ಎಜ್ಯುಕೇಷನಲ್ ಎಕ್ಸೆಲೆನ್ಸ್ ಫೌಂಡೇಶನ್ ವತಿಯಿಂದ ಶೀಘ್ರದಲ್ಲೇ ವಿದ್ಯಾರ್ಥಿ ಆ್ಯಪ್ ಪ್ರೀ ಲಾಂಚ್ ಕಾರ್ಯಕ್ರಮ

0

ಹೊಸ ವಿದ್ಯಾರ್ಥಿ ನೋಂದಣಿ ಮತ್ತು ಕೌನ್ಸೆಲಿಂಗ್ ವ್ಯವಸ್ಥೆಯ ಆ್ಯಪ್ ಬಿಡುಗಡೆಗೆ ಸಜ್ಜಾಗಿದೆ. ಈ ಸಾಫ್ಟ್‌ವೇರ್ ಆಧಾರಿತ ಪ್ಲಾಟ್‌ಫಾರ್ಮ್ ವಿದ್ಯಾರ್ಥಿಗಳಿಗೆ ಸುಲಭವಾಗಿ ನೋಂದಾಯಿಸಲು ಮತ್ತು ಶೈಕ್ಷಣಿಕ ಮಾರ್ಗದರ್ಶನ ಹಾಗೂ ಆರ್ಥಿಕ ಸಹಕಾರವನ್ನು ಪಡೆಯಲು ಅವಕಾಶ ನೀಡುತ್ತದೆ. ನೂರು ಶೇಕಡ ಪಾರದರ್ಶಕತೆ ಇದರ ಪ್ರಮುಖ ವಿಶೇಷತೆಯಾಗಿದ್ದು, ಅದನ್ನು ದೃಢವಾದ ಡಿಜಿಟಲ್ ಟ್ರ್ಯಾಕಿಂಗ್ ಮೂಲಕ ಸಾಧಿಸಲಾಗುತ್ತದೆ. ಇಇಎಫ್ ಶೀಘ್ರದಲ್ಲೇ ಪುತ್ತೂರಿನಲ್ಲಿ ವಿದ್ಯಾರ್ಥಿ ಆ್ಯಪ್ ಪ್ರೀ-ಲಾಂಚ್ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಸದರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಇಇಎಫ್ ಒದಗಿಸುವ ಸೇವೆ ಮತ್ತು ಸಹಕಾರವನ್ನು ಪಡೆಯುವಂತೆ ಎಜುಕೇಷನಲ್ ಎಕ್ಸೆಲೆನ್ಸ್ ಫೌಂಡೇಶನ್ (ಇಇಎಫ್) ಪ್ರಕಟಣೆಯಲ್ಲಿ ಕೋರಿದೆ.

LEAVE A REPLY

Please enter your comment!
Please enter your name here