ಆ.25: ಪಾಲ್ತಾಡಿಯಲ್ಲಿ ಸಾರಕರೆ ದಿ.ಶೀನಪ್ಪ ಪೂಜಾರಿ ಬೊಳಿಯಾಲ ಇವರ 21ನೇ ಸ್ಮರಣಾರ್ಥ ಕೆಸರ್‌ಡೊಂಜಿ ದಿನ,ಕಂಬಳ ಉತ್ಸವ-ನೇತ್ರ ತಪಾಸಣಾ ಶಿಬಿರ,ರಕ್ತದಾನ ಶಿಬಿರ-ಸಸಿ ವಿತರಣೆ ,ಪ್ರಶಸ್ತಿ ಪ್ರದಾನ ಆಯೋಜನೆ

0

ಸವಣೂರು: ಲೋಹಿತ್ ಬಂಗೇರ ಬಾಲಯ ನೇತೃತ್ವದಲ್ಲಿ  ತಿಂಗಳಾಡಿ ಬಾಲಯ ಕಂಬಳ ತಂಡ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು , ಪ್ರಸಾದ್ ನೇತ್ರಾಲಯ ಮಂಗಳೂರು, ಹಾಗು ಉಳ್ಳಾಕುಳು ಪ್ರೆಂಡ್ಸ್ ಕ್ಲಬ್ ಪಾಲ್ತಾಡಿ,  ಸಹಕಾರದೊಂದಿಗೆ ಸಾರಕರೆ ದಿ.ಶೀನಪ್ಪ ಪೂಜಾರಿ ಬೊಳಿಯಾಲ ಇವರ 21 ನೇ ಸ್ಮರಣಾರ್ಥ  ಕೆಸರ್‌ಡೊಂಜಿ ದಿನ, ಕಂಬಳ ಉತ್ಸವ ಮತ್ತು ರಕ್ತದಾನ ಉಚಿತ ನೇತ್ರ ತಪಾಸಣೆ ಮತ್ತು 50 ಮಂದಿಗೆ ಶಸ್ತ್ರಚಿಕಿತ್ಸೆ , ಒಂದು ಸಾವಿರ  ಸಸಿ ವಿತರಣೆ, ಪ್ರಶಸ್ತಿ ಪ್ರದಾನ, ರಾತ್ರಿ ಕುಣಿತ ಭಜನೆ ಆ.25ರಂದು ಧರ್ಮರಸು ಉಳ್ಳಾಕುಲು ದೈವಸ್ಥಾನ ಗದ್ದೆ ಚಾಕೊಟೆತ್ತಡಿ(ಮಾಡ) ಪಾಲ್ತಾಡಿಯಲ್ಲಿ ನಡೆಯಲಿದೆ.

ಬೆಳಿಗ್ಗೆ ಬಾಳಪ್ಪ  ಸುವರ್ಣ ಬಾಲಯ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ಮಾಜಿ ಸಂಸದ ನಳೀನ್ ಕುಮಾರ್ ಕಟೀಲು  ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಕೊಳ್ತಿಗೆ ಪ್ರಾಥಮಿಕ ಕೃ.ಪ.ಸ.ಸಂಘದ ಮಾಜಿ ನಿರ್ದೇಶಕ ದಿವಾಕರ ಬಂಗೇರ, ಬೆಂಗಳೂರು ತುಳುಕೂಟ ಅಧ್ಯಕ್ಷ ಸುಂದರ್ ರಾಜ್ ರೈ, ನಿವೃತ್ತ ಭೂಸೇನಾಧಿಕಾರಿ ಮಾಧವ ಬಿ.ಕೆ, ಪ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸ್ಥಾಪಕಾಧ್ಯಕ್ಷ ಲೋಕೇಶ್ ಕೋಡಿಕೆರೆ, ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್ , ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ, ಕೆದಂಬಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ , ಶ್ರೀ ಧರ್ಮರಸು ಉಳ್ಳಾಕ್ಲು ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸಂಜೀವ ಗೌಡ, ಕಂಬಳ ಮುಖ್ಯ ತೀರ್ಪುಗಾರ ವಿಜಯಕುಮಾರ್ ಕಂಗಿನಮನೆ, ಪೂಣೆಯ ಉದ್ಯಮಿ ಹರೀಶ್ ರೈ ನಡುಕೂಟೇಲು, ಅತಿಥಿಗಳಾಗಿರುವರು.  ವಿವಿಧ ಕ್ಷೇತ್ರದ ಸಾಧಕರಿಗೆ ಈ ಸಂದರ್ಭ ಗೌರವಾರ್ಪಣೆ ನಡೆಯಲಿದೆ. ನೇತ್ರ ಚಿಕಿತ್ಸಾ ಮತ್ತು ಅರೋಗ್ಯ ಶಿಬಿರವನ್ನು ಮಂಗಳೂರು ಪ್ರಸಾದ್ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್ , ರಕ್ತದಾನ ಶಿಬಿರವನ್ನು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ಡಾ.ಸೀತರಾಮ ಭಟ್,  ನಳೀಲು ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಸಸಿ ವಿತರಣೆ ಮತ್ತು ಸಾಯಂಕಾಲ ನಡೆಯುವ ಕುಣಿತ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ವಹಿಸಲಿದ್ದಾರೆ.  ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ, ಚಿತ್ರನಟ ರಾಜೀವ ರೈ ಎಡ್ತೂರು , ಹೈಕೋರ್ಟು ನ್ಯಾಯವಾದಿ ಎಂ ರಾಜಣ್ಣ, ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಎಸ್ ಬಿ ಜಯರಾಂ ರೈ, ಮನ್ಮಥ ಗೌಡ ಎಸ್ ಎನ್, ಬೆಳ್ಳಾರೆ ಠಾಣೆ ಉಪನಿರೀಕ್ಷಕ ಸಂತೋಷ್, ಸಂಪ್ಯ ಠಾಣಾ ಉಪನಿರೀಕ್ಷಕ ಜಂಬುರಾಜ್ ಮಹಾಜನ, ನಿವೃತ್ತ ಪ್ರಾಂಶುಪಾಲ ಸೂರ್ಯನಾರಾಯಣ  ಭಟ್, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೆಸರ ಸಂತೋಷ್ ಕುಮಾರ್ ರೈ, ಸವಣೂರು ಗ್ರಾ.ಪಂ ಅಧ್ಯಕ್ಷೆ ಸುಂದರಿ, ರಾಷ್ಟ್ರೀಯ ಕ್ರೀಡಾಪಟು ಅಶೋಕ್ ಕಣಿಯಾರು ಅತಿಥಿಗಳಾಗಿರುವರು. ಕೆಸರುಗದ್ದೆಯಲ್ಲಿ ಹೊನಲು ಬೆಳಕಿನ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟಕ್ಕೆ ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಚಾಲನೆ ನೀಡಲಿದ್ದಾರೆ.  ಪುರುಷರಿಗೆ , ಮಹಿಳೆಯರಿಗೆ , ಮಕ್ಕಳಿಗೆ ಪ್ರತೈಕವಾಗಿ ವಿವಿಧ ಸ್ಪರ್ದೆಗಳು ನಡೆಯಲಿದೆ. 

ದಿ| ಕಮಲ ಶೀನಪ್ಪ ಪೂಜಾರಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ
2023-24ನೇ ಸಾಲಿನ ಕಂಬಳ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಪರ್ಧೆ ನೀಡಿದ ಜೋಡಿಕೋಣಗಳ ಯಜಮಾನರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ, ಕೊಳಕೆ ಇರ್ವತ್ತೂರು ಭಾಸ್ಕರ ಕೊಟ್ಯಾನ್, ಬೋಳಾರ ತ್ರಿಶಾಲ್ ಕೆ. ಪೂಜಾರಿ,ತಿಂಗಳಾಡಿ ಬಾಲಯ ಪುಷ್ಪಾವತಿ ಬಾಲಪ್ಪ ಸುವರ್ಣ ಅವರು ಪ್ರಶಸ್ತಿ ಸ್ವೀಕರಿಸುವರು.

ಕೆಸರು ಗದ್ದೆಯ ಕ್ರೀಡೆಗೆ ವಿಶೇಷ ನಂಬಿಕೆಯಿದೆ

ಕೆಸರುಗದ್ದೆಯಲ್ಲಿ ಕುಪ್ಪಲಿಸಿರುವುದರಿಂದ ಮಣ್ಣಿನಲ್ಲಿರುವ ಔಷಧೀಯ ಗುಣಗಳು ದೇಹದ ಆರೋಗ್ಯ ಕಾಪಾಡುತ್ತದೆ. ಇದರಿಂದ ಚರ್ಮವ್ಯಾದಿ  ಗುಣವಾಗುತ್ತದೆ ನಂಬಿಕೆ ಈ ಕ್ರೀಡೆಗೆ ಇನ್ನಷ್ಟು ಮಹತ್ವ ನೀಡದೆ. ಈ ನಿಟ್ಟಿನಲ್ಲಿ  ಕೆಸರುಗದ್ದೆ ಎಂಬ ಜನಪದ ಕ್ರೀಡೆಯನ್ನು ಉಳಿಸುವ ಉದ್ದೇಶದಿಂದ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ. ಊರಿನ ಪರವೂರಿನ ಪರಸ್ಪರ ಜನರು ಭಾಗವಹಿಸಿ ಕೆಸರರೆಚಿಕೊಂಡು ಸಂಭ್ರಮಿಸಬೇಕು ಎನ್ನುತ್ತಾರೆ ತಿಂಗಳಾಡಿ ಬಾಲಯ ಕಂಬಳ ಸಮಿತಿ ಪ್ರಮುಖರಾದ ರೋಶನ್ ಬಂಗೇರ ಬಾಲಯ, ರೋಹಿತ್ ಬಂಗೇರ ಅಡೀಲು, ನಿತಿನ್ ಬಂಗೇರ ಅಭೀರ ಅವರು.

ನೆಲದ ಸಂಸ್ಕೃತಿಯ ಉದ್ದೀಪನದೊಂದಿಗೆ ಸಮಾಜ ಸೇವೆ

ನಮ್ಮ ಹಿರಿಯರಾದ ಸಾರಕರೆ ದಿ.ಶೀನಪ್ಪ ಪೂಜಾರಿ ಬೊಳಿಯಾಲ ಅವರ ನೆನಪಿನಲ್ಲಿ ಈ ನೆಲದ ಸಂಸ್ಕೃತಿಯ ಉದ್ದೀಪನಗೊಳಿಸುವ ಕಂಬಳ ಉತ್ಸವದ ಜತೆಗೆ ಪ್ರಕೃತಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ 1000 ಸಸಿ ವಿತರಣೆ  ಹಾಗೂ ಸಮಾಜಕ್ಕಾಗಿ ಉಚಿತ ನೇತ್ರ ತಪಾಸಣೆಯೊಂದಿಗೆ 50 ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆ, ರಕ್ತದಾನ ಶಿಬಿರದ ಆಯೋಜನೆ ಮಾಡಿದ್ದೇವೆ.ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನದ ಜತೆಗೆ ಕಂಬಳ ಕ್ಷೇತ್ರದಲ್ಲಿ ಉತ್ತಮ ಸ್ಪರ್ಧೆ ನೀಡಿದ ಜೋಡಿಕೋಣಗಳ ಯಜಮಾನರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಂಬಳ ಉತ್ಸವದಲ್ಲಿ ಪಾಲ್ಗೊಳ್ಳಲು ಜೂನಿಯರ್ ಕೋಣಗಳಿಗೆ ಮಾತ್ರ ಅವಕಾಶ ಎಂದು ಸಂಘಟಕರಾದ ಲೋಹಿತ್ ಬಂಗೇರ ಬಾಲಯ ತಿಳಿಸಿದರು.

LEAVE A REPLY

Please enter your comment!
Please enter your name here