಡಿ, ಇದೀಗ ಗ್ಯಾರಂಟಿಗಳನ್ನು ಕೊಡದೆ ಬಡವರನ್ನು ಸತಾಯಿಸುತ್ತಿರುವ ಸರಕಾರ ರಾಜ್ಯದಿಂದ ತೊಲಗಬೇಕು ಎಂದರು.


ರಾಜೀನಾಮೆ ಕೊಡೋ ತನಕ ಕದಲೋದಿಲ್ಲ-ರಾಜೇಶ್ ಬನ್ನೂರು:
ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಮಾತನಾಡಿ, ಸಿದ್ಧರಾಮಯ್ಯ ಸರಕಾರ ಭ್ರಷ್ಟ ಸರಕಾರವೆಂದು ಖ್ಯಾತಿ ಪಡೆದಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯರ ರಾಜೀನಾಮೆಗೆ ಆಗ್ರಹಿಸಿ ಯಶಸ್ವಿ ಪಾದಯಾತ್ರೆ ನಡೆಯುತ್ತಿದೆ.ಅವರು ರಾಜೀನಾಮೆ ಕೊಡಲೇಬೇಕು,ರಾಜೀನಾಮೆ ಕೊಡುವ ತನಕ ಕದಲುವ ಪ್ರಶ್ನೆಯೇ ಇಲ್ಲ.ಅವರು ರಾಜೀನಾಮೆ ಕೊಟ್ಟೇ ಕೊಡ್ತಾರೆ ಎಂದರು.


ಸಾವಿರಾರು ಮಂದಿ ಭಾಗಿ:
ಪುತ್ತೂರು,ಕಡಬ,ವಿಟ್ಲ, ಸುಳ್ಯ ಸೇರಿದಂತೆ ಈ ಭಾಗದಿಂದ ಸಾವಿರಾರು ಮಂದಿ ಮೈಸೂರು ಚಲೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.ಪುತ್ತೂರಿನಿಂದ ಮಾಜಿ ಶಾಸಕ ಸಂಜೀವ ಮಠಂದೂರು, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ನೂರಾರು ವಾಹನಗಳಲ್ಲಿ ಪಾದಯಾತ್ರೆಗೆ ತೆರಳಿದ್ದಾರೆ.ಸುಳ್ಯದಿಂದ ಶಾಸಕಿ ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ,ಕಡಬದಿಂದಲೂ ಪಕ್ಷದ ನಾಯಕರ ನೇತೃತ್ವದಲ್ಲಿ ಕಾರ್ಯಕರ್ತರು, ಪಕ್ಷದ ಪ್ರಮುಖರು ಪಾಲ್ಗೊಂಡಿದ್ದಾರೆ.ತಾ.ಪಂ.ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಸದಸ್ಯ ಉಮೇಶ್ ಶೆಣೈ,ಉಮೇಶ್ ಕೋಡಿಬೈಲು,ಪ್ರವೀಣ್ ಶೆಟ್ಟಿ ತಿಂಗಳಾಡಿ, ರೇಖನಾಥ ರೈ, ಅನಿಲ್ ತೆಂಕಿಲ, ರವಿ ರೈ ಮಠ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕರುಣಾಕರ ಎಲಿಯ,ರಾಜೇಶ್ ರೈ ಪರ್ಪುಂಜ, ಸುನಿಲ್ ರೈ ಪಾಲ್ತಾಡು,ರವಿ ಕೈಂದಾಡಿ,ವಸಂತಲಕ್ಷ್ಮೀ,ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ನಗರಸಭೆಯ ಬಿಜೆಪಿ ಸದಸ್ಯರು,ಮಾಜಿ ಸದಸ್ಯರು,ತಾ.ಪಂ.ಮಾಜಿ ಸದಸ್ಯರು,ಪಕ್ಷದ ವಿವಿಧ ಪದಾಽಕಾರಿಗಳು,ಗ್ರಾ.ಪಂ.ಜನಪ್ರತಿನಿಽಗಳು ಸೇರಿದಂತೆ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನೋಡಿ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್

https://youtu.be/mIPkx4J96sQ

LEAVE A REPLY

Please enter your comment!
Please enter your name here