ಬೆಟ್ಟಂಪಾಡಿ: ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ಸಿಂಹ ಮಾಸದ ಯಕ್ಷಗಾನ ತಾಳಮದ್ದಳೆ ಮತ್ತು ಹಿರಿಯ ಕಲಾವಿದರ ಸಂಸ್ಮರಣೆಯ ಅಂಗವಾಗಿ ಎರಡನೇ ಶನಿವಾರದವಾದ ಸೆ. 24 ರಂದು ‘ವೀರ ಮಾರುತಿ’ ಯಕ್ಷಗಾನ ತಾಳಮದ್ದಳೆ ಮತ್ತು ಹಿರಿಯ ಕಲಾವಿದ ದಿ. ಬಾಜುವಳ್ಳಿ ಕಿಟ್ಟಣ್ಣ ರೈಯವರ ಸಂಸ್ಮರಣೆ ನಡೆಯಿತು.
ಸಂಘದ ಗೌರವಾಧ್ಯಕ್ಷ ಎನ್. ಸಂಜೀವ ರೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್ ಕಿಟ್ಟಣ್ಣ ರೈಯವರ ಸಂಸ್ಮರಣಾ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಹಿರಿಯ ಕಲಾವಿದ ಭಾಸ್ಕರ ಶೆಟ್ಟಿ ಕಿಟ್ಟಣ್ಣ ರೈಯವರ ಒಡನಾಟದ ಬಗ್ಗೆ ಮೆಲುಕು ಹಾಕಿದರು.
ದೇವಾಲಯದ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಕಿಟ್ಟಣ್ಣ ರೈಯವರ ಸಹೋದರ ಗಣೇಶ್ ರೈ ಬಾಜುವಳ್ಳಿ, ಪುತ್ರಿ ಉಷಾ ರೈ ಉಪಸ್ಥಿತರಿದ್ದರು. ಅವರ ಪುತ್ರ ಪ್ರಭಾಕರ ರೈ ಬಾಜುವಳ್ಳಿಯವರಿಗೆ ಸಂಘದ ವತಿಯಿಂದ ಸಂಸ್ಮರಣಾ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದ ಸದಸ್ಯ ಉಮೇಶ್ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಪ್ರದೀಪ್ ರೈ, ಕೋಶಾಧಿಕಾರಿ ಶ್ಯಾಂಪ್ರಸಾದ್ ಮಜಲುಗುಡ್ಡೆ, ಪದಾಧಿಕಾರಿಗಳು, ಸದಸ್ಯರು ವಿವಿಧ ರೀತಿಯಲ್ಲಿ ಸಹಕರಿಸಿದರು.