ಪುತ್ತೂರು: ನರಿಮೊಗರು ಗ್ರಾಮದ ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾಧ್ಯಕ್ಷ ಜಯರಾಮ ಕೆದಿಲಾಯ ಶಿಬರರವರು ದ್ವಜಾರೋಹಣಗೈದರು.
ಸಭಾ ಕಾರ್ಯಕ್ರಮದಲ್ಲಿ ಶಾಲಾಧ್ಯಕ್ಷರು ಮಾತನಾಡುತ್ತಾ ಸ್ವಾತಂತ್ರ್ಯ ಎಂಬುದು ಜವಾಬ್ದಾರಿ ಇದ್ದಾಗ ಮಾತ್ರ ಅನ್ವಯವಾಗುತ್ತದೆ. ಸ್ವಾತಂತ್ರ್ಯ ನಂತರ ಎಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದಿದ್ದೇವೆ ಎನ್ನುವುದು ಮುಖ್ಯ. ನಮ್ಮ ಸಂಪಾದನೆ ನಮ್ಮ ಗೌರವ ವಾಗಬೇಕೆ ಹೊರತು ದರ್ಮಕ್ಕೆ ಸಿಗುವಂತದ್ದು ಬೇಡ. ಇಂದಿನ ಅಭಿವೃದ್ಧಿಯ ಚುಕ್ಕಾಣಿ ಹಿಡಿದ ಮೋದಿಜಿಯವರ ಹಣ ರಹಿತ ವ್ಯವಹಾರವನ್ನು ಶ್ಲಾಘಿಸಿ ಸ್ವಾತಂತ್ರ್ಯ ದಿವಸದ ಶುಭಾಶಯ ತಿಳಿಸಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯ ಹರೀಶ್ ಪುತ್ತೂರಾಯ ಮಾತನಾಡಿ ಇಂದಿನ ಮಕ್ಕಳಲ್ಲಿ ಸ್ವಾತಂತ್ರ್ಯ ಎಂಬುದರ ಬಗೆಗಿನ ಅರ್ಥ ಮತ್ತು ಅದರಲ್ಲಿ ಹೋರಾಡಿದವರ ಬಗ್ಗೆ ನಿಜವಾದ ಅರಿವು ಮೂಡಿ ಮಾತನಾಡಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ಶಾಲಾ ಸಂಚಾಲಕ ಭಾಸ್ಕರ ಆಚಾರ್ ಮಾತನಾಡಿ ಭಾರತ ಎಂಬ ಶಬ್ದ ಸ್ವತಂತ್ರ ನಂತರ ಬಂದದ್ದಲ್ಲ ಅದು ಸ್ವತಂತ್ರ ಪೂರ್ವ ಪುರಾಣಗಳಲ್ಲೇ ಇದ್ದು ಅದರ ಧ್ವಜವೂ ಆಗಿನ ಸಂದರ್ಭ ದಲ್ಲಿಯೇ ಇದ್ದೂ ಕೃಷ್ಣನೇ ದ್ವಜವನ್ನು ಹಿಡಿದದ್ದು ಮಹಾಭಾರತದಲ್ಲಿ ಕಾಣಬಹುದು ಎಂದರು.
ಶಿಕ್ಷಕರಾದ ಹರೀಶ್ ಹಾಗೂ ಪ್ರಶಾಂತಿ ಹಾಗೂ ವಿದ್ಯಾರ್ಥಿಗಳಾದ ಜ್ಞಾನ ರೈ, ವಿಧಾತ್ ರೈ, ಸರ್ವದ್ ,ಅಕ್ಷರ ಸ್ವಾತಂತ್ರ ಹೋರಾಟಗಾರರ ಬಗ್ಗೆ ಮಾತನಾಡಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ , ಆಡಳಿತ ಮಂಡಳಿಯ ಸದಸ್ಯ ಎಸ್. ಜಿ.ಕೃಷ್ಣ, ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಜಯಮಾಲಾ ವಿ ಎನ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸಾಯಿ ಸಂಚಿತ್, ಪ್ರಥಮ್ ಪ್ರಾರ್ಥಿಸಿದರು.ಶಿಕ್ಷಕಿಯ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ಸುಕನ್ಯಾ ವಂದಿಸಿದರು.