





ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪಡಡ್ಕ ನಿವಾಸಿ, ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿರುವ ವಿನೋದ ಸೈಕಲ್ಸ್ ಮತ್ತು ಟಯರ್ಸ್ ಮಳಿಗೆ ಮಾಲಕ ಶಾಂತರಾಮ ಶೆಟ್ಟಿ(62ವ.)ರವರು ಆ.25ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಾಂತರಾಮ ಶೆಟ್ಟಿ ಅವರಿಗೆ ಆ.24ರಂದು ಸಂಜೆ ಅನಾರೋಗ್ಯ ಕಾಣಿಸಿಕೊಂಡಿದ್ದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಲ್ಲಿ ಆ.25ರಂದು ಬೆಳಿಗ್ಗೆ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಅವರು ಮೃತಪಟ್ಟರು ಎಂದು ವರದಿಯಾಗಿದೆ. ಮೃತರು ನೆಲ್ಯಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಸದಸ್ಯರಾಗಿ, ನೆಲ್ಯಾಡಿ ವಲಯ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು. ಈ ಹಿಂದೆ ಅವರು ಹಲವು ವರ್ಷ ಸಕಲೇಶಪುರದಲ್ಲಿ ಲ್ಯಾಂಡ್ಲಿಂಕ್ಸ್, ಟಯರ್ಸ್ ಮಾರಾಟ ಅಂಗಡಿ ಹೊಂದಿದ್ದರು. ಆ ಬಳಿಕ ಗೋಳಿತ್ತೊಟ್ಟಿನಲ್ಲಿ ದಿನಸಿ ಅಂಗಡಿ ಆರಂಭಿಸಿದ್ದರು. ಇವೆಲ್ಲವನ್ನೂ ಬಿಟ್ಟು 1 ವರ್ಷದಿಂದ ಹೊಸಮಜಲುನಲ್ಲಿ ವಿನೋದ ಸೈಕಲ್ಸ್ ಮತ್ತು ಟಯರ್ಸ್ ಅಂಗಡಿ ಆರಂಭಿಸಿ ಮಾರಾಟ ಮತ್ತು ಸರ್ವೀಸ್ ನೀಡುತ್ತಿದ್ದರು. ಮೃತರು ಪತ್ನಿ ಲಲಿತಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.


ಮೃತರ ಮನೆಗೆ ನೆಲ್ಯಾಡಿ ವಲಯ ಬಂಟರ ಸಂಘದ ಮಾಜಿ ಸಂಚಾಲಕರಾದ ಸತೀಶ್ ರೈ ಕೊಣಾಲುಗುತ್ತು, ಅಧ್ಯಕ್ಷ ಪ್ರತಾಪಚಂದ್ರ ರೈ ಕುದ್ಮಾರುಗುತ್ತು, ಕಾರ್ಯದರ್ಶಿ ಮಹಾಬಲ ಶೆಟ್ಟಿ ದೋಂತಿಲ, ಸಂಚಾಲಕ ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ಪುತ್ತೂರು ತಾಲೂಕು ಸಮಿತಿ ನಿರ್ದೇಶಕ ಜಯಾನಂದ ಬಂಟ್ರಿಯಾಲ್, ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು ಸಹಿತ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.













