ಪುತ್ತೂರು:ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಆ.8ರಂದು ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿಯವರು ತರಗತಿವಾರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಹೂವಿನ ಗಿಡಗಳನ್ನು ವಿತರಿಸಿ, ಗಿಡ ನೆಡುವುದರ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಸರ ಸಂರಕ್ಷಣೆಯ ಆವಶ್ಯಕತೆಯ ಬಗ್ಗೆ ವಿವರಿಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಪಿ.ಎಂ ಅಶ್ರಫ್ ಗಿಡಗಳನ್ನು ನೆಡುವುದರ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಲಾವಣ್ಯ ಪರಿಸರ ದಿನದ ಮಹತ್ವವನ್ನು ತಿಳಿಸಿದರು. ಆಯಿಷತ್ ರಿಫಾನ ಸ್ವಾಗತಿಸಿ, ಆಯಿಷತ್ ಶಾಯಿಮ ವಂದಿಸಿದರು. ಹೈನಾ ಫಾತಿಮ ಕಾರ‍್ಯಕ್ರಮ ನಿರೂಪಿಸಿದರು.ಶಾಲಾ ಪರಿಸರದ ಸಂಘದ ವಿದ್ಯಾಥಿನಿಯರು ಪರಿಸರದ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.