ಬಡಗನ್ನೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಡುಮಲೆ ಇದರ ವತಿಯಿಂದ ಪ್ರಥಮ ವರ್ಷದ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮವು ಅ.18ರಂದು ಪೂರ್ವಾಹ್ನ ಗಂ.9ರಿಂದ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವುದು. ಕಾರ್ಯಕ್ರಮವನ್ನು ನಿಟ್ಟೆಗುತ್ತು, ಪೇರಾಲು ಬಲರಾಜ್ ಶೆಟ್ಟಿ ಉದ್ಘಾಟಿನೆ ಮಾಡಲಿದ್ದಾರೆ. ಕಾರ್ಯಕ್ರಮವು ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಪದಡ್ಕ ಅಧ್ಯಕ್ಷತೆ ನಡೆಯಲಿದೆ. ಗೌರವ ಉಪಸ್ಥಿತರಾಗಿ ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೆವಕಜೆ, ಡಾ.ಗುರುಸಂದೇಶ ಭಂಡಾರಿ ಪೇರಾಲು, ಹಾಗೂ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತಾಧಿಕಾರಿ ರಾಧಾಕೃಷ್ಣ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಗಂಗಾಧರ ರೈ ಮೇಗಿನಮನೆ ಭಾಗವಹಿಸಲಿದ್ದಾರೆ.
ಶಾಲ ಮಕ್ಕಳಿಗೆ ಹಾಳೆ ಓಟ, ಹಿಮ್ಮುಖ ಓಟ, ಗೂಟ ಸುತ್ತು, ಕಂಬಳ ಓಟ ಓಟ ಮೂರು ಕಾಲಿನ ಓಟ ನಡೆಯಲಿದೆ. ಪುರುಷರಿಗೆ ಹಾಳೆ ಓಟ, ಹಿಮ್ಮುಖ ಓಟ, ಗೂಟ ಸುತ್ತು, ಕಂಬಳ ಓಟ ಓಟ, ಮೂರು ಕಾಲಿನ ಓಟ ಹಾಗೂ ಮಹಿಳೆಯರಿಗೆ ಹಾಳೆ ಓಟ, ಹಿಮ್ಮುಖ ಓಟ, ಗೂಟ ಸುತ್ತು ಡಾರ್ಜ್ಬ್ ಬಾಲ್, ತ್ರೋ ಬಾಲ್, ಮೂರು ಕಾಲಿನ ಓಟ ಹಗ್ಗಜಗ್ಗಾಟ ಹಾಗೂ ಸಾರ್ವಜನಿಕರಿಗೆ ವಿಶೇಷವಾಗಿ ನಿಧಿ ಶೋಧನೆ ಸ್ಪರ್ಧೆ ನಡೆಯಲಿದೆ.
ತುಳು ಚಿತ್ರ ನಟ- ನಟಿಯರು ಭಾಗವಹಿಸಲಿದ್ದು, ಕಂಬಳ ಕೋಣಗಳ ಪ್ರದರ್ಶನ ನಡೆಯಲಿದೆ.
ಸಮಾರೋಪ ಸಮಾರಂಭವು ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸತೀಶ್ ರೈ ಕಟ್ಟಾವು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗೌರವ ಉಪಸ್ಥಿತರಾಗಿ, ದ.ಕ.ಜಿಲ್ಲೆ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ ಕುಮಾರ್ ರೈ, ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಪಂಜ ಅರಣ್ಯಾಧಿಕಾರಿ ಸಂತೋಷ್ ರೈ ಸಬ್ರುಕಜೆ ಭಾಗವಹಿಸಲಿದ್ದಾರೆ.