ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ-ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

0

ಪುತ್ತೂರು : ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯವ್ಯಾಪ್ತಿಗೊಳಪಟ್ಟ ಸವಣೂರು, ಪುಣ್ಚಪ್ಪಾಡಿ, ಕುದ್ಮಾರು, ಬೆಳಂದೂರು ಮತ್ತು ಕಾಯಿಮಣ ಗ್ರಾಮದ ಸದಸ್ಯರ ಮನೆಯ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಶೇ.90 % ಕ್ಕಿಂತ ಹೆಚ್ಚು ಮತ್ತು ಪದವಿಯಲ್ಲಿ ಶೇ.80% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಸದ್ರಿ ವಿದ್ಯಾರ್ಥಿಗಳನ್ನು ಸೆ. 15 ರಂದು ನಡೆಯುವ ಮಹಾಸಭೆಯಲ್ಲಿ ಗೌರವಧನದೊಂದಿಗೆ ಪುರಸ್ಕರಿಸಲಾಗುವುದು.ಆದುದರಿಂದ ಸೆ. 6 ರೊಳಗೆ ಆರ್ಹ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್, ಭಾವಚಿತ್ರ ಮತ್ತು ಅಂಕ ಪಟ್ಟಿ ಪ್ರತಿಗಳನ್ನು ಸಂಘದ ಪ್ರಧಾನ ಕಚೇರಿಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಸಂಘದ
ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಹಾಗೂ ನಿರ್ದೇಶಕರುಗಳು ಮತ್ತು ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here