ನಿವ್ವಳ ಲಾಭ ರೂ.11,79,058.74
* ಶೇ. 8.5 ಡಿವಿಡೆಂಡ್ ಘೋಷಣೆ
ಪುತ್ತೂರು: ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಮಹಾಸಭೆಯು ಆ.18 ರಂದು ತಿಂಗಳಾಡಿ ಶ್ರೀ ಲಕ್ಷ್ಮೀ ಸಂಕೀರ್ಣದ ಆವರಣದಲ್ಲಿರುವ ಮುಖ್ಯ ಕಛೇರಿ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಹಕಾರಿಯ ಅಧ್ಯಕ್ಷ ಹರೀಶ ಪುತ್ತೂರಾಯರು ವಹಿಸಿದ್ದು ಬಂದ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು.
ಸಹಕಾರಿಯ 2023-24ನೇ ಸಾಲಿನ ವರದಿಯನ್ನು ಮುಖ್ಯಕಾರ್ಯನಿರ್ವಹಕಾರಿ ಸುಷ್ಮಾ ಭಟ್ ವಾಚಿಸಿದರು.2023-24ನೇ ವರದಿ ಸಾಲಿನಲ್ಲಿ ಒಟ್ಟು ರೂ. 15,23,30,587.95/- ವಹಿವಾಟು ನಡೆಸಿದ್ದು, ಸಹಕಾರಿಯ ದುಡಿಯುವ ಬಂಡವಾಳವು ರೂ. 3,92,73,754.89/- ಗಳಾಗಿದ್ದು, ಲೆಕ್ಕ ಪರಿಶೋದನೆಯಲ್ಲಿ ನಿರಂತರವಾಗಿ `ಎ’ ತರಗತಿ ಪಡೆಯತ್ತಿದೆ ಎಂದು ತಿಳಿಸಿದರು.
ಸಹಕಾರಿಯ ಅಧ್ಯಕ್ಷ ಹರೀಶ ಪುತ್ತೂರಾಯರು 2023-24 ಸಾಲಿನ ಲೆಕ್ಕಪರಿಶೋಧನ ವರದಿಯನ್ನು ಮಂಡಿಸಿ, ಸದಸ್ಯರಿಗೆ 8.5% ಡಿವಿಡೆಂಡ್ನ್ನು ಘೋಷಿಸಿದರು. ನಿರ್ದೇಶಕ ವತ್ಸಲಾ ರಾಜ್ಣೀ 2024-25ನೇ ಸಾಲಿನ ಕ್ರಿಯಾಯೋಜನೆಯನ್ನು ಸಭೆಯಲ್ಲಿ ಮಂಡಿಸುತ್ತಾ ಇದನ್ನು ಸಾಧಿಸುವರೇ ಸದಸ್ಯರ ಪೂರ್ಣ ಸಹಕಾರವನ್ನು ಕೋರಿದರು. ಮುಂದಿನ ಆರ್ಥಿಕ ವರ್ಷದ ಬಜೆಟ್ ಅನ್ನು ನಿರ್ದೇಶಕ ಡಾ| ಸುರೇಶ ಪುತ್ತೂರಾಯರು ಮಂಡಿಸಿದರು. ಉಪಾಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ನಿರ್ದೇಶಕ ಬಾಲಕೃಷ್ಣ ಎಡಪಡಿತ್ತಾಯ ಕಿಜಾನ, ಡಾ. ಸುರೇಶ್ ಪುತ್ತೂರಾಯ, ಶ್ರೀಧರ ಬೈಪಡಿತ್ತಾಯ, ವಿಷ್ಣುಮೂರ್ತಿ ಯಂ, ಸುಧೀರ್ ಕೃಷ್ಣ, ರಾಜೇಂದ್ರ ಪ್ರಸಾದ್ ಯು, ವಿಷ್ಣುಮೂರ್ತಿ ಎಂ , ವತ್ಸಲಾ ರಾಜ್ಞಿ ಮತ್ತು ಮನೋರಮಾ ಎಸ್.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿ.ಎ ಪರಿಕ್ಷೇಯಲ್ಲಿ ತೇರ್ಗಡೆ ಹೊಂದಿದ ನರೇಶ್ ಪುತ್ತೂರಾಯ ಮತ್ತು ಶ್ರೀವತ್ಸ ಬೈಪಡಿತ್ತಾಯ ಅವರನ್ನು ಸಭೆಯಲ್ಲಿ ಸನ್ಮಾಯಿಸಲಾಯಿತು. ಡಾ| ಸುರೇಶ್ ಪುತ್ತೂರಾಯರು ಸತತ 29 ವೈದ್ಯಕೀಯ ಶಿಬಿರ ಆಯೋಜನೆಗೆ ಒರಿಸ್ಸಾದ ಭುವನೇಶ್ವರದಲ್ಲಿ ನಡೆದ ಡಯಾಬಿಟೀಸ್ ಇಂಡಿಯಾ 14ನೇ ವಿಶ್ವ ಸಮ್ಮೇಳನದಲ್ಲಿ ಡಯಾಬಿಟೀಸ್ ಎವೆರ್ನೆಸ್ ಇನ್ಟಿಏಟಿವ್ಯ ಅವಾರ್ಡ್ 2024 ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದು ಈ ಕುರಿತು ಸಹಕಾರಿ ವತಿಯಿಂದ ಸನ್ಮಾಯಿಸಲಾಯಿತು.
ಅಧ್ಯಕ್ಷ ಹರೀಶ ಪುತ್ತೂರಾಯರು ಸನ್ಮಾನಿತರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು. ಜಯಲಕ್ಷ್ಮೀಯವರನ್ನು ಬಿಜೆಪಿ ತಾಲೂಕು ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದದಕ್ಕೆ ಸನ್ಮಾನಿಸಲಾಯಿತು. ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ನಿಯಮಿತದ ಸಿಬ್ಬಂದಿಗಳು ಪ್ರಾರ್ಥಿಸಿ, ಡಾ. ಸುರೇಶ್ ಪುತ್ತೂರಾಯರು ವಂದಿಸಿದರು. ಸಹಕಾರಿಯ ಸಿಬ್ಬಂದಿಗಳಾದ ಅಕ್ಷಯ್, ಪೃಥ್ವಿ ,ಸತ್ಯಶ್ರೀ ಎಸ್ ಭಟ್ ಸಹಕರಿಸಿದರು.