ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

0

4.85 ಲಕ್ಷ ನಿವ್ವಳ ಲಾಭ, ಶೇ.20 ಡಿವಿಡೆಂಡ್, ಲೀ.ಹಾಲಿಗೆ ರೂ. 1,71 ಬೋನಸ್ ಘೋಷಣೆ   

 ನಿಡ್ಪಳ್ಳಿ; ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘವು 2023-24 ನೇ ಸಾಲಿನಲ್ಲಿ ರೂ.4,85,887.43 ನಿವ್ವಳ ಲಾಭ ಗಳಿಸಿದೆ.ಲಾಭಾಂಶದಲ್ಲಿ ಶೇ.20 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ. 1.71 ಬೋನಸ್ ನೀಡಲಾಗುವುದು. ಪ್ರತಿ ಲೀಟರ್ ಹಾಲಿಗೆ ಇಷ್ಟು ದೊಡ್ಡ ಮೊತ್ತದ ಬೋನಸ್ ಯಾವ ಸಂಘದಲ್ಲಿಯೂ ನೀಡಿಲ್ಲ.ಆದರೆ ಹಾಲು ಉತ್ಪಾದನೆಗೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ನಾವು ಈ ದೊಡ್ಡ ಮೊತ್ತದ ಬೋನಸ್ ನೀಡಿದ್ದೇವೆ ಎಂದು ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ಕೆ ಹೇಳಿದರು. ಉತ್ತಮ ಗುಣಮಟ್ಟದ ಹಾಲು ಪೂರೈಸಿದರೆ ಲೀಟರಿಗೆ ರೂ 35.16 ರೇಟ್ ಮತ್ತು ಸರಕಾರದ ಸಹಾಯ ಧನ ರೂ. 5 ಹಾಗೂ ಬೋನಸ್ ರೂ. 1.71 ಸೇರಿ ಲೀಟರ್ ಹಾಲಿಗೆ ಸರಾಸರಿ ರೂ.41.87  ಬೀಳುತ್ತದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ಕೆ ತಿಳಿಸಿದರು.

 ಸಭೆಯು ಆ.18 ರಂದು ಸಂಘದ ರಜತಾಮೃತ ಸಭಾಭವನದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವರದಿ ಸಾಲಿನಲ್ಲಿ ಸಂಘವು ಸರಾಸರಿ ದಿನಂಪ್ರತಿ 352.4 ಲೀಟರ್ ಹಾಲು ಶೇಖರಣೆ ಮಾಡಿದ್ದು ಗರಿಷ್ಠ 432.5 ಲೀಟರ್ ಶೇಖರಣೆ ಮಾಡಿದ್ದು 102 ಸದಸ್ಯರು ಹಾಲನ್ನು ಸಂಘಕ್ಕೆ ಸರಬರಾಜು ಮಾಡಿರುತ್ತಾರೆ.

 ವರದಿ ಸಾಲಿನಲ್ಲಿ ಸಂಘವು 45,37,743.46 ರೂಪಾಯಿಯ 1,28,647.4 ಲೀಟರ್ ಹಾಲನ್ನು ಸಂಗ್ರಹಿಸಿರುತ್ತದೆ.ರೂ.1,60,955.4 ರೂಪಾಯಿಯ 33,057.9 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿರುತ್ತದೆ.36,58,198.74 ರೂಪಾಯಿಯ 1,00,572 ಕೆ.ಜಿ ಹಾಲನ್ನು ದ.ಕ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಿರುತ್ತದೆ.

 ವರದಿ ಸಾಲಿನಲ್ಲಿ 12,58,865 ರೂಪಾಯಿಯ 1,035 ಚೀಲ ನಂದಿನಿ ಪಶು ಆಹಾರ, ರೂ.1,03,905 ಲವಣ ಮಿಶ್ರಣ 1,838 ಕೆ.ಜಿ ಯನ್ನು ಮಾರಾಟ ಮಾಡಲಾಗಿದೆ.ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಿಂದ ರೂ.3,11,094.22 ವ್ಯಾಪಾರ ಲಾಭ ಬಂದಿರುತ್ತದೆ.950 ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮತ್ತು 430 ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.ಲೆಕ್ಕಪರಿಶೋಧನೆಯಲ್ಲಿ ಸಂಘವು “ಎ” ಶ್ರೇಣಿ ಪಡೆದಿರುತ್ತದೆ.

ಜಿಲ್ಲಾಧಿಕಾರಿಯವರು ಜಾಗ ನೀಡುವಂತಾಗ ಬೇಕು;
ಕೆಲವು ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಸ್ವಂತ ಕಟ್ಟಡ ಇಲ್ಲದೆ ಇದ್ದು ಕಟ್ಟಡ ನಿರ್ಮಾಣಕ್ಕೆ ಜಾಗದ ವ್ಯವಸ್ಥೆ ಆಗ ಬೇಕಾಗಿದೆ.ಸಣ್ಣ ಜಾಗವನ್ನು ಸರಕಾರದಿಂದ ಮಂಜೂರು ಮಾಡಿಸಿ ಕೊಳ್ಳಲು ಬೆಂಗಳೂರುವರೆಗೆ ಅಲೆದಾಡ ಬೇಕಾಗಿದೆ.ಆದುದರಿಂದ ಸಣ್ಣ ಸಣ್ಣ ಜಾಗ ಬೇಕಾದ ಸಂಘಗಳಿಗೆ ಜಿಲ್ಲಾಧಿಕಾರಿ ಮುಖಾಂತರ ಜಾಗ ಕೊಡುವ ವ್ಯವಸ್ಥೆ ಸರಕಾರ ಮಾಡ ಬೇಕು ಎಂದು ಅಧ್ಯಕ್ಷರು ಹೇಳಿದರು.

ವ್ಯವಸ್ಥಿತ ರೀತಿಯಲ್ಲಿ ಸರಕಾರ ಪ್ರೊತ್ಸಾಹ ಧನ ವಿತರಿಸಲಿ-
ಹಾಲು ಉತ್ಪಾದಕರಿಗೆ ಸರಕಾರ ನೀಡುವ ಪ್ರೊತ್ಸಾಹ ಧನ ಸರಿಯಾದ ಸಮಯದಲ್ಲಿ ನೀಡುತ್ತಿಲ್ಲ.ಕೆಲವು ತಿಂಗಳುಗಳ ಪ್ರೊತ್ಸಾಹ ಧನ ನೀಡಲು ಬಾಕಿ ಇದೆ. ಯಾವ ತಿಂಗಳ ಹಣ ಯಾವಾಗ ಹಾಕಿದ್ದಾರೆ ಎಂಬ ಮಾಹಿತಿಯೂ ಇಲ್ಲದೆ ಹಾಕುತ್ತಾರೆ. ಇದನ್ನು ವ್ಯವಸ್ಥಿತ ರೀತಿಯಲ್ಲಿ ವಿತರಿಸಿದರೆ ಜನರಿಗೆ ಪ್ರಯೋಜನಕ್ಕೆ ಸಿಗುತ್ತದೆ.ಹೈನುಗಾರರು ತಮ್ಮ ಸುತ್ತಮುತ್ತಲಿನ ರೈತರಿಗೆ ಹೇಳಿ ಪ್ರೆರೇಪಣೆ ನೀಡಿದರೆ  ಹಾಲು ಉತ್ಪಾದನೆ ಹೆಚ್ಚಾಗಲು ಸಹಕಾರಿಯಾಗುತ್ತದೆ ಎಂದು ಅಧ್ಯಕ್ಷರು ಅಭಿಪ್ರಾಯ ಪಟ್ಟರು.

 ಮುಖ್ಯ ಅತಿಥಿ ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ ಇಡೀ ಜಿಲ್ಲೆಯ ಸಂಘಗಳನ್ನು ನೋಡಿದರೆ ಈ ಸಂಘದಲ್ಲಿ ಲೆಕ್ಕಾಚಾರಗಳ ಉತ್ತಮ ನಿರ್ವಹಣೆ ಮತ್ತು ಆದಾಯ ಹೆಚ್ಚು ಬಂದಿದೆ. ಅದಕ್ಕಾಗಿ ಇಲ್ಲಿಯ ಸಂಘಕ್ಕೆ ನಾನು ಧನ್ಯವಾದ ನೀಡುತ್ತೇನೆ ಎಂದು ಹೇಳಿದ ಅವರು ಹೈನುಗಾರರಿಗೆ ಒಕ್ಕೂಟ ಮತ್ತು ಸರಕಾರದಿಂದ ದೊರೆಯುವ ಸವಲತ್ತುಗಳು, ಹಸುಗಳ ಪಾಲನೆ ಪೋಷಣೆ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಅನುದೀಪ್ ಮಾತನಾಡಿ ಹಸುಗಳಿಗೆ ವಿಮೆ ಮಾಡುವ ಬಗ್ಗೆ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

  ಬಹುಮಾನ ವಿತರಣೆ;
ವರದಿ ಸಾಲಿನಲ್ಲಿ ಹಾಲು ಹಾಕಿದವರಲ್ಲಿ ವಿದ್ಯಾ ಮಣ್ಣಂಗಳ ಪ್ರಥಮ, ವೀರಪ್ಪ ಗೌಡ ದ್ವಿತೀಯ ಹಾಗೂ ಗುಲಾಬಿ ರೈ ತೃತೀಯ ಸ್ಥಾನ ಪಡೆದಿದ್ದು ಇವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.ಅಲ್ಲದೆ 90 ದಿವಸ ಹಾಲು ಹಾಕಿದ ಸದಸ್ಯರಿಗೆ ಪ್ರೊತ್ಸಾಹಕ ಬಹುಮಾನ ನೀಡಲಾಯಿತು.

    ಸ್ಥಳೀಯವಾಗಿ ಅತಿ ಹೆಚ್ಚು ಹಾಲು ಖರೀದಿಸಿದ  ಹೋಟೆಲ್ ಶ್ರೀ ಮಾತಾ, ಹೋಟೆಲ್ ಶ್ರೀ ದುರ್ಗಾ ಹಾಗೂ ನಂದಿನಿ ಉತ್ಪನ್ನಗಳ ಹೆಚ್ಚು ಮಾರಾಟ ಮಾಡಿದ ಶಿವರಾಮ ಮಣಿಯಾಣಿ ಇವರನ್ನು ಪ್ರೊತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.

 ಸಹಾಯ ಧನ ವಿತರಣೆ; ಗೋಬರ್  ಗ್ಯಾಸ್ ಅನಿಲ ಸ್ಥಾವರ ನಿರ್ಮಿಸಿದ ಸೀತಾಲಕ್ಷ್ಮೀ ಮತ್ತು ತಾರಾವತಿ ರೈ ಇವರಿಗೆ ತಲಾ 3 ಸಾವಿರ  ಹಾಗೂ ಮಳೆಗೆ ಹಟ್ಟಿ ಬಿದ್ದು ಹಾನಿ ಸಂಭವಿಸಿದ ಕಮಲರವರಿಗೆ ರೂ.3 ಸಾವಿರ ಸಹಾಯ ಧನವನ್ನು ಸಂಘದ ವತಿಯಿಂದ ವಿತರಿಸಲಾಯಿತು.

 ಸಂತಾಪ ಸೂಚನೆ; ಇತ್ತೀಚೆಗೆ ನಿಧನರಾದ ಸಂಘದ ಅಧ್ಯಕ್ಷರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ  ಬಾಲಕೃಷ್ಣ ಭಟ್ ಭರಣ್ಯ, ಸಂಘದ ಸದಸ್ಯರಾದ ರಾಮ ಪಾಟಾಳಿ ಕಡಮಾಜೆ, ನಿರ್ದೇಶಕ ಶೀನಪ್ಪ ರೈ  ಪಡ್ಯಂಬೆಟ್ಟು, ಸದಸ್ಯ ಕುಂಞ ನಾಯ್ಕ ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿ ಎದ್ದು ನಿಂತು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಲಾಯಿತು.

  ಸಂಘದ ಉಪಾಧ್ಯಕ್ಷ ಉಮೇಶ್ ಬಲ್ಯಾಯ.ಕೆ, ನಿರ್ದೇಶಕರುಗಳಾದ ಉದಯ ಕುಮಾರ್ ರೈ, ವಿದ್ಯಾ ಮಣ್ಣಂಗಳ,ವಿಶ್ವನಾಥ ರೈ ಎಸ್, ವೆಂಕಟಕೃಷ್ಣ ಬಿ, ಶ್ರೀಧರ ಭಟ್ ಎಸ್.ವಿ, ಯತೀಶ್ ಕುಮಾರ್ ರೈ.ಪಿ, ಸಂತೋಷ್ ಕುಮಾರ್ ಜಿ, ಪದ್ಮಾವತಿ. ಎನ್, ಗುಲಾಬಿ ರೈ, ಸೀತಾ ಬಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ನಿರ್ದೇಶಕಿ ಪದ್ಮಾವತಿ ಪ್ರಾರ್ಥಿಸಿ,   ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ ಎ ಸ್ವಾಗತಿಸಿದರು. ಉಪಾಧ್ಯಕ್ಷ ಉಮೇಶ್ ಬಲ್ಯಾಯ ವಂದಿಸಿದರು. ಸಿಬ್ಬಂದಿಗಳಾದ ಹರೀಶ್ ಬಲ್ಯಾಯ ಕೆ, ಶಾರದ, ಸ್ವಸ್ತಿಕ್ ಶ್ರೀರಾಮ್ ಸಹಕರಿಸಿದರು.

ಶಾಸಕರಿಗೆ ಅಭಿನಂದನೆ; ಸರಕಾರದ ಮುಖಾಂತರ ಎಲ್ಲಿಯೂ ಒಂದು ಹಾಲು ಒಕ್ಕೂಟಕ್ಕೆ ಜಾಗ ಮಂಜೂರಾದ ಕೆಲಸ ಆಗಿಲ್ಲ.ಆದರೆ ದ.ಕ.ಹಾಲು ಒಕ್ಕೂಟಕ್ಕೆ ಪುತ್ತೂರು ತಾಲೂಕಿನಲ್ಲಿ 10 ಎಕ್ರೆ ಜಾಗ ಮಂಜೂರಾಗಿದ್ದು ಬಹಳ ಸಂತಸ ತಂದಿದೆ. ಸರಕಾರದಿಂದ ಜಾಗ ಮಂಜೂರು ಗೊಳಿಸಲು ಪ್ರಯತ್ನಿಸಿದ ಪುತ್ತೂರು ಶಾಸಕರಿಗೆ ನಮ್ಮ ಸಂಘದ ಮತ್ತು  ದ.ಕ ಹಾಲು ಒಕ್ಕೂಟದ ನಿರ್ದೇಶಕನಾದ ನಾನು ವೈಯಕ್ತಿಕ ನೆಲೆಯಲ್ಲಿ  ಅಭಿನಂದನೆ ಸಲ್ಲಿಸುತ್ತೇನೆ ಎಂದರು.

LEAVE A REPLY

Please enter your comment!
Please enter your name here