ಗೊಂದಲಗಳಿಗೆ ಕಾರಣವಾದ ಹೊಸ ಶೈಕ್ಷಣಿಕ ಮಾರ್ಗಸೂಚಿ: ಕೂಡಲೇ ಮರು ಪರಿಶೀಲಿಸಿ- ಅಝೀಝ್ ಬಿ.ಕೆ ಆಗ್ರಹ

0

ಉಪ್ಪಿನಂಗಡಿ: ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶನಿವಾರದ ತರಗತಿ 8:50ರ ಬದಲು 7:50ಕ್ಕೆ ಪ್ರಾರಂಭಿಸಬೇಕೆಂಬ ಹೊಸ ಶೈಕ್ಷಣಿಕ ಮಾರ್ಗಸೂಚಿಯು ಅವೈಜ್ಞಾನಿಕ ಕ್ರಮವಾಗಿದೆ. ಈ ಅವಧಿಯಲ್ಲಿ ಮಕ್ಕಳ ಪೋಷಕರಿಗೆ ನಿತ್ಯ ಕೆಲಸದ ಒತ್ತಡ ಮತ್ತು ತೀವ್ರ ಮಳೆ, ಚಳಿಯಿಂದ ಮಕ್ಕಳಿಗೆ ಶೈಕ್ಷಣಿಕ ಪರಿಣಾಮ ಬೀರಬಹುದು. ಈ ಹೊತ್ತಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಮದ್ರಸದ ಕಲಿಕಾ ಸಮಯವಾಗಿರುತ್ತದೆ. ಒಟ್ಟಿನಲ್ಲಿ ಈ ಒಂದು ಅವೈಜ್ಞಾನಿಕ ಕ್ರಮದ ಬಗ್ಗೆ ಶಿಕ್ಷಣ ಸಚಿವರು ವಿಶೇಷ ಗಮನ ಹರಿಸಿ ಈ ಒಂದು ಆದೇಶವನ್ನು ಮರು ಪರಿಶೀಲನೆ ಮಾಡಿ ಹಿಂದಿನ ಕ್ರಮವನ್ನು ಮುಂದುವರಿಸಬೇಕೆಂದು ಜಿಲ್ಲಾ ಸಮನ್ವಯ ವೇದಿಕೆ ಮಾಧ್ಯಮ ಕಾರ್ಯದರ್ಶಿ ಅಝೀಝ್ ಬಿ.ಕೆ ಕೆಮ್ಮಾರ ಆಗ್ರಹಿಸಿದ್ದಾರೆ.

ಈ ರೀತಿಯ ಆದೇಶಗಳ ಹೊರತಾಗಿ ಮಕ್ಕಳಿಗೆ ಬೇರೆ ವಿನ್ಯಾಸದ ಅಥವಾ ಬಣ್ಣದ ಸಮವಸ್ತ್ರ ನೀಡುವ ಮೂಲಕ ಆಂಗ್ಲ ಶಾಲೆಯ ಮಕ್ಕಳಿಗಿಂತ ಯಾವುದೇ ಕೊರತೆ ಮಾಡದಂತೆ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಉತ್ತೇಜನ ನೀಡಬೇಕು. ಅಕ್ಷರ ದಾಸೋಹ ಸಿಬ್ಬಂದಿಗಳಿಗೆ ವೇತನ ಹೆಚ್ಚಿಸಬೇಕು. ವಿಶೇಷವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತರಗತಿ ಕೊಠಡಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಮಾನ್ಯ ಶಿಕ್ಷಣ ಸಚಿವರಿಗೆ ಮತ್ತು ಸರಕಾರಕ್ಕೆ ಒತ್ತಾಯಿಸಿದರು.
ನಮ್ಮ ಮೇಲಿನ ಅವಶ್ಯಕ ಬೇಡಿಕೆಗಳಿಗೆ ಅವಕಾಶ ಮಾಡಿಕೊಡಬೇಕು. ತರಗತಿಯ ಸಮಯ ಬದಲಾವಣೆಯಿಂದ ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಹಲವು ರೀತಿಯ ಗೊಂದಲ ಮತ್ತು ಸಮಸ್ಯೆಗಳು ಉಂಟಾಗಲಿದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಈ ಹಿಂದೆ ಜಾರಿಯಲ್ಲಿದ್ದ ವೇಳಾಪಟ್ಟಿಯನ್ನೇ ಮುಂದುವರಿಸಬೇಕೆಂದು ಸರಕಾರಕ್ಕೆ ಮತ್ತು ಶಿಕ್ಷಣ ಸಚಿವರಿಗೆ ಈ ಮೂಲಕ ವಿನಂತಿಸುತ್ತೇನೆ ಎಂದು ಅಝೀಝ್ ಬಿ.ಕೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here