ಸಹಕಾರ ಕ್ಷೇತ್ರದ ಸಾಧನೆಗಾಗಿ ಹೊಸಮಠ ಪ್ರಾ. ಕೃ.ಪ.ಸ.ಸಂಘಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಶಸ್ತಿ

0

ಕಡಬ: ಸಹಕಾರ ಕ್ಷೇತ್ರದ ವಿಶೇಷ ಸಾಧನೆಗಾಗಿ ಕಡಬ ತಾಲೂಕಿನ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಶಸ್ತಿ ಲಭಿಸಿದೆ. ಮಂಗಳೂರಿನಲ್ಲಿ ಆ.14ರಂದು ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿಗಳು ಹಾಗೂ ನಿರ್ದೇಶಕರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.


ಕಳೆದ 104 ವರ್ಷಗಳಿಂದ ಹಿರಿಯ ಸಹಕಾರಿಗಳ ಮಾರ್ಗದರ್ಶನದಿಂದ ಮುನ್ನಡೆಯುತ್ತಿರುವ ಹೊಸಮಠ ಪ್ರಾ.ಕೃ.ಪ.ಸ.ಸಂಘವು ಕಳೆದ ಜೂನ್16ರಿಂದ ಸುಂದರವಾದ ಹೊಸ ಕಟ್ಟಡ ‘ಸಮೃದ್ಧಿ ಸಹಕಾರ ಸೌಧದಲ್ಲಿ ಕಾರ್ಯಾಚರಿಸುತ್ತಿದೆ. ವರದಿ ವರ್ಷದಲ್ಲಿ ದಾಖಲೆಯ ಪ್ರಗತಿಯನ್ನು ಸಾಧಿಸಿದ್ದು ವರದಿ ವರ್ಷದಲ್ಲಿ ಸಂಘವು ರೂ. 14.70 ಕೋಟಿ ಠೇವಣಿ ಹೊಂದಿದೆ. ರೂ. 5.65 ಕೋಟಿ ಪಾಲು ಬಂಡವಾಳ, ರೂ. 44.61 ಕೋಟಿ ಸಾಲ ಹೊರ ಬಾಕಿ ಇದ್ದು, ವಷಾಂತ್ಯಕ್ಕೆ ಶೇ. 96.14 ಸಾಲ ಮರುಪಾವತಿ ಆಗಿರುತ್ತದೆ. ವರದಿ ಸಾಲಿನಲ್ಲಿ ದಾಖಲೆಯ ರೂ. 1.47 ಕೋಟಿ ಲಾಭ ಗಳಿಸಿ ಸಂಘ ಅದ್ವಿತೀಯ ಸಾಧನೆ ಮಾಡಿದೆ. ಕೇವಲ ಎರಡು ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿರುವ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಸತತ ಕಳೆದ ಐದು ವರ್ಷಗಳಿಂದ ಒಂದು ಕೋಟಿಗಿಂತಲೂ ಹೆಚ್ಚಿನ ಲಾಭಗಳಿಸಿರುವುದು ಸಂಘದ ಅದ್ಭುತ ಸಾಧನೆಯಾಗಿದೆ.

ವ್ಯವಹಾರ:2024-25ನೇ ಸಾಲಿನಲ್ಲಿ 969 ಮಂದಿ ರೈತರ 1435 ಪ್ರಪೋಸಲ್ ರೂ. 42,38,465-88 ಪಾವತಿಸಲಾಗಿದೆ. ವರದಿ ವರ್ಷದ ಆರಂಭದಲ್ಲಿ ರೂ. 14,00,92,642-21 ಠೇವಣಿ ಇದ್ದು. ವಷಾಂತ್ಯಕ್ಕೆ 15.40 ಕೋಟಿ ಠೇವಣಿ ಸಂಗ್ರಹಣಾ ಗುರಿ ನಿಗದಿಪಡಿಸಿದ್ದು, ವಷಾಂತ್ಯಕ್ಕೆ ರೂ. 14,70,54,767-40 ಠೇವಣಿ ಜಮೆಯಾಗಿರುತ್ತದೆ.

ರೈತರ ಅಭಿವೃದ್ದಿಗೆ ನಿರಂತರ ಪ್ರಯತ್ನ-ಜಯಚಂದ್ರ ರೈ
ಈ ಬಗ್ಗೆ ಸಂಘದ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ ಅವರು ಮಾತನಾಡಿ, ಸಂಘದ ಸಾಧನೆಯನ್ನು ಗುರುತಿಸಿ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಗೌರವ ಪ್ರಶಸ್ತಿಯನ್ನು ಪಡೆದಿದ್ದೇವೆ. ನಾವು ಅಧಿಕಾರ ಪಡೆದ ಬಳಿಕ ಸಂಘವನ್ನು ಲಾಭದಲ್ಲಿ ಕೊಂಡೊಯ್ದುದ್ದೇವೆ, ಸಂಘವು ಲಾಭ ಪಡೆಯುವುದರೊಂದಿಗೆ ಸಂಘದ ಸದಸ್ಯರ ಮೇಲೆ ನಮಗೆ ಕಾಳಜಿ ಇದ್ದು ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಸುಲಭ ರೀತಿಯಲ್ಲಿ ಸದಸ್ಯರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ, ಮುಂದೆಯೂ ಮಾಡಲಿದ್ದು ಈಗ ಹೊಸ ಕಟ್ಟಡ ಆಗಿರುವುದರಿಂದ ಸಂಘದಲ್ಲಿ ಕೃಷಿ ಸಲಕರಣೆಗಳ ಮಾರಾಟ, ಗೊಬ್ಬರ ಮಾರಾಟದ ಯೋಜನೆಯನ್ನು ಪುನಃ ಪ್ರಾರಂಬಿಸಲಿದ್ದೇವೆ. ಒಟ್ಟಿನಲ್ಲಿ ಸಂಘದ ಅಭಿವೃದ್ದಿ ಮತ್ತು ಸದಸ್ಯರ ಅನುಕೂಲಕ್ಕೆ ನಮ್ಮ ಪ್ರಯತ್ನ ನಿರಂತರವಾಗಿ ಸಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಯಚಂದ್ರ ರೈ ಅಧ್ಯಕ್ಷರು

ಎಲ್ಲರ ಸಹಕಾರದಿಂದ ಸಂಘ ಅಭಿವೃದ್ದಿಯಾಗಿದೆ-ಸೋಮಸುಂದರ ಶೆಟ್ಟಿ
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೋಮಸುಂದರ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿ, ಸಂಘದ ವಿಶೇಷ ಸಾಧನೆಯನ್ನು ಕೇಂದ್ರ ಸಹಕಾರಿ ಬ್ಯಾಂಕ್ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಸಂಘದ ಅಭಿವೃದ್ದಿಯಲ್ಲಿ ಸದಸ್ಯರು, ಆಡಳಿತ ಮಂಡಳಿ, ಸಿಬ್ಬಂದಿಗಳ ಪಾತ್ರ ಮುಖ್ಯವಾಗಿದ್ದು ಎಲ್ಲರ ಸಹಕಾರದಿಂದಲೇ ಸಂಘ ಅಭಿವೃದ್ದಿ ಪಥದಲ್ಲಿ ಸಾಗಿದೆ. ಸಂಘವು ಸುಸಜ್ಜಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಸದಸ್ಯರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡಲು ನಾವು ಪ್ರಾಮಾಣಿಕ ಪ್ರಯತ್ನಪಡುತ್ತೇವೆ ಎಂದು ಅವರು ಹೇಳಿದ್ದಾರೆ.

ಸೋಮಸುಂದರ ಶೆಟ್ಟಿ ಸಿ.ಇ.ಒ

LEAVE A REPLY

Please enter your comment!
Please enter your name here