(ನಾಳೆ)ಸೆ.1: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ಇದರ 65ನೇ ವರ್ಷದ ವಾರ್ಷಿಕ ಮಹಾಸಭೆಯು ಬ್ರಹ್ಮ ಶ್ರೀ ನಾರಾಯಣಗುರುಸ್ವಾಮಿ ಸಭಾಭವನದಲ್ಲಿ ಸೆ.1ರಂದು ಜರಗಲಿರುವುದು.

1958ನೇ ವರ್ಷದಲ್ಲಿ ದಿವಂಗತ ಅರಿಯಡ್ಕ ಕೃಷ್ಣ ಮೂಲ್ಯರ ಮುಂದಾಳುತ್ವದಲ್ಲಿ ಗ್ರಾಮೀಣ ಕುಂಬಾರಿಕೆಯ ಅಭಿವೃದ್ದಿಗಾಗಿ ಸ್ಥಾಪನೆಯಾದ ಸಹಕಾರ ಸಂಘವು ಇಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, 15 ಶಾಖೆಗಳ ಮೂಲಕ ಸದಸ್ಯವರ್ಗಕ್ಕೆ ಸೇವೆಯನ್ನು ನೀಡುತ್ತಾ ಬಂದಿದೆ. ಸಹಕಾರ ಸಂಘವು ತನ್ನ ಸದಸ್ಯರಿಗೆ ಉತ್ತಮ ಸೇವೆ ನೀಡುವ ಮೂಲಕ ಅಭಿವೃದ್ದಿಯ ಪಥದಲ್ಲಿ ಮುಂದುವರಿಯುತ್ತಿದೆ. ಸಂಘವು 36876 ಸದಸ್ಯಬಲವನ್ನು ಹಾಗೂ ರೂ. 358.75 ಲಕ್ಷ ಪಾಲು ಬಂಡವಾಳವನ್ನೂ ಹೊಂದಿರುತ್ತದೆ. ರೂ. 100 ಕೋಟಿ ಠೇವಣಿ, ಹೊಂದಿದ್ದು, ರೂ. 75.50 ಕೋಟಿ ಹೊರಬಾಕಿ ಸಾಲ ಇರುತ್ತದೆ. ಲೆಕ್ಕಪರಿಶೋಧನೆಯಲ್ಲಿ ನಿರಂತರವಾಗಿ ಎ ವರ್ಗವನ್ನು ಕಾಯ್ದುಕೊಂಡಿದ್ದು, 2023-24ನೇ ಸಾಲಿನಲ್ಲಿ ರೂ.2.01 ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.21 ಲಾಭಾಂಶವನ್ನು ವಿತರಿಸಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ವಕೀಲ ಭಾಸ್ಕರ ಎಂ ಪೆರುವಾಯಿ ತಿಳಿಸಿದ್ದಾರೆ.


ಪುತ್ತೂರು ಮಾಣಿ, ಬಿ ಸಿ ರೋಡು ವಿಟ್ಲ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದು, ಬೆಳ್ಳಾರೆಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು 20 ಸೆಂಟ್ಸ್ ಜಮೀನು ಖರೀದಿಸಲಾಗಿದೆ. ಸರ್ವರ ಸಹಕಾರದಿಂದ ಅಭಿವೃದ್ದಿಯನ್ನು ಸಾಧಿಸಲಾಗುತ್ತಿದ್ದು, ನಮ್ಮ ಸಾಧನೆಗೆ ಸಹಕರಿಸಿದ ಎಲ್ಲಾ ಸದಸ್ಯರನ್ನು ಹಾಗೂ ಹಿರಿಯರನ್ನು ಸ್ಮರಿಸಿದರು. ಕರ್ನಾಟಕ ರಾಜ್ಯದಲ್ಲಿಯೇ ಏಕಮಾತ್ರ ಕುಂಬಾರಿಕಾ ಉತ್ಪಾದನಾ ತರಬೇತಿ ಕೇಂದ್ರವನ್ನು ಹೊಂದಿದ ಸಹಕಾರ ಸಂಘವಾಗಿದ್ದು, ಕುಶಲ ಕರ್ಮಿಗಳಿಗೆ ತರಬೇತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ. ಕುಂಬಾರಿಕೆ ವೄತ್ತಿ ಮಾಡಿ 60‌ ವರ್ಷ ಮೇಲ್ಪಟ್ಟ ಕುಶಲ ಕರ್ಮಿಗಳಿಗೆ ವೃದ್ಧಾಪ್ಯವೇತನವನ್ನು ಸಹಕಾರ ಸಂಘದ ಲಾಭದಿಂದ ನೀಡಲಾಗುತ್ತಿದೆ. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಬಗ್ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ ಸಂಜೀವ ಕುಲಾಲ್ ನಿವೃತ್ತ ಸೈನಿಕರು, ಸುಂದರ ಕುಂಬಾರ ಕುಂಬಾರಿಕೆ ವೃತ್ತಿ, ಡಾ. ರಮೇಶ್ ವೈದ್ಯಕೀಯ ಕ್ಷೇತ್ರ, ವೆಂಕಪ್ಪ ಎನ್ ಬಂಜನ್ ಮತ್ತು ರಮೇಶ್ ಮಾಸ್ಟರ್ ಸಾಮಾಜಿಕ ಸೇವೆ, ಕು.ಆದ್ಯ ಬಾಲ ಪ್ರತಿಭೆ, ಭವ್ಯ ದಯಾನಂದ್ ಅಟ್ಲೂರು ಉತ್ತಮ ಶಿಕ್ಷಕರು, ದೇವಪ್ಪ ಪಂಜಿಕಲ್ಲು ಧಾರ್ಮಿಕ ಕ್ಷೇತ್ರ ಸಂಗಮ ಜಿ ಎಚ್ ಕ್ರೀಡಾ ಕ್ಷೇತ್ರ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ ಅವರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್ ಜನಾರ್ದನ ಮೂಲ್ಯ ಹಾಗೂ ಉಪಾಧ್ಯಕ್ಷ ದಾಮೋದರ ವಿ ]ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here