ಕಾೖಮಣ ಕೃಷ್ಣಾಪುರ ಜೋಕಾಲಿ ಬಳಗದಿಂದ ಕೆಸರು ಗದ್ದೆ ಕ್ರೀಡಾಕೂಟ

0

ಕಾಣಿಯೂರು: ನಮ್ಮ ಸಂಪ್ರದಾಯಗಳನ್ನು ಜೀವಂತವಾಗಿಡಲು ಮತ್ತು ಅದರ ಬಗ್ಗೆ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕೆಸರು ಗದ್ದೆ ಕ್ರೀಡಾಕೂಟ ಸಹಕಾರಿ ಎಂದು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಈಶ್ವರಚಂದ್ರ ಭಟ್ ಹೇಳಿದರು. ಅವರು ಕಾೖಮಣ ಕೃಷ್ಣಾಪುರ ಜೋಕಾಲಿ ಬಳಗದ ವತಿಯಿಂದ ಬಳಗದ ಪೂರ್ವ ಅಧ್ಯಕ್ಷ ದಿವಾಕರ ಗೌಡ ಮುಂಡಾಲರವರ ಸ್ಮರಣಾರ್ಥ ಆ.18ರಂದು ಪಲಸತ್ತಡಿಯಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಕೃಷಿ ಕ್ಷೇತ್ರಗಳಲ್ಲಿ ಕೆಲಸದ ಜೊತೆಗೆ ಸಾಂಪ್ರದಾಯಿಕ ಆಟ, ಸಾಂಪ್ರದಾಯಿಕ ಆಹಾರವನ್ನು ಸವಿಯುವ ಮೂಲಕ ಹಿರಿಯರು ಉತ್ತಮ ಆರೋಗ್ಯದಿಂದಿರುತ್ತಿದ್ದರು ಎಂದರು.
ಸಭೆಯ ಅಧ್ಯಕ್ಷತೆಯನ್ನು ಬೆಳಂದೂರು ಗ್ರಾ.ಪಂ.ಅಧ್ಯಕ್ಷೆ ಪಾರ್ವತಿ ಮರಕ್ಕಡ ವಹಿಸಿದ್ದರು. ಜೋಕಾಲಿ ಬಳಗದ ಗೌರವಾಧ್ಯಕ್ಷ ಸೀತಾರಾಮ ಗೌಡ ಮುಂಡಾಲ ಶುಭ ಹಾರೈಸಿದರು. ಬಳಗದ ಗೌರವಾಧ್ಯಕ್ಷರು, ಸ್ಥಳದಾನಿ ಪುಟ್ಟಣ್ಣ ಗೌಡ ಪಲಸತ್ತಡಿ, ಗುತ್ತಿಗೆದಾರ ಜಿನ್ನಪ್ಪ ಗೌಡ ಅಂಕಜಾಲು, ಕೆಲಂಬಿರಿ ಯುವಶಕ್ತಿ ಬಳಗದ ಅಧ್ಯಕ್ಷ ರತನ್ ರೈ ಬರೆಪ್ಪಾಡಿ, ಜೋಕಾಲಿ ಬಳಗದ ಅಧ್ಯಕ್ಷ ಚಂದ್ರಶೇಖರ ಮುಂಡಾಲ, ಆನಂದ ಗೌಡ ಮುಂಡಾಲ, ಸುಂದರಿ ಮುಂಡಾಲ ಉಪಸ್ಥಿತರಿದ್ದರು. ಬಳಗದ ಮಾಜಿ ಅಧ್ಯಕ್ಷ ವಿಜೇತ್ ಮುಂಡಾಲ ಸ್ವಾಗತಿಸಿ, ಕಾರ್ಯದರ್ಶಿ ಪವನ್ ರಾಜ್ ಮರಕ್ಕಡ ವಂದಿಸಿದರು. ಅಕ್ಷಯ್ ಕುಂಡಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

LEAVE A REPLY

Please enter your comment!
Please enter your name here