ಪುತ್ತೂರು: ರೆಂಜಲಾಡಿ ಬದ್ರಿಯಾ ಜುಮಾ ಮಸೀದಿ ಮತ್ತು ಮದ್ರಸ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಜಮಾಅತ್ ಅಧ್ಯಕ್ಷ ಆರ್.ಎಂ ಅಲಿ ಹಾಜಿ ದ್ವಜಾರೋಹಣ ನೆರವೇರಿಸಿದರು. ಸದರ್ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್ ದುಆ ನೇತೃತ್ವ ನೀಡಿದರು.
ಸಂದೇಶ ಭಾಷಣ ಮಾಡಿದ ಜಮಾಅತ್ ಖತೀಬ್ ಅಬ್ದುಲ್ ನಾಸಿರ್ ಫೈಝಿಯವರು ಸ್ವಾತಂತ್ರ್ಯ ಸಂಗ್ರಮದ ಹೋರಾಟದಲ್ಲಿ ಮಡಿದ ಉಲಮಾ ನಾಯಕರನ್ನು ಸ್ಮರಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನೂ ಸ್ಮರಿಸುವುದು ನಮ್ಮ ಬಾಧ್ಯತೆಯಾಗಿದೆ ಎಂದು ಹೇಳಿ ದೇಶ ಪ್ರೇಮದ ಬಗ್ಗೆ ಸವಿವಾರವಾಗಿ ವಿವರಿಸಿದರು. ನಂತರಪ್ರತಿಜ್ಞಾ ವಿಧಿ ಬೋಧಿಸಿದರು.
ಎಸ್.ಕೆ.ಎಸ್.ಬಿ.ವಿ ವತಿಯಿಂದ ನಡೆದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಮಾಅತ್ ಪ್ರಧಾನ ಕಾರ್ಯದರ್ಶಿ ಜೆ ಎಸ್ ಜೈನುದ್ದೀನ್ ಹಾಜಿ ಕಾರ್ಯಕ್ರಮ ನಿರೂಪಿಸಿದರು .
ಆರ್.ಐ.ಸಿ ಸಂಸ್ಥೆಯ ವಿದ್ಯಾರ್ಥಿಗಳು, ಜಮಾಅತ್ ಸಮಿತಿ ಪದಾಧಿಕಾರಿಗಳು, ಜಮಾಅತರು, ಮದ್ರಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆದರ್ಶ ಸೇವಾ ಸಂಘ ವತಿಯಿಂದ ಸಿಹಿ ತಿಂಡಿ, ಪಾನೀಯ ನೀಡಲಾಯಿತು.