ಪುತ್ತೂರು: ಬೊಳುವಾರು ಹೋಟೆಲ್ ಹರಿಪ್ರಸಾದ್ ಎದುರುಗಡೆ ಇರುವ ಸಂಕೀರ್ಣದಲ್ಲಿ ಕಳೆದ 20 ವರುಷಗಳಿಂದ ವ್ಯವಹರಿಸುತ್ತಿದ್ದ ಅಮಿತ್ ಚಾಟ್ಸ್ ಆ್ಯಂಡ್ ಜ್ಯೂಸ್ ಆ.14ರಂದು ಬೊಳುವಾರು ಮೋರ್ ಸೂಪರ್ ಮಾರ್ಕೆಟ್ ಬಳಿ ಇರುವ ಧ್ರುವ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಮಳಿಗೆಯಲ್ಲಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಅರ್ಚಕ ವಿ.ಎಸ್.ಭಟ್ ಧಾರ್ಮಿಕ ವಿಧಿವಿಧಾನ ನೆರೆವೇರಿಸಿದರು. ಮಾಲಕರಾದ ಶ್ರೀಧರ ಭಟ್ ಮತ್ತು ಶಾಂತಲಾ ಭಟ್ ದಂಪತಿ ಸ್ವಾಗತಿಸಿ ನಮ್ಮಲ್ಲಿ ಶುಚಿ ರುಚಿಯಾದ ಫ್ರೆಶ್ ಜ್ಯೂಸ್, ಚಾಟ್ಸ್ ಐಟಂಗಳಾದ ಮಸಾಲಪೂರಿ, ಪಾನಿಪೂರಿ, ದಹಿಪೂರಿ, ಆಲೂಪೂರಿ, ಬೇಲ್‌ಪೂರಿ ಇತ್ಯಾದಿಗಳು ಎಂದಿನಂತೆ ದೊರೆಯುತ್ತದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.