ಪುತ್ತೂರು: ಕೋಲ್ಕತ್ತಾದ ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲೆ ನಡೆದಿರುವ ಅತ್ಯಾಚಾರ, ಕೊಲೆ ಮತ್ತು ಆಸ್ಪತ್ರೆ ಮೇಲಿನ ದಾಳಿಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ಕೊಟ್ಟಿರುವ ದೇಶವ್ಯಾಪಿ ವೈದ್ಯಕೀಯ ಸೇವೆ ಬಂದ್ ನಡೆಸಿ ಪ್ರತಿಭಟನೆಗೆ ಪುತ್ತೂರಿನಲ್ಲಿಯೂ ವ್ಯಾಪಕ ಬೆಂಬಲ ದೊರೆತಿದೆ.
ಪುತ್ತೂರಿನ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ ಗಳು ತುರ್ತು ಸೇವೆ ಹೊರತುಪಡಿಸಿ ಎಲ್ಲಾ ರೀತಿಯ ಹೊರರೋಗಿ ವಿಭಾಗಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಸಾಥ್ ನೀಡಿವೆ.
ಹೆಚ್ಚಿನ ಆಸ್ಪತ್ರೆಗಳಲ್ಲಿ ಕೇವಲ ತುರ್ತು ಚಿಕಿತ್ಸೆ ವಿಭಾಗ ಹೊರತುಪಡಿಸಿ ಸಿಬಂದಿಗಳ ಸಂಖ್ಯೆಯೂ ವಿರಳವಾಗಿತ್ತು.
ಹೊರರೋಗಿ ವಿಭಾಗಕ್ಕೆ ಬಂದ ರೋಗಿಗಳನ್ನು ತುರ್ತು ಚಿಕಿತ್ಸೆ ಬೇಕಿದ್ದಲ್ಲಿ ಮಾತ್ರ ವೈದ್ಯರು ಪರಿಶೀಲಿಸಿ ಚಿಕಿತ್ಸೆ ನೀಡುತ್ತಿದ್ದರು.