ಆ.11: ಬನ್ನೂರು ಚರ್ಚ್ ಸಭಾಂಗಣದಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ಮಂಗಳೂರು ತಲಪಾಡಿ ದೇವಿನಗರದ ಶಾರದ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಲಯನ್ಸ್ ಜಿಲ್ಲೆ 317D, ರೀಜನ್ 4, ವಲಯ ಎರಡರ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್, ಬನ್ನೂರು ಸಂತ ಅಂತೋನಿ ಚರ್ಚ್ ನ ಕಥೋಲಿಕ್ ಸಭಾ ಮತ್ತು ಸ್ತ್ರೀ ಸಂಘಟನೆಯ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವು ಆ.11 ರಂದು ಬನ್ನೂರು ಚರ್ಚ್ ಸಭಾಂಗಣದಲ್ಲಿ ಜರಗಲಿದೆ.
ಶಿಬಿರದಲ್ಲಿ ನ್ಯಾಚುರೋಪತಿ ಹಾಗೂ ಯೋಗದ ಬಗ್ಗೆ ಜಾಗೃತಿ ಮತ್ತು ಆರೋಗ್ಯ ತಪಾಸಣೆ, ರಕ್ತದೊತ್ತಡ ತಪಾಸಣೆ, ಸಮಾಲೋಚನೆ ಮತ್ತು ಆಹಾರ ಕ್ರಮದ ಕುರಿತು ಸಲಹೆ, RBS ಹಾಗೂ HBA ತಪಾಸಣೆ, ಆರೋಗ್ಯ ಕುರಿತು ಸ್ಟಾಲ್ ನೆರವೇರಲಿದೆ ದೇವಿನಗರದ ಶಾರದ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ವರ್ಗ, ಪ್ರಾಂಶುಪಾಲರು, ಕಥೋಲಿಕ್ ಸಭಾ ಹಾಗೂ ಸ್ತ್ರೀ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here