ಸೆ.1: ಇಡ್ಕಿದು ಸೇವಾ ಸಹಕಾರಿ ಸಂಘದ ಮಹಾಸಭೆ

0

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ 2023-2024ನೇ ಸಾಲಿನ ವಾರ್ಷಿಕ ಮಹಾಸಭೆಯ ಸಂಘದ ಅಧ್ಯಕ್ಷರಾದ ಬಿ. ಸುಧಾಕರ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ಸೆ.1ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಸಂಘದ ಕೇಂದ್ರ ಕಛೇರಿ ‘ಶತಾಮೃತ’ದಲ್ಲಿ ನಡೆಯಲಿದೆ.

ಇದೇ ವೇಳೆ ಸಿಜ್ಲರ್ ಅಗ್ರೀಝೋನ್ ರವರಿಂದ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ ನಡೆಯಲಿದೆ. ಅದೇ ರೀತಿ ಬಾಲಸುಬ್ರಹ್ಮಣ್ಯ ಹಾಗೂ ಅವರ ತಂಡದವರಿಂದ ಹೈಟೆಕ್‌ ದೋಟಿಯಲ್ಲಿ ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ಮತ್ತು ಕಾರ್ಯಾಗಾರ, ಹುಲ್ಲು ಕತ್ತರಿಸುವ ಯಂತ್ರದಲ್ಲಿ ಎರಡು ಹಾಗೂ ಮೂರು ಬುರುಡೆಯ ಭಾರತದ ಸಂಶೋಧನೆಯ ಉಪಕರಣಗಳ ಮಾಹಿತಿ ಕಾರ್ಯಾಗಾರ ಮತ್ತು ಮಾರಾಟ ನಡೆಯಲಿದೆ.

ಕೃಷಿ‌ ಉಪಕರಣಗಳನ್ನು ಕೊಳ್ಳಲಿಚ್ಚಿಸುವ ಸಂಘದ ಸದಸ್ಯರಿಗೆ ಸ್ಥಳದಲ್ಲೆ ಸಾಲ ಸೌಲಭ್ಯವನ್ನು ಸಂಘ ಒದಗಿಸಲಿದೆ. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ ಎಸ್‌. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here