ಚದುರಂಗ ಸ್ಪರ್ಧೆ- ಸುದಾನ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ದ.ಕ.ಜಿ.ಪ ಹಿರಿಯ ಪ್ರಾ ಶಾಲೆ ಕೋಡಿಂಬಾಡಿ ಇವರ ಆಶ್ರಯದಲ್ಲಿ ಆಗಸ್ಟ್ ೭ರಂದು ನಡೆದ ಪುತ್ತೂರು ನಗರ ವಲಯ ಮಟ್ಟದ ಚದುರಂಗ ಸ್ಪರ್ಧೆಯಲ್ಲ್ಲಿ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿನಿಗಳಾದ ಅನಿಖಾ ಯು(೧೦ನೇ), ಜಸಿತ್ ಸಿ.ಎಸ್ (೧೦ನೇ), ಶೆಲ್ಡನ್ ಸಿಕ್ವೇರಾ (೯ನೇ), ವೈಭವ್ ಎಸ್.ಕೆ (೮ನೇ) ದತ್ತಚರಣ ಸಿ.ಎಸ್(೬ನೇ), ಸ್ವಯಂ ಶೆಟ್ಟಿ(೭ನೇ), ಶಮಿತಾ ಎಂ (೭ನೇ) ರವರು ವಿಜೇತರಾಗಿ ತಾಲೂಕು ಮಟ್ಟದ ಚದುರಂಗ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಇವರನ್ನು ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾನಾಗರಾಜ್ ಮತ್ತು ದೈಹಿಕ ಶಿಕ್ಷಕರು ಅಭಿನಂದಿಸಿ, ಶುಭಹಾರೈಸಿದ್ದಾರೆ.

LEAVE A REPLY

Please enter your comment!
Please enter your name here