ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ಹಲವು ಬಹುಮಾನ

0

ಕಾಣಿಯೂರು: ಕಡಬದ ಸರಸ್ವತಿ ಸಮೂಹ ಸಂಸ್ಥೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಲವಾರು ಬಹುಮಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಬಾಲಕರ ವಿಭಾಗದಲ್ಲಿ 7ನೇ ತರಗತಿಯ ರೋಶನ್ ಪಿ ಜೆ ಪ್ರಥಮ ಸ್ಥಾನ, 7ನೇ ತರಗತಿಯ ಜಶ್ವಿತ್ ಕೆ ಎಮ್ ನಾಲ್ಕನೇ ಸ್ಥಾನ, ಬಾಲಕರ ವಿಭಾಗದ ಆರ್ಟಿಸ್ಟಿಕ್ ವಿಭಾಗದಲ್ಲಿ 7ನೇ ತರಗತಿಯ ಕುಶಲ್ ಎ ಆರ್ ದ್ವಿತೀಯ ಸ್ಥಾನ, 6ನೇ ತರಗತಿಯ ರಿದಮಿಕ್ ವಿಭಾಗದಲ್ಲಿ ಹಾರ್ಧಿಕ್ ಬಿ ಟಿ ತೃತೀಯ ಸ್ಥಾನ , ಬಾಲಕಿಯರ ವಿಭಾಗದಲ್ಲಿ 7ನೇ ತರಗತಿಯ ಅವನಿ ಎಚ್ ಆರ್ ದ್ವಿತೀಯ ಸ್ಥಾನ, 6ನೇ ತರಗತಿಯ ಹಸ್ತಾ ಕೆ ಜೆ ನಾಲ್ಕನೇ ಸ್ಥಾನ, 6ನೇ ತರಗತಿಯ ಬಾಲಕಿಯರ ವಿಭಾಗದ ಆರ್ಟಿಸ್ಟಿಕ್ ವಿಭಾಗದಲ್ಲಿ ಸಮನ್ವಿ ಪಿ ಡಿ ದ್ವೀತೀಯ ಸ್ಥಾನ, 7ನೇ ತರಗತಿಯ ರಿದಮಿಕ್ ವಿಭಾಗದಲ್ಲಿ ಅಸ್ಮಿ ಕೆ ಪಿ ತೃತೀಯ ಸ್ಥಾನ , 8ನೇ ತರಗತಿಯ ಬಾಲಕರ ವಿಭಾಗದಲ್ಲಿ ಮೋನಿಷ್ ಟಿ ಪ್ರಥಮ ಸ್ಥಾನ, 8ನೇ ತರಗತಿಯ ಬಾಲಕಿಯರ ವಿಭಾಗದಲ್ಲಿ ಜನನಿ ಎಮ್ ಪಿ ದ್ವಿತೀಯ ಸ್ಥಾನ , 10ನೇ ತರಗತಿಯ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಹಂಶಿತ್ ಕುಮಾರ್ ಎ ದ್ವಿತೀಯ ಸ್ಥಾನ , 8ನೇ ತರಗತಿಯ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಶ್ರೀಮಾ ಕೆ ಎಚ್ ಪ್ರಥಮ ಸ್ಥಾನ, 9ನೇ ತರಗತಿಯ ಪ್ರಣಮ್ಯ ರೈ ದ್ವಿತೀಯ ಸ್ಥಾನ ಹಾಗೂ 9ನೇ ತರಗತಿಯ ವಿಜ್ಞಾತ್ರಿ ಬಿ ನಾಲ್ಕನೇ ಸ್ಥಾನ, ಪ್ರೌಢಶಾಲಾ ಬಾಲಕಿಯರ ಆರ್ಟಿಸ್ಟಿಕ್ ವಿಭಾಗದಲ್ಲಿ 8ನೇ ತರಗತಿಯ ಸಾನ್ವಿಕ ಎಚ್ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ತರಬೇತು ನೀಡಿರುತ್ತಾರೆ.


ಇವರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ದಿವಿಶ್ ಮುರುಳ್ಯ, ಮುಖ್ಯಗುರುಗಳು ಮತ್ತು ಎಲ್ಲಾ ಶಿಕ್ಷಕವೃಂದದವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here