ಪುತ್ತೂರು: ಕೋಡಿಂಬಾಡಿಯ ವನಿತಾ ಸಮಾಜದ ವತಿಯಿಂದ ಗ್ರಾ.ಪಂ. ಸಭಾಂಗಣದಲ್ಲಿ ಆಟಿದ ಕೂಟ ಕಾರ್ಯಕ್ರಮ ಆ.11ರಂದು ನಡೆಯಿತು.
ವನಿತಾ ಸಮಾಜದ ಅಧ್ಯಕ್ಷೆ ರಶ್ಮಿ ನಿರಂಜನ ರೈ ಮಠಂತಬೆಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಯನಾ ಜಯಾನಂದ ಕೋಡಿ, ವನಿತಾ ಸಮಾಜದ ಗೌರವಾಧ್ಯಕ್ಷೆ ಪೂರ್ಣಿಮಾ ಎಸ್. ಶೆಟ್ಟಿ ಹೆಗ್ಡೆಹಿತ್ಲು ಮತ್ತು ಉಪಾಧ್ಯಕ್ಷೆ ರಾಧಿಕಾ ಆರ್. ಸಾಮಂತ್ ನೆಕ್ಕರಾಜೆ ಅವರು ಶುಭ ಹಾರೈಸಿದರು. ಹರಿಣಾಕ್ಷಿ ಆರ್. ಭಂಡಾರಿ ಮತ್ತು ಚಿತ್ರಾವತಿ ಆಚಾರ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸವಿತಾ ವಿಕ್ರಂ ಶೆಟ್ಟಿ ಅಂತರ ಸ್ವಾಗತಿಸಿದರು.
ದೇಜಮ್ಮ ಹೆಗ್ಡೆ ಮಿತ್ತಳಿಕೆ, ಸವಿತಾ ಚಿದಾನಂದ ರೈ ಪಣಿಪಾಲು ಮತ್ತು ಯಶೋದಾ ಯು.ಎಸ್.ರವರು ಅತಿಥಿಗಳನ್ನು ಸತ್ಕರಿಸಿದರು. ಕು. ಮಾನ್ವಿ ಎಸ್. ಶೆಟ್ಟಿ ಬರಮೇಲುರವರು ಆಟಿ ತಿಂಗಳಿನ ವಿಶೇಷತೆ ಮತ್ತು ತಿನಿಸುಗಳ ಬಗ್ಗೆ ಮಾತನಾಡಿದರು. ವನಿತಾ ಸಮಾಜದ ಕೋಶಾಧಿಕಾರಿ ಕುಸುಮ ವಿ. ರೈ ಸರೋಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿಳೆಯರು ವಿವಿಧ ರೀತಿಯ ಸುಮಾರು 34 ಬಗೆಯ ತಿನಿಸುಗಳನ್ನು ತಯಾರಿಸಿ ತಂದಿದ್ದರು. ಕಾರ್ಯದರ್ಶಿ ಪವಿತ್ರ ಸುರೇಶ್ ಶೆಟ್ಟಿ ಬರಮೇಲು ವಂದಿಸಿದರು.