ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಹಾಗೂ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕ ಪ್ರವೀಣ್ ಶಂಕರ್ ಭಟ್ ಹಾಗೂ ಸರ್ವೇಶ್ ಹೆಬ್ಬಾರ್ ಪೆರುವಾಜೆ ಅವರ ಪೌರೋಹಿತ್ಯದಲ್ಲಿ ಆ.9ರಂದು ನಾಗರ ಪಂಚಮಿ ನಡೆಯಿತು.
ನಾಗರ ಪಂಚಮಿ ಅಂಗವಾಗಿ ಬೆಳಿಗ್ಗೆ11 ರಿಂದ ನಾಗದೇವರಿಗೆ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ಹಾಗೂ ನಾಗತಂಬಿಲ ನಡೆಯಿತು ಬಳಿಕ ವಲ್ಮೀಕರೂಪಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಪೂಜೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು, ಮೊಕ್ತೇಸರರಾದ ಗಿರಿಜಾ ರೈ ,ಮೋಹನ್ ದಾಸ್ ರೈ ,ಸುಚೇತಾ ಜೆ.ಶೆಟ್ಟಿ,ಕಿಶೋರ್ ಕುಮಾರ್ ರೈ, ಸತೀಶ್ ರೈ ನಳೀಲು, ಅರುಣ್ ಕುಮಾರ್ ರೈ ನಳೀಲು, ಪ್ರವೀಣ್ ಕುಮಾರ್ ರೈ ,ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ವಿಲಾಸ್ ರೈ ಪಾಲ್ತಾಡು,ಹರಿಕೃಷ್ಣ ಭಟ್,ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಆ.10 ರಂದು ತಿಂಗಳ ಶುದ್ದ ಷಷ್ಠಿ ಪೂಜೆ,ಅನ್ನಸಂತರ್ಪಣೆ, ಭಜನೆ
ಆ.10 ರಂದು ಮಧ್ಯಾಹ್ನ ತಿಂಗಳ ಶುದ್ದ ಷಷ್ಠಿ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಶ್ರೀ ದುರ್ಗಾ ಭಜನಾ ತಂಡ ನಾಗನ ಮಜಲು ಪೆರುವಾಜೆ ಇವರಿಂದ ಭಜನೆ ನಡೆಯಲಿದೆ.ಬಳಿಕ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.