ವಿಟ್ಲ: ಉಕ್ಕುಡದಲ್ಲಿ ‘ಸ್ಟಾರ್ ಎಂಟರ್‌ಪ್ರೈಸಸ್’ ಶುಭಾರಂಭ

0

ವಿಟ್ಲ: ವಿಟ್ಲ ಸಮೀಪದ ಉಕ್ಕುಡ ಗೇಟ್ ಬಳಿಯ ಟಿಎಚ್‌ಎಂಎ ಬಿಲ್ಡಿಂಗ್‌ನಲ್ಲಿ ‘ಸ್ಟಾರ್ ಎಂಟರ್‌ಪ್ರೈಸಸ್’ ಆ.23ರಂದು ಶುಭಾರಂಭಗೊಂಡಿತು.
ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಅವರು ದುವಾ ನೆರವೇರಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಹಲವಾರು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿದ ಸ್ಟಾರ್ ಎಂಟರ್‌ಪ್ರೈಸಸ್‌ನ ಮಾಲಕ ಅಝರುದ್ದೀನ್ ಕೂಡುರಸ್ತೆ ಮಾತನಾಡಿ ನಮ್ಮಲ್ಲಿ ಅಡಿಕೆ, ಗೇರುಬೀಜ, ತೆಂಗಿನಕಾಯಿ, ಬಾಳೆಗೊನೆ, ಕಾಳುಮೆಣಸು ಹಾಗೂ ಇನ್ನಿತರ ಕಾಡುತ್ಪನ್ನಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದು ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.

LEAVE A REPLY

Please enter your comment!
Please enter your name here