ವಿಷಮುಕ್ತ ಭೂಮಿ, ರೋಗಮುಕ್ತ ಭಾರತ  ಧ್ಯೇಯವಾಕ್ಯ- ಸಾವಯವ ಗೊಬ್ಬರ, ಕೃಷಿ ಔಷಧಿಯ ಮಾರಾಟ ಕೇಂದ್ರ ’ಜಗದಂಬಾ ಎಂಟರ್‌ಪ್ರೈಸಸ್’ ಉದ್ಘಾಟನೆ

0

ಪುತ್ತೂರು: ಕೃಷಿಯಲ್ಲಿ ಪ್ರಮುಖವಾಗಿ ಬಾಧಿಸುವ ಎಲೆ ಚುಕ್ಕಿ ರೋಗ, ಕುಂಟುಸಿರಿ, ಫಂಗಸ್, ಬೇರು ಹುಳ ರೋಗಕ್ಕೆ ಉತ್ತಮ ಫಲಿತಾಂಶ ನೀಡುವ ಮೂಲಕ ಉತ್ತಮ ಬೆಳವಣಿಗೆ ಮತ್ತು ಉತ್ತಮ ಇಳುವರಿಗೆ ಜಿಲ್ಲೆಯಲ್ಲೇ ಅಡಿಕೆ ಬೆಳೆಗಾರರ ಮನಗೆದ್ದಿರುವ (ಐಸಿಎಆರ್) ಭಾರತೀಯ ಕೃಷಿ ಮತ್ತು ಸಂಶೋಧನಾ ಮಂಡಳಿಯಿಂದ ಅಂತರರಾಷ್ಟ್ರೀಯ ಮಟ್ಟದ ಪೇಟೆಂಟ್ ಪಡೆದಿರುವ ವಿವಾ ಕಿಸಾನ್ ಕಿಂಗ್ ಸಾವಯವ ಗೊಬ್ಬರದ ಪುತ್ತೂರು ಮಾರಾಟ ಕೇಂದ್ರವಾಗಿ ಇತ್ತೀಚೆಗಷ್ಟೆ ಅನಾವರಣಗೊಂಡ ಜಗದಂಬಾ ಎಂಟರ್‌ಪ್ರೈಸಸ್ ಸಂಸ್ಥೆಯ ಪ್ರಧಾನ ಕಚೇರಿಯು ಡಾ.ಪಿ.ಬಿ.ರೈ ಪ್ರತಿಷ್ಠಾನ ಕೆಯ್ಯೂರು ಮತ್ತು ಪವಿತ್ರ ವಿವಾ ಎಂಟರ್‌ಪ್ರೈಸಸ್ ನೆಲ್ಯಾಡಿ ಇದರ ಜಂಟಿ ಆಶ್ರಯದಲ್ಲಿ ಆ.18ರಂದು ಕೋಣಾಜೆಕಲ್ಲು ಸಿದ್ಧಾಶ್ರಮ ಮಠದ ಶ್ರೀ ಗಣೇಶ್ ಗುರೂಜಿ ಅವರ ಅನುಗ್ರಹದೊಂದಿಗೆ ಪುತ್ತೂರು ಎಪಿಎಂಸಿ ರಸ್ತೆಯ ಬಾಪ್ ಬೆನ್ಸ್ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನೆಗೊಂಡಿತು. ನೂಜಿ ತರವಾಡು ಮನೆಯ ಪ್ರಭಾ ಎಸ್ ರೈ ಮತ್ತು ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ಸಂಸ್ಥೆಯನ್ನು ಉದ್ಘಾಟಿಸಿದರು. ಆಗಮಿಸಿದ ಅತಿಥಿಗಳು ಶುಭ ಹಾರೈಸಿದರು.


ವರ್ಷದಲ್ಲಿ ಮೂರು ಬಾರಿ ಬಳಸಿ ನೋಡಿ ಫಲಿತಾಂಶ ಸಿಗಲಿದೆ:
ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ವಿವಾ ಕಿಸಾನ್ ಗೊಬ್ಬರವು ಹೌದು ಔಷಧಿಯೂ ಹೌದು. ನಾವು ಕೂಡಾ ಇದನ್ನು ಉಪಯೋಗಿಸಿದ್ದೇವೆ. ಮಣ್ಣು ಕೂಡಾ ಒಳ್ಳೆಯ ಫಲಿತಾಂಶ ನೀಡಿದೆ. ಇದನ್ನು ವರ್ಷದಲ್ಲಿ ಮೂರು ಸಾರಿ ಬಳಸಿ ನೋಡಿ. ಆಗ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ. ಹಿಂದೆ ಹಟ್ಟಿ ಗೊಬ್ಬರ ಬಳಸಿದಂತೆ ಇದು ಕೂಡಾ ಉತ್ತಮ ಫಲಿತಾಂಶ ನೀಡುತ್ತದೆ ಎಂದ ಅವರು ನೂತನವಾಗಿ ಉದ್ಘಾಟನೆಗೊಂಡ ಜಗದಂಬಾ ಎಂಟರ್‌ಪ್ರೈಸಸ್‌ನಿಂದ ಅಡಿಕೆ ಕೃಷಿಕರಿಗೆ ಉತ್ತಮ ಫಲಿತಾಂಶ ಸಿಗಲಿ ಎಂದರು.


ಅಡಿಕೆ ತೋಟದವರಿಗೆ ವರದಾನವಾಗಿದೆ:
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ದಂಬೆಕಾನ ಸದಾಶಿವ ರೈ ಅವರ ಮಾಲಕತ್ವದಲ್ಲಿ ಜಗದಂಬಾ ಎಂಟರ್‌ಪ್ರೈಸಸ್ ಎಂಬ ಹೊಸ ಉದ್ಯಮ ಆರಂಭಗೊಂಡಿದೆ.
ರೈತರ ಈಗಿನ ಸಮಸ್ಯೆಗಳಾದ ಅಡಿಕೆ ತೋಟದಲ್ಲಿ ಬರುವ ಬೆಂಕಿ ರೋಗ, ಎಲೆ ಚುಕ್ಕಿ ಸಹಿತ ಹಲವಾರು ಸಮಸ್ಯೆಗಳಿಗೆ ಔಷಧಿ ಕಂಡು ಹಿಡಿಯುವಲ್ಲಿ ವಿಫಲರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ನೂತನವಾದ ಪ್ರಯೋಗದ ಮೂಲಕ ವಿವಾ ಕಿಸಾನ್ ಹೊಸ ಔಷಧಿ ಮತ್ತು ಗೊಬ್ಬರ ಕಂಡು ಹಿಡಿಯುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಯೋಜನೆ ಆಗಿದೆ. ಅದರ ಮಾರುಕಟ್ಟೆ ಮಾಡುತ್ತಿರುವ ಜಗದಂಬಾ ಎಂಟರ್ ಪ್ರೈಸಸ್‌ನ ಯೋಜನೆ ಫಲಶೃತಿಯಾಗಿ ಮೂಡಲಿ. ಇದು ಈ ಭಾಗದ ಅಡಿಕೆ ತೋಟಗಾರಿಕೆ ಮಾಡುವವರಿಗೆ ವರದಾನವಾಗಿದೆ ಎಂದರು.


ಅಡಿಕೆಯಿಂದ ಹೆಚ್ಚಿನ ಆದಾಯ ಗಳಿಸಲು ಸಾವಯವ ಔಷಧಿ, ಗೊಬ್ಬರ ಅಗತ್ಯ:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ರೈತರ ಸಮಸ್ಯೆಗಳಿಗೆ ವಿಶೇಷವಾಗಿ ತೋಟಗಾರಿಕೆ ಬೆಳೆಗಳಿಗೆ ಈ ಭಾಗದಲ್ಲಿ ಬಾಧಕ ಆಗುವ ಬೇರ ಬೇರೆ ರೋಗಳಿಗೆ ಪರಿಹಾರ ಕಂಡು ಹಿಡಿದ ಕಿಸಾನ್ ವಿವಾ ಹೆಸರಿನಲ್ಲಿ ಸಾವಯವ ಗೊಬ್ಬರ, ಔಷಧಿ ರೈತರ ಬಾಳಿಗೆ ಪ್ರಯೋಜನ ಆಗಲಿದೆ. ದಕಿಣ ಕನ್ನಡ ಜಿಲ್ಲೆಯ ಈ ಭಾಗದ ಅಡಿಕೆಗೆ ಹಳದಿ ರೋಗ, ಎಲೆ ಚುಕ್ಕಿ ರೋಗ ಬಾದೆಯಿಂದ ಅಡಿಕೆಯಿಂದ ಆದಾಯ ಕಡಿಮೆ ಪಡೆಯುವ ಸಂದರ್ಭ ಅಡಿಕೆ ಉತ್ಪನ್ನ ಹೆಚ್ಚು ಮಾಡಲು ಸಂಶೋಧನೆ ಮಾಡಿದ ಈ ಜಗದಾಂಬ ಸಂಸ್ಥೆಯಿಂದ ವಿವಾ ಗೊಬ್ಬರ ಮತ್ತು ಔಷಧಿ ತುಂಬಾ ಪ್ರಯೋಜನಕಾರಿಯಾಗಲಿದೆ. ಯಾಕೆಂದರೆ ದಂಬೆಕಾನ ಸದಾಶಿವ ರೈ ಅವರು ತಮ್ಮ ತೋಟದಲ್ಲಿ ಪ್ರಾಯೋಗಿಕವಾಗಿ ನೋಡಿ ಆನುಭವದಿಂದ ರೈತರಿಗೆ ಪರಿಚಯಿಸುತ್ತಿದ್ದಾರೆ ಎಂದರು.


ಮುಂದಿನ ದಿನ ಕೃಷಿಕರ ಬಾಗಿಲಿಗೆ ಕಳಿಸುವ ಯೋಜನೆಯಿದೆ:
ಡಾ.ಪಿ.ಬಿ.ರೈ ಪ್ರತಿಷ್ಠಾನದ ಗೌರವಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಮಾತನಾಡಿ ಇತ್ತೀಚಿಗಿನ ಕೆಲವು ವರ್ಷಗಳಿಂದ ಅಡಿಕೆಯನ್ನು ನಂಬಿರುವ ರೈತರು ಮಾರಕವಾದ ರೋಗಗಳಿಂದಾಗ ಸಂಕಷ್ಟಕ್ಕೆ ಒಳಪಡುವ ಸಂದರ್ಭದಲ್ಲಿ ಅನೇಕ ಬೇರೆ ಬೇರೆ ಸಂಸ್ಥೆಗಳು ಹಲವು ರೀತಿಯ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡದರೂ ಈಗ ವಿವಾ ಕಿಸಾನ್ ರೈತರಿಗೆ ಸಂಜೀವಿನಿ ಆಗಿ ಮೂಡಿ ಬಂದಿದೆ. ರೋಗಗಳಿಗೆ ರಾಮ ಬಾಣವಾಗಿದೆ. ರೋಗಳನ್ನು ನಿವಾರಣೆ ಮಾಡುವಲ್ಲಿ ಇದು ಔಷಧಿಯಾಗಿ ಪರಿಣಾಮಕಾರಿಯಾದರೆ ಇನ್ನೊಂದು ಕಡೆ ಉತ್ತಮ ಬೆಳೆಗೆ ಗೊಬ್ಬರವೂ ಆಗಿದೆ. ಒಂದು ವರ್ಷದ ಹಿಂದೆ ನಾನು ಉಪಯೋಗಿಸಿ ಇದರ ಫಲತಾಂಶ ಗಮನಿಸಿದೆ. ಕೇವಲ 45 ದಿನಗಳಲ್ಲಿ ಎಲೆಚುಕ್ಕಿ ರೋಗದಿಂದ ವಿಮುಕ್ತನಾಗಿದ್ದೇನೆ. ಸುಮಾರು 200 ಲೀಟರ್ 100 ಗಿಡಗಳಿಗೆ ಹಾಕಬಹುದು. ವರ್ಷಕ್ಕೆ ಮೂರು ಬಾರಿ ಹಾಕುವ ಪ್ರಯತ್ನ ಮಾಡಿದಾಗ ಕಂಡಿತಾ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದು ಪುತ್ತೂರಿನವರಿಗೆ ಸದುಪಯೋಗ ಸಿಗಬೇಕೆನ್ನುವ ನಿಟ್ಟಿನಲ್ಲಿ ಜಗದಂಬಾ ಎಂಟರ್‌ಪ್ರೈಸಸ್ ಮೂಲಕ ದಂಬೆಕಾನ ಸದಾಶಿವ ರೈ ಅವರು ಯೋಜನೆ ಹಾಕಿಕೊಂಡಿದ್ದಾರೆ. ಮುಂದಿನ ದಿನ ಈ ಉತ್ಪನ್ನಗಳನ್ನು ಕೃಷಿಕರ ಬಾಗಿಲಿಗೂ ಕಳಿಸಿಕೊಡುವ ಯೋಜನೆಯಿದೆ ಎಂದರು.


ಸಾಯುವಂತಹ ಗಿಡಗಳನ್ನು ಬದುಕಿಸಿದ್ದು ಈ ಔಷಧಿ :
ಡಾ.ಪಿ.ಬಿ.ರೈ ಪ್ರತಿಷ್ಠಾನದ ಅಧ್ಯಕ್ಷ ದಂಬೆಕ್ಕಾನ ಸದಾಶಿವ ರೈ ಮಾತನಾಡಿ ನಾನೊಬ್ಬ ಸಾಮಾನ್ಯ ರೈತನಾಗಿ ಅನೇಕ ವರ್ಷಗಳಿಂದ ರಾಸಾಯನಿಕ ಗೊಬ್ಬರ ಉಪಯೋಗ ಮಾಡಿಕೊಂಡು ಇನ್ನು ಕೃಷಿ ಬೇಡ ಎಂದು ಒಂದು ರೀತಿಯ ಬೇಸರವನ್ನು ಪಡೆದಿದ್ದೆ. ರಾಸಾಯನಿಕ ಗೊಬ್ಬರದ ಉಪಯೋಗದಿಂದಾಗಿ ಮಣ್ಣಿನ ಫಲವರ್ಧತೆ ಸಂಪೂರ್ಣ ನಾಶವಾಗಿದೆ. ಒಟ್ಟಿನಲ್ಲಿ ನಾವು ಮಣ್ಣನ್ನು ಕೆಡಿಸಿದ್ದೇವೆ. ಇವತ್ತು ಮಣ್ಣಿನ ಉದ್ಧಾರ ಆಗಬೇಕು. ಭೂಮಿಯ ಫಲವತ್ತತೆಯಾಗಬೇಕು. ಇವತ್ತು ಪರಿಸರವನ್ನು ನಾವೇ ಸಂಪೂರ್ಣ ನಾಶ ಮಾಡಿದ್ದು ಎಂದ ಅವರು ಹೋದ ವರ್ಷ ನನ್ನ ತೋಟದಲ್ಲಿ ಎಲೆಚುಕ್ಕಿ ರೋಗ, ಮುಂಡುಸಿರಿ, ಬೆಂಕಿ ರೋಗ ವಿಪರೀತವಾಗಿತ್ತು. ಒಂದು ರೀತಿಯ ಬೇಸರದಲ್ಲಿ ಕೃಷಿಯನ್ನು ನಿಲ್ಲಿಸುವ ಉದ್ದೇಶದಲ್ಲಿದ್ದೆ. ಆ ಸಂದರ್ಭ ನನಗೆ ಆಪಾತ್ಬಾಂಧವನಂತೆ ಬಂದವರು ವಿವಾ ಕಂಪೆನಿಯ ಈ ಉತ್ಪನ್ನಗಳು. ನಾನು ಅವರಲ್ಲಿ ದರ ಎಷ್ಟು ಕೇಳಿಲ್ಲ. ನನಗೆ ರೋಗ ಬಾರದ ಹಾಗೆ ಮಾಡಿದರೆ ನಿಮಗೆ ಹೇಳಿದ ದರ ಕೊಡುತ್ತೇನೆ ಎಂದಿದ್ದೆ. ತಕ್ಷಣ ಅದಕ್ಕೆ ಅವರು ವ್ಯವಸ್ಥೆ ಮಾಡಿದರು. ಗೊಬ್ಬರವಾಗಿ ನಾನು ಸುಲಭವಾಗಿ ಬುಡಕ್ಕೆ ಹಾಕಿ ಎರಡು ತಿಂಗಳಲ್ಲಿ ಫಲಿತಾಂಶ ಪಡೆದುಕೊಂಡೆ.ನೂರಕ್ಕೆ ನೂರು ಕಡಿಮೆ ಆಗಿದೆ ಎಂದು ಹೇಳುತ್ತಿಲ್ಲ. ಕಡಿಮೆ ಆಗುತ್ತಾ ಬಂದಿದೆ. ಕೊನೆಯ ಜನವರಿಯಲ್ಲಿ ನಾನು ಬಳಕೆ ಮಾಡಿದ್ದೆ 2 ತಿಂಗಳಲ್ಲಿ ನನಗೆ ಫಲಿತಾಂಶ ಬಂದಿದೆ. ಇದರಿಂದಾಗಿ ನಾನು ಬಹಳ ಸಂತೋಷ ಪಟ್ಟೆ. ಯಾಕೆಂದರೆ ಸಾಯುವಂತಹ ಗಿಡಗಳನ್ನು ಬದುಕಿಸಿದ್ದು ಈ ಔಷಧಿ.ಪರಿಚಯಿಸುವ ಉದ್ದೇಶದಿಂದ ನನ್ನ ಆತ್ಮೀಯರಾದ ಹೇಮನಾಥ ಶೆಟ್ಟಿಯವರಿಗೆ ಮಾಹಿತಿ ನೀಡಿದೆ. ಯಾಕೆಂದರೆ ಕೃಷಿಯಲ್ಲಿ ಯುವಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹೋಗುವುದು ಮುಖ್ಯ. ಹೇಮನಾಥ ಶೆಟ್ಟಿಯವರು ಕೂಡಾ ಅವರ ತೋಟದಲ್ಲಿ ಇದನ್ನು ಉಪಯೋಗ ಮಾಡಿ ಫಲಿತಾಂಶ ಪಡೆದಿದ್ದಾರೆ. ಈ ಕುರಿತು ಬಂಟರ ಭವನದಲ್ಲಿ ದೊಡ್ಡ ಕಾರ್ಯಗಾರ ಮಾಡಿದ್ದೆವು. ಇದೀಗ ಕೃಷಿಕರಿಗೆ ಸಂಪರ್ಕ ಹೊಂದಲು ಕಚೇರಿ ಆರಂಭಿಸಿದ್ದೇವೆ. ಪುತ್ತೂರು ಮಹಾಲಿಂಗೇಶ್ವರನ ಈ ಕ್ಷೇತ್ರದಲ್ಲಿ ಎಲ್ಲಾ ರೈತ ಬಾಂಧವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮುಂದಕ್ಕೆ ಸಾಗಲಿದ್ದೇವೆ ಎಂದರು.


ಬೇರೆ ಕಂಪೆನಿಯ 20 ಉತ್ಪನ್ನಗಳಿಗೆ ಇದೊಂದು ಉತ್ಪನ್ನ ಸಮಾನ:
ಪವಿತ್ರಾ ವಿವಾ ಎಂಟರ್‌ಪ್ರೈಸಸ್ ನೆಲ್ಯಾಡಿ ಇದರ ಮಾಲಕ ಎ.ಆರ್ ಅಮನ್ ಮಾತನಾಡಿ ವಿವಾ ಕಂಪೆನಿಯಲ್ಲಿ ಕೃಷಿಗೆ ಸಂಬಂಧಿಸಿದ 100 ಉತ್ಪನ್ನಗಳಿವೆ. ಇವೆಲ್ಲ ಉತ್ತಮ ಫಲಿತಾಂಶ ಕೊಡುವ ಉತ್ಪನ್ನಗಳಾಗಿವೆ. ಇವತ್ತು ಮಾರುಕಟ್ಟೆಯಲ್ಲಿ ರಾಸಾಯನಿಕ ಉತ್ಪನ್ನ ಬಳಕೆಯಿಂದ ನೂರರಲ್ಲಿ 10 ಮಂದಿಗೆ ಕ್ಯಾನ್ಸರ್ ಬರುತ್ತದೆ. 2015ರಲ್ಲಿ ಶುದ್ದ ಭೂಮಿ ರೋಗ ಮುಕ್ತ ಭಾರತ ಎಂಬ ಗುರಿಯಿಟ್ಟುಕೊಂಡು ಹೊಸ ವಿವಾ ಉತ್ಪನ್ನ ಆರಂಭಿಸಿದ್ದೆವು. 4 ವರ್ಷದ ಹಿಂದೆ ಕಿಸಾನ್ ಕಿಂಗ್ ಲಾಂಚ್ ಮಾಡಿದ್ದು ಕಂಪೆನಿಯಲ್ಲಿರುವ 20 ಉತ್ಪನ್ನಗಳಿಗೆ ಈ ಒಂದು ಉತ್ಪನ್ನ ಸಮಾನವಾಗಿದೆ. ಅದೇ ರೀತಿ ಈ ಪ್ರೋಡಕ್ಟ್‌ಗೆ ಮಣ್ಣು ಪರೀಕ್ಷೆ ಮಾಡಬೇಕಾಗಿಲ್ಲ. ಗಿಡಕ್ಕೆ ಎನು ಕೊಡಬೇಕೋ ಅದನ್ನು ಎಲ್ಲಾ ಕಂಪೆನಿ ಮೆನ್‌ಷನ್ ಮಾಡಿದೆ ಎಂದರು.

ಈ ಸಂದರ್ಭ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ, ಅರಿಯಡ್ಕ ಲಕ್ಷ್ಮೀ ನಾರಾಯಣ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕುದ್ಕಾಡಿ ಶೀನಪ್ಪ ರೈ ಕೊಡಂಕೀರಿ, ಬಂಟರ ಯಾನೆ ನಾಡವರ ಸಂಘದ ದಯಾನಂದ ರೈ ಮನವಳಿಕೆ, ರೋಯಲ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಕೆ. ಜಯರಾಮ್ ರೈ, ಕುಮುದಾ ಎಲ್.ಎನ್. ಶೆಟ್ಟಿ ತಿಂಗಳಾಡಿ, ಗೀತಾ ಮೋಹನ್ ರೈ ನರಿಮೊಗರು, ಲಲಿತಾ ಎಚ್.ಎಂ. ಭಂಡಾರಿ ಚಿಲ್ಮೆತ್ತಾರು, ಜಯಂತಿ ಮೋಹನ್ ರೈ ಮಾಡಾವು, ಗೀತಾ ವಿನೋಭಾ ಶೆಟ್ಟಿ ಪರಾರಿ ಬೆಳ್ಳಾರೆ, ಅಬ್ದುಲ್ ಖಾದರ್ ಮೇರ್ಲ ಕೆಯ್ಯೂರು, ಅಣಿಲೆ ಜಯರಾಜ್ ಶೆಟ್ಟಿ, ರೈತ ಮುಖಂಡ ಅಮರ್ ಆಳ್ವ ಈಶ್ವರಮಮಗಲ, ವಿಶ್ವನಾಥ ಶೆಟ್ಟಿ ಸಾಗು ಕೆಯ್ಯೂರು, ಸಂದಿಪ್ ರೈ ಚಿಲ್ಮೆತ್ತಾರು, ಸಂತೋಷ್ ಭಂಡಾರಿ, ಕೃಷ್ಣಪ್ರಸಾದ್ ಆಳ್ವ, ಹರ್ಷ ಕುಮಾರ್ ರೈ ಮಾಡಾವು, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಸಹಿತ ಹಲವಾರು ಮಂದಿ ಆಗಮಿಸಿ ಶುಭಹಾರೈಸಿದರು.

ಔಷಧಿಯ ಬಕೆಟ್ ತೊಳೆದ ನೀರು ಹಾಕಿದ ಮಾತ್ರಕ್ಕೆ ನೆಲಬಸಳೆ ಉತ್ತಮವಾಗಿ ಬೆಳೆದಿದೆ:
ನಮ್ಮಲ್ಲಿ ಅಡಿಕೆ ತೋಟದಲ್ಲಿ ಈ ವಿವಾ ಕಿಸಾನ್ ಅನ್ನು ಬಳಸಿದ ಬಳಿಕ ಔಷಧಿ / ಗೊಬ್ಬರದ ಬಕೇಟ್ ತೊಳೆದ ನೀರನ್ನು ಹೂವಿನ ಗಿಡ, ನೆಲಬಸಳೆ, ಪಪ್ಪಾಯಿ ಗಿಡಗಳಿಗೆ ಹಾಕಿದ್ದೆ. ಅದು ಉತ್ತಮ ಬೆಳವಣಿಗೆ ಬಂದಿದೆ. ನೆಲಬಸಳೆ ಬೆಳವಣಿಗೆ ಇರಲಿಲ್ಲ. ಈಗ ಉತ್ತಮ ಫಲಿತಾಂಶ ಕಂಡಿದ್ದೇನೆ. ಹಾಗಾಗಿ ವಿವಾ ಕಿಸಾನ್‌ನಲ್ಲಿ ಪೂರ್ಣ ಭರವಸೆ ಇದೆ ಎಂದರು.
ದಂಬೆಕಾನ ಸದಾಶಿವ ರೈ ಅವರ ಪತ್ನಿ ನೂಜಿ ತರವಾಡು ಮನೆಯ ಪ್ರಭಾ ಎಸ್ ರೈ

ವಿವಾ ಕಿಸಾನ್‌ನ ಮೂರು ಉತ್ಪನ್ನವನನ್ನು ಅಡಿಕೆ ತೋಟಕ್ಕೆ ಬಳಸಬೇಕು. ಕಿಸಾನ್ ಕಿಂಗ್ ಸಾವಯವ ಗೊಬ್ಬರ. ವಿವಾ ಕಿಸಾನ್ ಡೆವಲಪರ್, ವಿವಾ ಕಿಸಾನ್ ಗ್ರೋಥ್ ಕಿಸಾನ್ ಗ್ರೋಥ್ ಅನ್ನು ಬಳಸಬೇಕು. ಕಿಸಾನ್ ಕಿಂಗ್ ಸಾವಯವಗೊಬ್ಬರ ಹಳದಿ ರೋಗ, ಎಲೆಚುಕ್ಕಿ, ಬೆಂಕಿ ರೋಗಕ್ಕೆ ರಾಮಬಾಣ, ಕೆಎಆರ್ ಭಾರತೀಯ ಕೃಷಿ ಮತ್ತು ಸಂಶೋಧನೆಆ ಮಂಡಳಿಯಿಂದ ಅಂತರಾಷ್ಟ್ರೀಯ ಮಟ್ಟದ ಪೇಟೆಂಟ್ ಹಗು ಪ್ರಮಾಣಪತ್ರ ಪಡೆದಿದೆ. ವಿವಾ ಕಿಸಾನ್ ಡೆವಲಪರ್ ಅನ್ನು ಭೂಮಿ ಮತ್ತು ಬೇರುಗಳ ಅಭಿವೃದ್ಧಿಗಾಗಿ ಉತ್ತಮ ಗುಣಮಟ್ಟದ ಹೋಮಿಕ್ ಆಮ್ಲ ಮತ್ತು ಕಡಲಕಳೆ ಸಾರಗಳಿಂದ ತಯಾರಿಸಿದ ಅತ್ಯುತ್ತಮ ಜೈವಿಕ ಉತ್ತೇಜಕ ಉತ್ಪನ್ನವಾಗಿದೆ. ವಿವಾ ಕಿಸಾನ್ ಗ್ರೋಥ್ ಅನ್ನು ಪ್ರತಿ ಬೆಳೆಗೆ ಪ್ರತಿ ಹಂತದ ಬೆಳೆಗೆ ಬಳಸಬೇಕು. ಸಸ್ಯಗಳ ಸಾರಗಳಿಂದ ತಯಾರಿಸಿದ ಉತ್ತಮ ಗುಣಮಟ್ಟದ ಸಾವಯವ ಉತ್ಪನ್ನವಾಗಿದೆ. ವಿವಿಧ ಸಸ್ಯರಗಳ ಸಾರಗಳನ್ನು ಅದರಲ್ಲಿ ಬಳಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9998730999ಅನ್ನು ಸಂಪರ್ಕಿಸುವಂತೆ ಜಗದಂಬಾ ಎಂಟರ್‌ಪ್ರೈಸಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here