ಕಡಬ: ಯೋಗಾಸನ ಸ್ಪರ್ಧೆಯಲ್ಲಿ ಸರಸ್ವತೀ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಕಡಬ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಸರಸ್ವತೀ ಸಮೂಹ ಸಂಸ್ಥೆಗಳು ಕಡಬ ಪ್ರಾಥಮಿಕ ಮತ್ತು ಪ್ರೌಢಶಾಲಾ ತಾಲೂಕು ಮಟ್ಟದ ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ, 10ನೇ ತರಗತಿ ವಿದ್ಯಾರ್ಥಿನಿ ಲಿಕ್ಷಿತಾ ಭಾಗವಹಿಸಿ ರಿದಮಿಕ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಮುಂದೆ ಮೂಡಬಿದ್ರೆಯಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.

ಪ್ರೌಢ ವಿಭಾಗದ ಬಾಲಕರ ಆರ್ಟಿಸ್ಟಿಕ್ ವಿಭಾಗದಲ್ಲಿ ದೀಪಕ್ 9ನೇ ತರಗತಿ ಭಾಗವಹಿಸಿ ದ್ವಿತೀಯ ಸ್ಥಾನ, ಯೋಗಾಸನ ಆರ್ಟಿಸ್ಟಿಕ್ ಬಾಲಕಿಯರ ವಿಭಾಗದಲ್ಲಿ ಇಂಚರ 9ನೇ ತರಗತಿ ದ್ವಿತೀಯ ಸ್ಥಾನ ಹಾಗೂ 8ನೇ ತರಗತಿ ಬಾಲಕರ ಗುಂಪು ಯೋಗಾಸನ ವಿಭಾಗದಲ್ಲಿ ಲೋಹಿತ್ ಕುಮಾರ್ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಇವರಿಗೆ ಸಂಸ್ಥೆಯ ಶಿಕ್ಷಕಿ ಜಲಜಾಕ್ಷಿ ಬಿ.ವಿ ಹಾಗೂ ಹಿರಿಯ ವಿದ್ಯಾರ್ಥಿನಿ ಮೋಹಿತ ಜೆ.ರೈ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here