ಈಶ್ವರಮಂಗಲ ಸಮರ್ಥ ಸಾಂಸ್ಕೃತಿಕ ಕಲಾ ತಂಡದಿಂದ ಶಿಕ್ಷಣ,ಕಲೆ,ಮೆದುಳು ಬೆಳವಣಿಗೆಯ ಆಟಗಳು, ವ್ಯಕ್ತಿತ್ವ ವಿಕಸನದ ಪಾಠಗಳು: ತರಗತಿ ಶುಭಾರಂಭ

0

ಪುತ್ತೂರು: ಸಮರ್ಥ ಸಾಂಸ್ಕೃತಿಕ ಕಲಾ ತಂಡ ಈಶ್ವರಮಂಗಲ ಇದರ ವತಿಯಿಂದ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪ್ರತಿ ಆದಿತ್ಯವಾರ ನಡೆಯುವ ಶಿಕ್ಷಣ ಕಲೆ, ಮದುಳು ಬೆಳವಣಿಗೆಯ ಆಟಗಳು ಹಾಗೂ ವ್ಯಕ್ತಿತ್ವ ವಿಕಸನದ ಪಾಠಗಳು ಇದರ ತರಗತಿಯ ಶುಭಾರಂಭವು ಆ.18 ರಂದು ನಡೆಯಿತು.

ಇದರ ಉದ್ಘಾಟನೆಯನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಮಂಜುನಾಥ ರೈ ಸಾಂತ್ಯರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಒಳ್ಳೆಯ ಕಲಾವಿದರನ್ನು ಸಮಾಜಕ್ಕೆ ಪರಿಚಯ ಮಾಡಿಕೊಟ್ಟ ಕೀರ್ತಿ ಸಮರ್ಥ ತಂಡಕ್ಕೆ ಇದೆ. ಒಂದು ಕಲಾತಂಡದಿಂದ ಇಂತಹ ವ್ಯಕ್ತಿತ್ವದ ವಿಕಸನಕ್ಕೆ ಸಂಬಂಧಪಟ್ಟ ಪಾಠಗಳನ್ನು ಕಲಿಸಿಕೊಡುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕಿ ಮೀನಾಕ್ಷಿ ಭಾಸ್ಕರ್‌ರವರು ಮಾತನಾಡಿ,ಇದೊಂದು ಅದ್ಭುತ ಕಾರ್ಯಕ್ರಮವಾಗಿದೆ. ಇಂದಿನ ಪೀಳಿಗೆಗೆ ಸಂಸ್ಕಾರದ ಪಾಠವನ್ನು ತಿಳಿಸಿಕೊಡುವ ಅಗತ್ಯತೆ ತುಂಬಾ ಇದೆ. ನಮ್ಮ ಸಂಸ್ಕಾರ,ಸಂಸ್ಕೃತಿ ಒಂದು ಕಡೆಯಿಂದ ಮರೆಯಾಗುತ್ತಾ ಹೋಗುತ್ತಿದೆ. ಇದರಿಂದ ಸಮಾಜಕ್ಕೆ ತುಂಬಲಾರದ ನಷ್ಟವಿದೆ. ಇಂತಹ ಸಂಸ್ಕಾರ, ಸಂಸ್ಕೃತಿಯನ್ನು ಮತ್ತೆ ಮಕ್ಕಳನ್ನು ಮೂಡಿಸುವ ಕೆಲಸವನ್ನು ಸಮರ್ಥ ಕಲಾ ತಂಡ ಮಾಡುತ್ತಿರುವುದು ಶ್ಲಾಘನೀಯ ಎಂದರು.

ನಿವೃತ್ತ ಶಿಕ್ಷಕ ನಾಗಪ್ಪ ಗೌಡ ಬೊಮ್ಮೆಟ್ಟಿಯವರು ಮಾತನಾಡಿ, ಕಲಿಯುವಂತಹದು ಬೇಕಾದಷ್ಟಿದೆ. ಕಲಿಸುವವರು ಇದ್ದಾರೆ ಆದರೆ ಕಲಿಯುವವರು ಇದ್ದಾರಾ ಎನ್ನುವುದೇ ಪ್ರಶ್ನೆ. ನಮ್ಮ ಮಕ್ಕಳನ್ನು ಸುಸಂಸ್ಕೃತ ನಾಗರೀಕರನ್ನಾಗಿ ಮಾಡಬೇಕು ಎನ್ನುವುದು ಎಲ್ಲಾ ಹೆತ್ತವರ ಕನಸಾಗಿದೆ. ಆದರೆ ಇದು ಒಂದೆರಡು ದಿನದಲ್ಲಿ ಆಗುವಂತಹುದು ಅಲ್ಲ, ಇಂತಹ ಕಾಲದಲ್ಲಿ ಸಮರ್ಥದಂತಹ ಕಲಾ ತಂಡ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.


ನಿವೃತ್ತ ಶಿಕ್ಷಕ ಸದಾಶಿವ ರೈ ನಡುಬೈಲ್‌ರವರು ಓಂಕಾರಕ್ಕೆ ಮೊದಲ ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು. ಕೆವಿಜಿ ವಿದ್ಯಾಲಯದ ಆಂಗ್ಲಭಾಷಾ ಶಿಕ್ಷಕಿ ಮಲ್ಲಿಕಾ ಉಲ್ಲಾಸ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದ್ ಮೇನಾಲ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ರಮಾನಂದ ಕೋರಿಗದ್ದೆ, ಸುರೇಶ್ ಆಳ್ವ ಸಾಂತ್ಯ, ನಿವೃತ್ತ ಎಎಸ್‌ಐ ಪದ್ಮನಾಭ ಗೌಡ ಅಡ್ಡತ್ತಡ್ಕ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮೋಹನದಾಸ ಶೆಟ್ಟಿ ನೂಜಿಬೈಲು, ಭರತನಾಟ್ಯ ಶಿಕ್ಷಕಿ ಜ್ಯೋತಿ ಅಡ್ಡಂತಡ್ಕ ಉಪಸ್ಥಿತರಿದ್ದರು. ರಕ್ಷಾ ಅಡ್ಡಂತಡ್ಕ ಸ್ವಾಗತಿಸಿದರು. ಅಹನಾ ಪ್ರಾರ್ಥಿಸಿದರು. ನವೀನ್ ಕುಕ್ಕುಡೇಲು, ವಂಸತಿ ಪಟ್ಟೋಡಿ, ಸನ್ಮಿತಾ ಸುರುಳಿಮೂಲೆ, ಯಶೋಧ,ಅಹನಾ, ಅದ್ವಿತ್ ಈಶ್ವರಮಂಗಲ, ಸ್ವಾತಿ ಅಡ್ಡಂತಡ್ಕ, ಸಮೃದ್ದಿರವರುಗಳು ಅತಿಥಿಗಳು ತಾಂಬೂಲ ನೀಡಿ ಸ್ವಾಗತಿಸಿದರು. ಸಮರ್ಥ ಸಾಂಸ್ಕೃತಿಕ ಕಲಾತಂಡದ ನಿರ್ದೇಶಕಿ ತೇಜಸ್ವಿನಿ ನವೀನ್ ಕುಮಾರ್ ಕುಕ್ಕುಡೇಲ್ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಅಡ್ಡಂತಡ್ಕ ವಂದಿಸಿದರು. ವಿಶೇಷವಾಗಿ ಮಕ್ಕಳ ಪೋಷಕರು ಸಹಿತ ಮಕ್ಕಳು ದೀಪ ಬೆಳಗಿಸುವ ಮೂಲಕ ಓಂಕಾರವನ್ನು ಪ್ರಜ್ವಲಿಸಿದರು.


ವ್ಯಕ್ತಿತ್ವ ವಿಕಸನದಲ್ಲಿ- ಪ್ರಾರ್ಥನೆ, ಶ್ಲೋಕಗಳು, ಭಜನೆ ಹಾಡುಗಳು,ಮಕ್ಕಳ ಕಥೆಗಳು, ರಾಮಾಯಣ ಮತ್ತು ಮಹಾಭಾರತದ ಕಥೆಗಳ ಸಿಂಚನ. ಶೈಕ್ಷಣಿಕವಾಗಿ: ಮಾತನಾಡೋಣ ಇಂಗ್ಲೀಷ್, ಪಠ್ಯ ವಿಷಯಾಧಾರಿತ ಸಮಸ್ಯೆಗಳ ಬೋಧನೆ. ನೃತ್ಯಾಭ್ಯಾಸದಲ್ಲಿ: ಭರತನಾಟ್ಯ, ಯಕ್ಷಗಾನದ ನೃತ್ಯಗಳು, ಅರೆ ಸಾಂಪ್ರಾಯಿಕ (ಸೆಮಿ ಕ್ಲಾಸಿಕಲ್), ಸಿನಿಮೀಯ ನೃತ್ಯ(ಫಿಲ್ಮೀ), ಪಾಶ್ಚಾತ್ಯ(ವೆಸ್ಟರ್ನ್), ಜನಪದ ನೃತ್ಯಗಳು, ಕುಣಿತ ಭಜನೆ, ಕೋಲಾಟ, ಹುಲಿಕುಣಿತದ ಹೆಜ್ಜೆಗಳು, ನೃತ್ಯ ರೂಪಕಗಳು. ವಿಶೇಷವಾಗಿ ಗಂಡುಮಕ್ಕಳಿಗಾಗಿ: ಕಿರುನಾಟಕಗಳು, ಪ್ರಹಸನಗಳು, ಅಭಿನಯ ಮತ್ತು ಮಾತುಗಾರಿಕೆ. ಆಟದಲ್ಲಿ: ಮಕ್ಕಳು ಮೊಬೈಲ್‌ನಿಂದ ದೂರವಿರಲು ಒಳಾಂಗಣ ಆಟಗಳು, ಚೆಸ್,ಲೂಡೋ, ಕೇರಂ ಹಳೆ ಕಾಲದ ಕೆಲವು ಗ್ರಾಮೀಣ ಆಟಗಳು.

ದಾಖಲಾತಿ ಆರಂಭಗೊಂಡಿದೆ
ಹೊಸ ಮಕ್ಕಳ ನೋಂದಾವಣೆ ಆರಂಭಗೊಂಡಿದ್ದು ಪ್ರತಿ ಆದಿತ್ಯವಾರ ತರಗತಿ ನಡೆಯಲಿದ್ದು, ಮಗುವಿಗೆ ವಾರಕ್ಕೆ ರೂ.೫೦,ತಿಂಗಳ ದರ ರೂ.೨೦೦ ಆಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಮೊ.8105701930ಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here