ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಆ.20ರಂದು ‘ರಕ್ಷಾಬಂಧನ’ ಆಚರಿಸಲಾಯಿತು.
ಅತಿಥಿ ವಾಗ್ಮಿ ಬಿ.ಗಣರಾಜ ಭಟ್ ಕೆದಿಲ ಭಾರತಮಾತಗೆ ಪುಷ್ಪಾರ್ಚನೆ ಗೈದು ರಕ್ಷೆಯನ್ನು ಕಟ್ಟಿ, ರಕ್ಷೆಯ ಮಹತ್ವ, ಮತ್ತು ರಕ್ಷಾ ಬಂಧನದ ಮಹತ್ವ ಅದರ ವಿಶೇಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ನುಡಿಗಳೊಂದಿಗೆ ಶುಭ ಹಾರೈಸಿದರು.
ಶಾಲಾ ಕಾರ್ಯಕ್ರಮದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ್ ಗೌಡ ಉಪಸ್ಥಿತರಿದ್ದರು.ರಕ್ಷೆಯನ್ನು ವಿದ್ಯಾರ್ಥಿಗಳೆಲ್ಲರೂ ಪರಸ್ಪರ ಕಟ್ಟಿಕೊಂಡು ಸಂಭ್ರಮಿಸಿದರು. ಶಿಕ್ಷಕಿ ಸವಿತಾ ರಕ್ಷಾಬಂಧನಾದ ಸಂದೇಶ ವಾಚಿಸಿದರು. ಸುಪ್ರಜಾ ರಾವ್ ವೈಯಕ್ತಿಕ ಗೀತೆ ಹಾಡಿದರು. ಶಿಕ್ಷಕಿ ಸ್ವಾತಿ ಕಾಮತ್ ಅತಿಥಿಗಳನ್ನು ಸ್ವಾಗತಿಸಿ, ವೆಂಕಟೇಶ್ ಪ್ರಸಾದ್ ವಂದಿಸಿದರು. ಶಿವಾನಿ ಗಣಪತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲೆಯ ಶಿಕ್ಷಕ ಶಿಕ್ಷಕೇತರ ಬಂಧುಗಳು ಸಹಕರಿಸಿದರು.