ಬುರೂಜ್ ಶಾಲೆಯಲ್ಲಿ ಶ್ರೀ ಕೃಷ್ಣಾಜನ್ಮಾಷ್ಟಮಿ ಆಚರಣೆ

0

ಪುಂಜಾಲಕಟ್ಟೆ : ಮೂಡುಪಡುಕೋಡಿ ,ರಝಾ ನಗರ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಭಗವಾನ್ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಸಂಭ್ರಮ ,ಸಡಗರದಿಂದ ಇತ್ತೀಚೆಗೆ ಶಾಲಾ ಆವರಣದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಎಲ್ ಕೆ ಜಿ , ಯು ಕೆ ಜಿ ಹಾಗೂ ಒಂದನೆಯ ತರಗತಿ ಪುಟಾಣಿಗಳು ರಾಧೆ – ಕೃಷ್ಣರಾಗಿ ವರ್ಣರಂಜಿತ ಪೋಷಾಕಿನಲ್ಲಿ ಮಿಂಚಿ , ಎಲ್ಲರನ್ನೂ ರಂಜಿಸೋ ಮೂಲಕ ,
ಪ್ರೇಕ್ಷಕರ ಮನ ಗೆದ್ದರು.


ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ , ಮುಖ್ಯೋಪಾಧ್ಯಾಯಿನಿ ಜಯಶ್ರೀ ಬಿ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಶಿಕ್ಷಕಿಯರಾದ ವನಿತಾ ಶೆಟ್ಟಿ, ಖುರ್ಷಿದ್, ಅನ್ನಪೂರ್ಣೇಶ್ವರಿ ರಿಫಾನ , ತೃಪ್ತಿ ಇವರುಗಳ ಪ್ರೇರಣೆಯಿಂದ ಶಾಲಾ ಅವರಣವೆಲ್ಲಾ ಕೃಷ್ಣಾ ಜನ್ಮಾಷ್ಟಮಿಯ ಸಂಭ್ರಮ ಕಲೆಗಟ್ಟಿತ್ತು.

LEAVE A REPLY

Please enter your comment!
Please enter your name here