ಕೂವೆತ್ತಿಲ;ರಸ್ತೆಬದಿ ತ್ಯಾಜ್ಯ ಎಸೆದವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು, ದಂಡ ವಿಧಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ

0

ಪುತ್ತೂರು:ಪಿಕಪ್ ವಾಹನದಲ್ಲಿ ಬಂದು ರಸ್ತೆ ಬದಿ ಪ್ಲಾಸ್ಟಿಕ್ ಕಸ ಎಸೆಯುತ್ತಿರುವವರನ್ನು ತಾ. ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ರೆಡ್ ಹ್ಯಾಂಡ್ ಆಗಿ ಹಿಡಿದು ಅವರಿಗೆ ರೂ.3000 ದಂಡ ವಿಧಿಸಿ, ಎಸೆದ ತ್ಯಾಜ್ಯವನ್ನು ಅವರಿಂದಲೇ ತೆರವುಗೊಳಿಸಿರುವ ಕಬಕ ಗ್ರಾ.ಪಂ. ವ್ಯಾಪ್ತಿಯ ಕೂವೆತ್ತಿಲ ಎಂಬಲ್ಲಿ ಆ.28ರಂದು ಸಂಜೆ ನಡೆದಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪ ಕೂವೆತ್ತಿಲ ಎಂಬಲ್ಲಿಗೆ ಪಿಕಪ್ ವಾಹನದಲ್ಲಿ ಬಂದ ಬೆಂಗಳೂರು ಮೂಲದ 3 ಜನ ಕಾರ್ಮಿಕರು ಎಲೆಕ್ಟ್ರಿಕಲ್ ಸಂಬಂಧಿಸಿದ ಕಾಮಗಾರಿಗಳ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿ ಎಸೆಯುತ್ತಿದ್ದರು.

ಇದೇ ಸಂರ್ದಭ ಮಂಗಳೂರಿನಿಂದ ಪುತ್ತೂರು ಆಗಮಿಸುತ್ತಿದ್ದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಗಮನಿಸಿ ತಮ್ಮ ವಾಹನವನ್ನು ನಿಲ್ಲಿಸಿ ತ್ಯಾಜ್ಯ ಎಸೆಯುತ್ತಿದ್ದವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ್ದಿದ್ದರು.

ನಂತರ ಕಬಕ ಗ್ರಾ. ಪಂನ ಅಭಿವೃದ್ಧಿ ಅಧಿಕಾರಿ ಆಶಾರವರು ಮೂಲಕ ಅವರಿಗೆ ರೂ.3 ಸಾವಿರ ದಂಡ ವಿಧಿಸಿದಿರುವುದಲ್ಲದೆ ಎಸೆದ ಕಸವನ್ನು ಅವರ ಮುಖಾಂತರವೇ ಅಲ್ಲಿಂದ ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ.

ಕಬಕ ಗ್ರಾ.ಪಂ. ಸದಸ್ಯ ಶಾಬಾ, ತಾ.ಪಂ ವಿಷಯ ನಿರ್ವಾಹಕ ಸುರೇಶ್, ಎನ್‌ಆರ್‌ಎಲ್‌ಎಂ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಕಬಕ ಗ್ರಾ.ಪಂ ಲೆಕ್ಕ ಸಹಾಯಕ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here