ಪುತ್ತೂರು: ಪುತ್ತೂರು ಕೋರ್ಟ್ ರಸ್ತೆಯಲ್ಲಿ ಆ.22ರ ರಾತ್ರಿ ಕಾರಿನಲ್ಲಿದ್ದ ಹಿಂದು ಕಾರ್ಯಕರ್ತರಿಗೆ ಹಲ್ಲೆ ನಡೆಸಿದ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿದ ಬೆನ್ನಲ್ಲೇ ಆ.23ರ ನಸುಕಿನ ಜಾವ ಘಟನೆ ನಡೆದ ಸ್ಥಳದ ಪಕ್ಕದ ಫ್ಯಾನ್ಸಿ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಬೆಳಕಿಗೆ ಬಂದಿದೆ.
ಕೋರ್ಟ್ ರಸ್ತೆಯಲ್ಲಿನ ಇಲ್ಯಾಸ್ ಎಂಬವರ ಮಾಲಕತ್ವದ ಬ್ಲಾಕ್ ಡೈಮಂಡ್ ಫ್ಯಾನ್ಸಿ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿ ಕ್ಯಾನ್‌ನಿಂದ ಅಂಗಡಿಯ ರೋಲಿಂಗ್ ಶೆಟರ್‌ಗೆ ಪೆಟ್ರೋಲ್ ಸುರಿದು ಎರಡು ಮೂರು ಬಾರಿ ಕಟ್ಟಿ ಗೀರಿದ್ದಾನೆ.
ಬಳಿಕ ಕೊನೆಯ ಪ್ರಯತ್ನದಲ್ಲಿ ಬೆಂಕಿ ಕೊಡುವಲ್ಲಿಯಶಸ್ವಿಯಾಗಿ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಈ ಚಿತ್ರಣ ಅಂಗಡಿಯ ಸಿ ಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಬೆಳಿಗ್ಗೆ ಪುತ್ತೂರು ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.