ಬಿಲ್ಲವ ಸಂಘದಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 170ನೇ ಜನ್ಮದಿನಾಚರಣೆ-ಬೆಳ್ಳಿಕಿರೀಟ ಸಮರ್ಪಣೆ

0


ಸ್ವಾಭಿಮಾನದ ಬದುಕಿಗೆ ನಾಂದಿ ಹಾಡಿದವರು ನಾರಾಯಣ ಗುರುಗಳು-ಪ್ರೊ|ಕೃಷ್ಣಪ್ಪ ಪೂಜಾರಿ

ಪುತ್ತೂರು: ಶೂದ್ರ ಸಮಾಜದಲ್ಲಿ ಹುಟ್ಟಿದ ನಾರಾಯಣ ಗುರುಗಳು ಜಗಜ್ಯೋತಿಯಾಗಿ ಬೆಳೆದರು. ಯಾವುದೇ ಕ್ಷೇತ್ರವಿರಲಿ ಸ್ವಾಭಿಮಾನದ ಬದುಕನ್ನು ಹೇಗೆ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟವರು. ಅಂತರಂಗದ ಜ್ಯೋತಿಯನ್ನು ಬೆಳಗಿಸಿದ ಪ್ರಾತಃಸ್ಮರಣೆಯುಳ್ಳವರು. ನಾರಾಯಣ ಗುರುಗಳ ಸ್ವಾಭಿಮಾನದ ಆದರ್ಶದ ಬದುಕು ನಮ್ಮ ಜೀವನಕ್ಕೆ ನಾಂದಿ ಹಾಡಬಲ್ಲುದು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ|ಎ.ಕೃಷ್ಣಪ್ಪ ಪೂಜಾರಿ ಬೆಳ್ತಂಗಡಿರವರು ಹೇಳಿದರು.


ಆ.20 ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ವತಿಯಿಂದ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 170 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಗುರು ಸಂದೇಶ ನೀಡುವ ಮೂಲಕ ಮಾತನಾಡಿದರು. ಜಾತಿ, ಧರ್ಮದ ಹೆಸರಿನಲ್ಲಿ ಇಂದು ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೊಡೆದಾಟ ಪ್ರಾರಂಭವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದ ಸಂದೇಶ ಒಂದೇ ಜಾತಿ, ಒಂದೇ ಮತ, ಓಂದೇ ದೇವರು ಇದು ಎಲ್ಲಿದೆ?. ನಾರಾಯಣ ಗುರುಗಳ ಸಂದೇಶದಂತೆ ನಾವು ಪರಸ್ಪರರನ್ನು ಪ್ರೀತಿಸುವುದನ್ನು, ಪರಸ್ಪರರ ಕಷ್ಟ-ಸುಖದಲ್ಲಿ ಭಾಗಿಗಳಾಗುವುದನ್ನು ಕಲಿತಾಗ ನಾರಾಯಣ ಗುರುಗಳ ಸಂದೇಶಕ್ಕೆ ಮಹತ್ವ ಬರುತ್ತದೆ ಎಂದ ಅವರು ನಮ್ಮ ಜೀವನದಲ್ಲಿ ಅನ್ನ, ನೀರು, ಮಣ್ಣು, ತಂದೆ-ತಾಯಿ ಹೇಗೆ ಪ್ರಾಮುಖ್ಯ ಪಡೆದಿದೆಯೋ ಹಾಗೆಯೇ ನಾರಾಯಣ ಗುರುಗಳ ಸಂದೇಶವೂ ಪ್ರಾಮುಖ್ಯ ಪಡೆದಿದೆ. ಬದುಕಿನಲ್ಲಿ ನಾವು ಕೃತಜ್ಞರಾಗಬೇಕೇ ವಿನಹ ಕೃತಘ್ನರಾಗಬಾರದು. ವಿದ್ಯಾರ್ಥಿಗಳಲ್ಲಿ ಕೀಳಿರಿಮೆ ಇರಬಾರದು, ಕೀಳಿರಿಮೆ ಇದ್ದಲ್ಲಿ ಬದುಕಿನಲ್ಲಿ ಸೋಲನ್ನು ಕಾಣುವಿರಿ. ನಾವು ಯಾವ ಜಾತಿಯಲ್ಲೇ ಹುಟ್ಟಿರಲಿ, ನಮ್ಮ ಜಾತಿಯ ಬಗ್ಗೆ ಗೌರವವಿರಲಿ. ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ದೈವಪ್ರೀತಿ, ಪಾಪ ಭೀತಿಯೊಂದಿಗೆ ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ರೂಢಿಸಿಕೋಳ್ಳುವಂತಾಗಬೇಕು ಎಂದು ಅವರು ಹೇಳಿದರು.

ಚಿತ್ರ: ಕೃಷ್ಣಾ ಪುತ್ತೂರು


ವಿವಿಧ ಸಮಾಜದಲ್ಲಿನ ಗಣ್ಯರನ್ನು ಸನ್ಮಾನಿಸುವುದು ಶ್ಲಾಘನೀಯ-ಭಾಸ್ಕರ್ ಕೋಟ್ಯಾನ್:
ಮುಖ್ಯ ಅತಿಥಿ, ಮಂಗಳೂರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಬೆಳುವಾಯಿ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್
ಮಾತನಾಡಿ, ಪುತ್ತೂರಿನ ಬಿಲ್ಲವ ಸಂಘವು ನಾರಾಯಣ ಗುರುಗಳ ಜನ್ಮದಿನಾಚರಣೆಯನ್ನು ಬಹಳ ಶಿಸ್ತುಬದ್ಧವಾಗಿ, ಚೊಕ್ಕವಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಮಾತ್ರವಲ್ಲ ಪುತ್ತೂರಿನ ಬಿಲ್ಲವು ಸಂಘವು ನಿರ್ವಹಿಸುತ್ತಿರುವ ಪ್ರತಿಯೊಂದು ಕಾರ್ಯವು ಬೇರೆ ಎಲ್ಲಿ ಸಿಗದು. ಅದರಲ್ಲೂ ವಿವಿಧ ಸಮಾಜದಲ್ಲಿನ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಮತ್ತೂ ಶ್ಲಾಘನೀಯ ಎಂದರು.


ನಾರಾಯಣ ಗುರುಗಳು ಸಮಾಜದ ಸುಧಾರಕರಾಗಿ ಹೋರಾಟ ಮಾಡಿದವರು-ಡಾ.ಸದಾನಂದ ಪೂಜಾರಿ:
ಕರ್ನಾಟಕ ಸರಕಾರದ ಡಾ.ಬಿ.ಸಿ ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಮೂತ್ರಕೋಶ ವಿಭಾಗ ಮುಖ್ಯಸ್ಥರಾದ ಮೂತ್ರಕೋಶ ತಜ್ಞ ಡಾ.ಸದಾನಂದ ಪೂಜಾರಿ ಮಾತನಾಡಿ, ನಾರಾಯಣ ಗುರುಗಳು ಯಾವುದೇ ಕ್ರಾಂತಿ ಹಾಗೂ ಸಂಘರ್ಷದ ಮೂಲಕ ಹೋರಾಟ ಮಾಡಿದವರಲ್ಲ. ಬದಲಾಗಿ ಎಲ್ಲಾ ಜಾತಿಯವರನ್ನು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬಂತೆ ನೋಡಿಕೊಂಡು ಎಲ್ಲರಿಗೂ ಶಿಕ್ಷಣ ಸಿಗಬೇಕು, ದೇವಸ್ಥಾನವನ್ನು ಪ್ರವೇಶಿಸಬೇಕು ಎಂದು ಸಮಾಜದ ಉದ್ಧಾರಕ್ಕಾಗಿ ಸಮಾಜದ ಸುಧಾರಕರಾಗಿ ಹೋರಾಡಿದವರು. ಪ್ರಸ್ತುತ ಇರುವ ದೇಶದ ರಾಷ್ಟ್ರೀಯ ಶಿಕ್ಷಣ ಪದ್ಧತಿಯು ನಾರಾಯಣ ಗುರುಗಳ ಪ್ರೇರಣೆಯಿಂದ ಬಂದದ್ದಾಗಿದೆ ಎಂದ ಅವರು ಪ್ರಸಕ್ತ ಯುವಪೀಳಿಗೆ ಸಮಾಜದಲ್ಲಿನ ಸಾಧಕರ ಸಾಧನೆಯನ್ನು ಗಮನಿಸಿ ತಾವೂ ಮುಂದಿನ ದಿನಗಳಲ್ಲಿ ಸಾಧನೆ ಮಾಡುವ ತವಕವನ್ನು ಇಟ್ಟುವವರಾಗಬೇಕು, ಸಮಾಜವನ್ನು ಅಭಿವೃದ್ಧಿಯತ್ತ ಮುನ್ನಡೆಸುವಂತಾಗಬೇಕು ಎಂದು ಅವರು ಹೇಳಿದರು.


ಕುದ್ರೋಳಿ ಬಳಿಕ ಪುತ್ತೂರಿನಲ್ಲಿಯೇ ನಾರಾಯಣ ಗುರುಗಳಿಗೆ ಬೆಳ್ಳಿ ಕಿರೀಟ-ಸತೀಶ್ ಕೆಡೆಂಜಿ:
ಅಧ್ಯಕ್ಷತೆ ವಹಿಸಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ನಾರಾಯಣ ಗುರುಗಳ ತತ್ವ ಸಂದೇಶವಾದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬಂತೆ ಪುತ್ತೂರು ಬಿಲ್ಲವ ಸಂಘವು ಕಾರ್ಯಾಚರಿಸುತ್ತಿದೆ. ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಮಾತ್ರ ನಾರಾಯಣ ಗುರುಗಳಿಗೆ ಬೆಳ್ಳಿ ಕಿರೀಟವು ಇದ್ರೆ ಇದೀಗ ಪುತ್ತೂರಿನ ಬಿಲ್ಲವ ಸಮಾಜ ಬಾಂಧವರ ಕೊಡುಗೆಯ ಮೂಲಕ ನಾರಾಯಣ ಗುರುಗಳಿಗೆ ಬೆಳ್ಳಿ ಕಿರೀಟದ ಅರ್ಪಣೆ ಆಗಿದೆ. ಪ್ರಸಕ್ತ ಸಾಲಿನಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನಿಂದ ಸುಮಾರು ಮೂರು ಸಾವಿರದಷ್ಟು ಗುರು ಪೂಜೆ ನಡೆಯಲ್ಪಟ್ಟಿದೆ ಎಂದ ಅವರು ಸಂಘಟನೆಯು ಯಶಸ್ವಿಯಾಗಬೇಕಾದರೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂಬುದಕ್ಕೆ ಇಂದಿಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಯಾರು ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ಪಡೆದಿದ್ದಾರೆಯೋ ಅವರುಗಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿದಾಗ ಸಂಘಕ್ಕೆ ಆಧಾರಸ್ತಂಭವಾಗಬೇಕು ಎಂದು ಅವರು ಹೇಳಿದರು.


ಮಾಜಿ ಅಧ್ಯಕ್ಷರುಗಳಿಗೆ ಗೌರವ:
ಪುತ್ತೂರು ಬಿಲ್ಲವ ಸಂಘವನ್ನು ಮುನ್ನೆಡೆಸಿದ ಅಧ್ಯಕ್ಷರುಗಳಾದ ಬಾಳಪ್ಪ ಪೂಜಾರಿ ಕೇಪುಳು, ಕೆ.ಪಿ ದಿವಾಕರ್, ಎಂ.ವರದರಾಜ್, ವಿಜಯಕುಮಾರ್ ಸೊರಕೆ, ಪಿ.ಶೇಷಪ್ಪ ಬಂಗೇರ, ಜಯಂತ್ ನಡುಬೈಲುರವರುಗಳನ್ನು ಗುರುತಿಸಿ ಗೌರವಿಸಲಾಯಿತು.


ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:
ಸಮಾಜ ಬಾಂಧವರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಸಿನಿಮಾ ಕ್ಷೇತ್ರದಲ್ಲಿ ರವಿ ಸ್ನೇಹಿತ್ ನಡುಬೈಲು, ಕಲಾ ಕ್ಷೇತ್ರದಲ್ಲಿ ಎ.ಎಸ್ ದಯಾನಂದ, ಕ್ರೀಡಾ ಕ್ಷೇತ್ರದಲ್ಲಿ ಕು.ಸೌಮ್ಯರವರನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರಾರವರು ನೀಡಿದರು.


ವಿದ್ಯಾನಿಧಿಗೆ ಕೊಡುಗೆ ನೀಡಿದವರಿಗೆ ಗೌರವ:
ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಈ ಯೋಜನೆಗೆ ಪ್ರಸಕ್ತ ವರ್ಷ ರೂ.೫೦ ಸಾವಿರ ದೇಣಿಗೆ ನೀಡಿದ ಬೊಳ್ವಾರು ಸ್ನೇಹ ಸಿಲ್ಕ್ಸ್ ಆಂಡ್ ರೆಡಿಮೇಡ್ ಇದರ ಮಾಲಕ ಸತೀಶ್ ಎಸ್., ರೂ.25 ಸಾವಿರ ದೇಣಿಗೆ ನೀಡಿದ ಜನಾರ್ದನ ಪೂಜಾರಿ ಪದಡ್ಕರವರನ್ನು ಹಾಗೂ ರೂ.10 ಸಾವಿರಕ್ಕೂ ಮೇಲ್ಪಟ್ಟು ದೇಣಿಗೆ ನೀಡಿದವರನ್ನು ಗುರುತಿಸಿ ಗೌರವಿಸಲಾಯಿತು.


ಶೈಕ್ಷಣಿಕ/ಕ್ರೀಡಾ ಸಾಧಕರಿಗೆ ಅಭಿನಂದನೆ;
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಕ್ಷಿ ಕೃಷ್ಣ, ವಿಶಾಲ್ ಪಿ, ಸನ್ನಿಧಿ ಎನ್, ಯಶಸ್ವಿ ಎಸ್.ಸುವರ್ಣ, ಜಿಸ್ಮಿತಾ ಕೆ, ಮೋಕ್ಷಿತ್ ಪಿ.ಎಸ್, ಸೃಷ್ಟಿ ಎಸ್.ಪಿ, ತನ್ಮಯ್ ಎಚ್.ಸುವರ್ಣ, ಪ್ರಹರ್ಷ, ಮನ್ವಿತಾ ಬಿ.ವಿ, ಪಿಯುಸಿ ಪರೀಕ್ಷೆಯಲ್ಲಿ ನಿಶಿತಾ ಪಿ.ಆರ್, ಸುಹಾನಿ ಎಸ್.ಕೆ, ಸೃಜನ್ ಎನ್.ಕೆ, ದಿಶಾ ಜಿ, ಚಿಂತನ್ ಎನ್, ತನುಶ್ರೀ ಸಿ.ಕೆ, ಧನುಶ್ರೀ ಸಿ.ಕೆ, ಬಿ.ಸ್ವಾತಿ, ನಿಶಾನ್ ಕುಮಾರ್, ಸಂಜನಾ ಯು, ಪ್ರಣಾಮ್ ಬಿ, ಪ್ರಥಮ್ ಬಿ, ಚಿತ್ರಲೇಖ, ಕ್ಷಮಾ ಬಿ, ಸ್ಪೂರ್ತಿ, ಲಕ್ಷ್ಮಿಪ್ರಿಯ ಬಿ, ರಿಶಿಕಾ, ಕೆ.ಪ್ರತಾಪ್ ಅಂಚನ್, ಅಂಚಿತ್ ಜೆ, ಎ.ಚಿತ್ರರಾಜ್, ನಿಖಿಲ್, ದಿಶಾ ಕೆ, ಅನನ್ಯ ಕೆ, ಸೃಜನಾ ಎಸ್, ಕೃತಿ ಕಲ್ಕಾರ್, ನೀಕ್ಷಾ ವಿ.ಸುವರ್ಣ, ಪದವಿ ವಿಭಾಗದಲ್ಲಿ ನಿಶ್ಮಿತಾ ಎ, ಜನನಿ ಬಿ, ಸುಪ್ರೀತಾ, ಸವಿತಾ ಕೆ, ಮನೀಷಾ ಎ, ಶ್ರೇಯಾ, ದೇವದಾಸ್, ಧನುಷ್ ಎಂ.ಆರ್, ದಿತೇಶ್, ದೀಪಿಕಾ, ಸ್ವಾತಕೋತ್ತರ ಪರೀಕ್ಷೆಯಲ್ಲಿ ಶರಣ್ಯ ಕೆ, ಭೂಮಿಕಾ, ರವರುಗಳನ್ನು ಅಭಿನಂದಿಸಲಾಯಿತು.
ಬಿಇ ಪರೀಕ್ಷೆಯಲ್ಲಿ ಭೂಮಿಕಾ, ಬಿಕಾಂ ಪರೀಕ್ಷೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸನ್ಮಿತ್ ಆರ್.ಸಿ(ಹರ್ಡಲ್ಸ್), ಎಂ.ಎಸ್ ಚೈತನ್ಯ(ಅಥ್ಲೆಟಿಕ್ಸ್), ಸಾತ್ವಿಕ್ ಆರ್.ಸಿ(ಹರ್ಡಲ್ಸ್), ಸನ್ನಿಧಿ(ಕಬಡ್ಡಿ),ಸಾನ್ವಿ ಎಸ್.ಪಿ(ಅಥ್ಲೆಟಿಕ್ಸ್, ಸ್ಪಂದನಾ ಜೆ.ಆರ್(ಟೇಬಲ್ ಟೆನ್ನಿಸ್), ಕೀರ್ತೇಶ್ ಪಿ(ಕರಾಟೆ)ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.


ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರಿಗೆ ಗೌರವ:
2023-25ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಪಿ.ಆನಂದ ಟೈಲರ್, ಬಾಳಪ್ಪ ಪೂಜಾರಿ ಕೇಪುಳು, ಕೆ.ಪಿ ದಿವಾಕರ್, ಜಯಂತ್ ನಡುಬೈಲು, ಪಿ.ಆನಂದ ಪೂಜಾರಿ, ಶೀನಪ್ಪ ಪೂಜಾರಿ, ಜಯರಾಮ ಕರ್ಮಲ, ಅವಿನಾಶ್ ಹಾರಾಡಿ, ವೇದಾವತಿ, ಸಂಗೀತಾ ಮನೋಹರ್, ಜಯಲಕ್ಷ್ಮೀ ಸುರೇಶ್ ಕೇಪುಳು, ದೇವಿಕಾ ಬನ್ನೂರು, ವಲಯ ಸಂಚಾಲಕರಾದ ಕಿರಣ್ ಬಸಂತಕೋಡಿ, ಅಣ್ಣಿ ಪೂಜಾರಿ ಅನಂತಿಮಾರ್, ಅಶೋಕ್ ಕುಮಾರ್ ಪಡ್ಪು, ಡಾ.ಸದಾನಂದ ಕುಂದರ್, ಮಾಧವ ಪೂಜಾರಿ ರೆಂಜ, ಜಯಂತ್ ಕೆಂಗುಡೇಲು, ಯತೀಶ್ ಪೂಜಾರಿ ಕಾವು, ಹರೀಶ್ ಎಂ.ಕೆ, ಸಂತೋಷ್ ಪೂಜಾರಿ ಮರಕ್ಕಡ, ದಯಾನಂದ ಆಲಂಕಾರು, ಸುಂದರ ಪೂಜಾರಿ ಅಂಗಣ, ಸತೀಶ್ ಕೆ.ಐತೂರು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳಾದ ಮಹಿಳಾ ಘಟಕದ ಅಧ್ಯಕ್ಷೆ ವಿಮಲ ಸುರೇಶ್, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ ಬಿ.ಎನ್, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಸೋಮಸುಂದರ್, ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ಬ್ರಹ್ಮಶ್ರೀ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಜಯಂತ್ ನಡುಬೈಲು, ೫೧ ವಿವಿಧ ಗ್ರಾಮ ಸಮಿತಿ ಅಧ್ಯಕ್ಷರಾದ ಕೇಶವ ಪೂಜಾರಿ ಬೆದ್ರಾಳ(ಪುತ್ತೂರು ನಗರ), ಚಂದ್ರಶೇಖರ(ಬಲ್ನಾಡು), ಚಂದಪ್ಪ ಪೂಜಾರಿ(ಬುಳೇರಿಕಟ್ಟೆ), ಕೇಶವ ಪಿ(ಕೊಡಿಪ್ಪಾಡಿ), ಪ್ರಕಾಶ್ ಪೂಜಾರಿ(ಕೆಮ್ಮಿಂಜೆ), ವಾಸು ಕೆ(ಪಡ್ನೂರು), ಭಾಸ್ಕರ ಬಿ(ಚಿಕ್ಕಮುಡ್ನೂರು), ವಸಂತ ಪೂಜಾರಿ(ಬೆಳ್ಳಿಪ್ಪಾಡಿ), ಜಯಪ್ರಕಾಶ್ ಕೆ(ಕೋಡಿಂಬಾಡಿ), ವಸಂತ ಪೂಜಾರಿ(ಕಬಕ), ವಸಂತ ಕುಕ್ಕುಜೆ(ಉಪ್ಪಿನಂಗಡಿ), ನವೀನ್ ಪಿ(ಹಿರೇಬಂಡಾಡಿ), ಸೋಮಸುಂದರ(ಬಜತ್ತೂರು), ಅಜಿತ್ ಕುಮಾರ್(ಗೋಳಿತೊಟ್ಟು), ಮಾಧವ ಪೂಜಾರಿ(ಶಿರಾಡಿ), ಶ್ರೀನಿವಾಸ ಸಿ(ಇಚ್ಲಂಪಾಡಿ), ಮೋಹನ್ ಕುಮಾರ್(ನೆಲ್ಯಾಡಿ), ರವಿ ಸುವರ್ಣ(ಆರ್ಯಾಪು), ಶಶಿಧರ್ ಕಿನ್ನಿಮಜಲು(ಕುರಿಯ), ಚಿದಾನಂದ ಸುವರ್ಣ(ಕುಂಜೂರುಪಂಜ), ವಿಠಲ ಪೂಜಾರಿ(ಬೆಟ್ಟಂಪಾಡಿ), ವಿಶ್ವನಾಥ ಪೂಜಾರಿ(ಪಾಣಾಜೆ), ರಮೇಶ್ ಪೂಜಾರಿ(ನಿಡ್ಪಳ್ಳಿ), ಉಮೇಶ್ ಕುಮಾರ್(ಒಳಮೊಗ್ರು), ಬಾಲಕೃಷ್ಣ ಪಿ(ಕೆಯ್ಯೂರು), ಬಾಲಪ್ಪ ಸುವರ್ಣ(ಕೆದಂಬಾಡಿ), ಲಿಂಗಪ್ಪ ಪೂಜಾರಿ(ಕೊಳ್ತಿಗೆ), ಭರತ್ ಪೂಜಾರಿ(ಅರಿಯಡ್ಕ), ಕರುಣಾಕರ್ ಸಾಲ್ಯಾನ್(ಪಾಲ್ತಾಡಿ), ಜನಾರ್ದನ ಪೂಜಾರಿ(ಸುಳ್ಯಪದವು), ನಾರಾಯಣ ಪೂಜಾರಿ(ನೆಟ್ಟಣಿಗೆ ಮುಡ್ನೂರು), ಮೋನಪ್ಪ ಪೂಜಾರಿ(ಕಾವು), ವೇದನಾಥ ಸುವರ್ಣ(ನರಿಮೊಗರು), ವಿನಯ ಜಿ(ಆನಡ್ಕ), ರವಿಕುಮಾರ್ ಕೆ(ಶಾಂತಿಗೋಡು), ರಾಮಕೃಷ್ಣ ಎಸ್.ಡಿ(ಸರ್ವೆ), ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್(ಮುಂಡೂರು), ಸತೀಶ್ ಕುಮಾರ್ ಕೆಡೆಂಜಿ(ಕುದ್ಮಾರು), ಗಂಗಾಧರ ಸುಣ್ಣಾಟೆ(ಸವಣೂರು), ದಿನೇಶ್ ಕೇಪುಳು(ಆಲಂಕಾರು), ಪುರುಷೋತ್ತಮ(ಹಳೇನೇರಂಕಿ), ವೇಣುಗೋಪಾಲ್ ಪೂಜಾರಿ(ರಾಮಕುಂಜ), ಹರ್ಷಿತ್ ಮಾಯಿಲ್ಗ(ಪೆರಾಬೆ), ಹರೀಶ್ ಡಿ.ಎಚ್(ಬಲ್ಯ), ಲಕ್ಷ್ಮೀಶ ಬಂಗೇರ(ಕಡಬ), ಸುರೇಶ್ ಎಸ್(ಕೋಡಿಂಬಾಳ), ವಸಂತ ಪೂಜಾರಿ(ನೂಜಿಬಾಳ್ತಿಲ), ಸಂಜೀವ ಪೂಜಾರಿ(ರೆಂಜಿಲಾಡಿ), ಧನಂಜಯ(ಬಂಟ್ರ-ಐತೂರು-102 ನೆಕ್ಕಿಲಾಡಿ), ನೋಣಯ್ಯ ಕೆ(ಕೊಂಬಾರು)ರವರುಗಳನ್ನು ಗೌರವಿಸಲಾಯಿತು.


ಪತ್ರಕರ್ತರಿಗೆ ಗೌರವ:
ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಚಾರ ನೀಡುವ ಪತ್ರಕರ್ತರಾದ ಸುಧಾಕರ ಸುವರ್ಣ(ವಿಜಯ ಕರ್ನಾಟಕ), ಮೇಘ ಪಾಲೆತ್ತಾಡಿ(ಸಂಯುಕ್ತ ಕರ್ನಾಟಕ), ಸಂತೋಷ್ ಮೊಟ್ಟೆತ್ತಡ್ಕ(ಸುದ್ದಿ ಬಿಡುಗಡೆ), ರಾಜೇಶ್ ಪಟ್ಟೆ(ಹೊಸ ದಿಗಂತ), ವಿನೋದ್(ನ್ಯೂಸ್ ಪುತ್ತೂರು), ಅನೀಶ್(ನಮ್ಮ ಕುಡ್ಲ), ಪತ್ರಿಕಾ ಛಾಯಾಗ್ರಾಹಕ ಕೃಷ್ಣಾ ಸ್ಟುಡಿಯೋದ ಹರೀಶ್ ಮತ್ತು ಎಲ್‌ಇಡಿ ಒದಗಿಸಿದ ಪ್ರಜ್ವಲ್‌ರವರನ್ನು ಗೌರವಿಸಲಾಯಿತು.


ಸಹಕಾರ:
ತಾಲೂಕಿನ 51 ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ವೇದಿಕೆ ಪುತ್ತೂರು, ಯುವವಾಹಿನಿ ಪುತ್ತೂರು ಘಟಕ, ಉಪ್ಪಿನಂಗಡಿ ಹಾಗೂ ಕಡಬ ಘಟಕಗಳು, ಪುತ್ತೂರು ಬಿಲ್ಲವ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.


ಕು.ವಿನೀಶ ಸುಳ್ಯಪದವು ಪ್ರಾರ್ಥಿಸಿದರು. ಪುತ್ತೂರು ಬಿಲ್ಲವ ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರಾ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯ ಕೋಲಾಡಿ, ಕಾರ್ಯದರ್ಶಿ ಚಿದಾನಂದ ಸುವರ್ಣ, ಉಪಾಧ್ಯಕ್ಷೆ ವಿಮಲ ಸುರೇಶ್ ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಶೈಕ್ಷಣಿಕ ಕ್ಷೇತ್ರದ ಟಾಪರ್ ಪ್ರತಿಭೆಗಳ ಹೆಸರನ್ನು ವಿದ್ಯಾನಿಧಿ ಸಂಚಾಲಕ ಡಾ.ಸದಾನಂದ ಕುಂದರ್, ಕ್ರೀಡಾ ಪ್ರತಿಭೆಗಳ ಹೆಸರನ್ನು ಬಾಲಕೃಷ್ಣ ಪಲ್ಲತ್ತಾರು, ಎಸೆಸ್ಸೆಲ್ಸಿ/ಪಿಯುಸಿ/ಪದವಿ/ಸ್ನಾತಕೋತ್ತರ ಪ್ರತಿಭಾವಂತರ ಹೆಸರನ್ನು ವಿದ್ಯಾನಿಧಿ ಯೋಜನೆಯ ಸದಸ್ಯ ಜನಾರ್ದನ ಪೂಜಾರಿ ಪದಡ್ಕರವರು ಓದಿದರು. ಸನ್ಮಾನಿತ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರವರ ಸನ್ಮಾನ ಪತ್ರವನ್ನು ಬಿಲ್ಲವ ಮಹಿಳಾ ವೇದಿಕೆಯ ಸಂಚಾಲಕಿ ಉಷಾ ಅಂಚನ್ ನೆಲ್ಯಾಡಿ, ಡಾ.ಸುಬ್ರಾಯ ಭಟ್ ರವರ ಸನ್ಮಾನ ಪತ್ರವನ್ನು ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ ಬಿ.ಎನ್, ಬಾಳಪ್ಪ ಪೂಜಾರಿ ಕೇಪುಳುರವರ ಸನ್ಮಾನ ಪತ್ರವನ್ನು ಯುವವಾಹಿನಿ ಉಪ್ಪಿನಂಗಡಿ ಘಟಕದ ಮಾಜಿ ಅಧ್ಯಕ್ಷ ನವೀನ ಪಿ,ರವರು ಓದಿದರು. ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ ವಂದಿಸಿದರು. ದಯಾನಂದ ಕರ್ಕೇರಾ ಉಡುಪಿ ಹಾಗೂ ದೀಕ್ಷಾ ಸಾಲಿಯಾನ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಪ್ರಸಾದ ಭೋಜನ ಜರಗಿತು.


ಬೆಳ್ಳಿ ಕಿರೀಟ ಸಮರ್ಪಣೆ..
ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆ ಪ್ರಯುಕ್ತ ಸಮಾಜ ಬಾಂಧವರ ಕೊಡುಗೆಯಿಂದ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ನೇತೃತ್ವದಲ್ಲಿ ಎಲ್ಲರ ಕೂಡುವಿಕೆಯಿಂದ ಗುರುನಾರಾಯಣ ಮಂದಿರದಲ್ಲಿನ ನಾರಾಯಣ ಗುರುಗಳ ಪ್ರತಿಮೆಗೆ ಬೆಳ್ಳಿ ಕಿರೀಟವನ್ನು ತೊಡಿಸುವ ಮೂಲಕ ಪ್ರತಿಷ್ಠಾಪಿಸಲಾಯಿತು. ದ.ಕ ಜಿಲ್ಲೆಯಲ್ಲಿ ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ನಾರಾಯಣ ಗುರುಗಳಿಗೆ ಬೆಳ್ಳಿ ಕಿರೀಟ ಸಮರ್ಪಣೆ ಮಾಡಿದ್ದರೆ ಬಳಿಕ ಮಾಡಿರುವುದು ಪುತ್ತೂರಿನಲ್ಲೇ ಎಂಬುದು ವಿಶೇಷತೆ.

ಸಾಧಕರಿಗೆ ಸನ್ಮಾನ..
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ‘ಸಹಕಾರ ರತ್ನ’ ಕೆ.ಸೀತಾರಾಮ ರೈ ಸವಣೂರು, ಆರೋಗ್ಯ ಕ್ಷೇತ್ರದಲ್ಲಿ ಹಿರಿಯ ವೈದ್ಯ, ನಿವೃತ್ತ ಪ್ರಸೂತಿ ತಜ್ಞರಾದ ಡಾ.ಸುಬ್ರಾಯ ಭಟ್, ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಕೃಷಿಕರ ಹಾಗೂ ಬಿಲ್ಲವ ಸಂಘದ ಹಿರಿಯ ಸದಸ್ಯ ಬಾಳಪ್ಪ ಪೂಜಾರಿ ಕೇಪುಳುರವರನ್ನು ಗುರುತಿಸಿ ಸನ್ಮಾನಿಸಲಾಯಿತು.

250 ಮಿಕ್ಕಿ ವಿದ್ಯಾರ್ಥಿಗಳು..
ರೂ.5 ಲಕ್ಷ ವೆಚ್ಚ..

ಬಿಲ್ಲವ ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಸಹಾಯಧನ, ಪ್ರತಿಭಾ ಪುರಸ್ಕಾರ ಇತ್ಯಾದಿ ಉದ್ಧೇಶಗಳಿಗಾಗಿ ಸ್ಥಾಪಿಸಿದ ವಿನೂತನ ವಿದ್ಯಾನಿಧಿ ಯೋಜನೆಯಡಿಯಲ್ಲಿ ಸುಮಾರು 250ಕ್ಕೂ ವಿದ್ಯಾರ್ಥಿಗಳಿಗೆ ಸುಮಾರು ರೂ.೫ ಲಕ್ಷ ವೆಚ್ಚದಲ್ಲಿ ವಿದ್ಯಾನಿಧಿಯನ್ನು ನೀಡಲಾಗಿದೆ ಎಂದು ವಿದ್ಯಾನಿಧಿ ಯೋಜನೆಯ ಸಂಚಾಲಕ ಡಾ.ಸದಾನಂದ ಕುಂದರ್‌ರವರು ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮ..
ಬೆಳಿಗ್ಗೆ ಶ್ರೀ ಕ್ಷೇತ್ರ ಕುದ್ರೋಳಿಯ ಶಾಂತಿವರ್ಯರ ನೇತೃತ್ವದಲ್ಲಿ ಪ್ರಾರ್ಥನೆ, ಗಣಹೋಮ, ಪಂಚಾಮೃತಾಭಿಷೇಕ, ಬಳಿಕ ಆಲಂಕಾರು, ಶಾಂತಿಗೋಡು, ಸುಳ್ಯಪದವು ಬಿಲ್ಲವ ಗ್ರಾಮ ಸಮಿತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.

LEAVE A REPLY

Please enter your comment!
Please enter your name here