ಕಾಣಿಯೂರು: ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು, ಬ್ಲೋಸಮ್ ಆಂಗ್ಲ ಮಾಧ್ಯಮ ಶಾಲೆ ಬೆಳುವಾಯಿ ಇದರ ಜಂಟಿ ಆಶ್ರಯದಲ್ಲಿ ಆ.30ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿಜೇತರಾಗಿ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕುಮಾರಿ ಶ್ರೀಮಾ ಕೆ ಹೆಚ್ ಪ್ರಥಮ ಸ್ಥಾನ, ಪ್ರಣಮ್ಯ ರೈ ಪಂಚಮ ಸ್ಥಾನ, 14 ರ ವಯೋಮಾನದ ಬಾಲಕರ ವಿಭಾದಲ್ಲಿ ಮೋನಿಶ್ ಟಿ ಪ್ರಥಮ ಸ್ಥಾನ ರೋಷನ್ ಪಿ ಜೆ ಚತುರ್ಥ ಸ್ಥಾನ ಪಡೆದು ಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬಾಲಕಿಯರ ಆರ್ಟಿಸ್ಟಿಕ್ ವಿಭಾಗ ದಲ್ಲಿ ಸಾನ್ವಿಕಾ ಹೆಚ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಶ್ರೀಮಾ ಕೆ ಹೆಚ್ ಯೋಗ ಕುಮಾರಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರಿಗೆ ಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ತರಬೇತು ನೀಡಿರುತ್ತಾರೆ. ಶಿಕ್ಷಕಿ ಜಯಶೀಲ ಸಹಕರಿಸಿದರು. ವಿಜೇತರನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವಿಶ್ ಮುರುಳ್ಯ, ಮುಖ್ಯಗುರುಗಳು ಮತ್ತು ಎಲ್ಲಾ ಶಿಕ್ಷಕವೃಂದದವರು ಅಭಿನಂದಿಸಿದರು.