ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಕಾಣಿಯೂರು: ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದ ವತಿಯಿಂದ 8ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಆ 17ರಂದು ನಡೆಯಿತು. ಅರ್ಚಕ ಚಿದಾನಂದ ಉಪಾಧ್ಯಾಯ ಕಲ್ಪಡ ಪೂಜಾ ವಿಧಿ, ವಿಧಾನ ನೆರವೇರಿಸಿದರು. ಬೆಳಿಗ್ಗೆ ಪೂಜೆ ಪ್ರಾರಂಭಗೊಂಡು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಲೋಕೇಶ್ ಅಗಳಿ, ಗೌರವಾಧ್ಯಕ್ಷೆ ರೋಹಿಣಿ ಅಬೀರ, ಕಾರ್ಯದರ್ಶಿ ನಾಗವೇಣಿ ಬೆದ್ರಾಜೆ ಹಾಗು ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here