ನಿಡ್ಪಳ್ಳಿ; ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಕುಂಬ್ರ ಇದರ ಆಶ್ರಯದಲ್ಲಿ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ “ಅಭಿವ್ಯಕ್ತ – 24” ಕಾರ್ಯಕ್ರಮ ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಏಕತಡ್ಕ ಅಜ್ಜಿಕಲ್ಲು ಇಲ್ಲಿ ಆ.30 ರಂದು ನಡೆಯಿತು.
ಕಾರ್ಯಕ್ರಮವನ್ನು ಸುಜಾತ ಶೆಟ್ಟಿ ಎಡ್ಕತ್ತೋಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿ ಬ್ಯಾಂಕ್ ಆಫ್ ಬರೋಡದ ನಿವೃತ್ತ ಮ್ಯಾನೇಜರ್ ಜಗಜೀವನ್ ದಾಸ್ ರೈ ಮಾತನಾಡಿ ಹಸಿರು ನೈರ್ಮಲ್ಯ ಅಭ್ಯುದಯ ಶಾಲಾ ಪ್ರಶಸ್ತಿ ಪಡೆದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ, ಸೂರಂಬೈಲು ಶಾಲಾ ಶಿಕ್ಷಕ ನಾಗೇಶ ಪಾಟಾಳಿ ಮಾತನಾಡಿ ಉತ್ತಮ ಶಾಲೆಯಾದ ಇಲ್ಲಿ ಖಾಯಂ ಶಿಕ್ಷಕರ ಕೊರತೆ ಇದ್ದು ಆ ಕೊರತೆಯನ್ನು ನೀಗಿಸಲು ನಮ್ಮ ಸಂಘದ ವತಿಯಿಂದ ಇಲಾಖೆಗೆ ಒತ್ತಡ ಹಾಕಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ನಿವೃತ್ತ ಮುಖ್ಯ ಗುರು ಶ್ರೀಧರ ರೈ ಹೊಸಮನೆ, ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೈಕಾರ ಶಾಲಾ ಮುಖ್ಯ ಗುರು ರಾಮಣ್ಣ ರೈ , ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಬೈರೋಡಿ ಶುಭ ಹಾರೈಸಿದರು.ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆ ವಹಿಸಿದ್ದರು.
ಎಂಟನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ. ಬಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಗುರು ಚಿತ್ರಾ ರೈ.ಎಚ್ ವಂದಿಸಿದರು.ಕಾಣಿಯೂರು ಪ್ರೌಢಶಾಲಾ ಶಿಕ್ಷಕ ಪ್ರೀತಮ್ ಪಿಂಟೊ, ಬಡಗನ್ನೂರು ಕೊಯಿಲ ಶಾಲಾ ಶಿಕ್ಷಕ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.
ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ರೈ ಕೇರಿ,ವನಿತಾ ಎಡ್ಕತ್ತೋಡಿ, ನಳಿನಾಕ್ಷಿ ಕೇರಿ, ಜಿ.ಪಿ.ಟಿ ಶಿಕ್ಷಕ ಪ್ರೀತಮ್ ಎನ್, ಅತಿಥಿ ಶಿಕ್ಷಕಿಯರಾದ ಚಂದ್ರಕಲಾ.ಡಿ, ಲಕ್ಷ್ಮೀ, ಗೌರವ ಶಿಕ್ಷಕಿ ಕು.ಮುಫೀದಾ,ಕ್ಲಸ್ಟರ್ ನ ಎಲ್ಲಾ ಶಾಲೆಯ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು,ಅಡುಗೆ ಸಿಬ್ಬಂದಿಗಳು, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಹಕರಿಸಿದರು.ವಿದ್ಯಾಭಿಮಾನಿಗಳು, ದಾನಿಗಳು ಊರವರು ಪಾಲ್ಗೊಂಡರು.ಕ್ಲಸ್ಟರ್ ಮಟ್ಟದ ಸುಮಾರು 12 ಶಾಲೆಯ ಸ್ಪರ್ಧಾಳುಗಳು ಭಾಗವಹಿಸಿದರು.