ಸಿಝ್ಲರ್ಸ್ ಅಗ್ರಿಝೋನ್ ರವರಿಂದ ಇಡ್ಕಿದು ಸೇವಾ ಸಹಕಾರಿ ಸಂಘದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ

0

ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ
ಸಂಘದಿಂದ ಸ್ಥಳದಲ್ಲೇ ಸಾಲ ಸೌಲಭ್ಯ

ಪುತ್ತೂರು: ಸಿಝ್ಲರ್ ಗ್ರೂಪ್ಸ್ ನಿಂದ ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ಸೇವಾ ಮಳಿಗೆಯಾದ “ಸಿಝ್ಲರ್ಸ್ ಅಗ್ರಿಝೋನ್” ರವರಿಂದ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟವು ಬಂಟ್ವಾಳ ತಾಲೂಕಿನ ಇಡ್ಕಿದು ಸೇವಾ ಸಹಕಾರಿ ಸಂಘದ ಕೇಂದ್ರ ಕಛೇರಿಯ ಸಹಾಮೃತ ಉರಿಮಜಲು ಇಲ್ಲಿ ಸೆ.1 ರಂದು ನಡೆಯಿತು.

ವಿವಿಧ ಮಾದರಿಯ ಔಷಧಿ ಸಿಂಪಡಿಸುವ ಯಂತ್ರ(ಪವರ್ ಸ್ಪ್ರೇಯರ್ಸ್), ಮರ ಕೊಯ್ಯುವ ಯಂತ್ರ, ಬ್ಯಾಟರಿ ಚಾಲಿತ ಸ್ಪ್ರೇಯರ್, ಗುಂಡಿ ತೋಡುವ ಯಂತ್ರ, ಅಗತೆ ಮಾಡುವ ಯಂತ್ರ, ವಿವಿಧ ಮಾದರಿಯ ಕಳೆ ಕೊಚ್ಚುವ ಯಂತ್ರಗಳು, ವಾಟರ್ ಪಂಪ್ ಸೆಟ್, ಕೊಟ್ಟಿಗೆ ತೊಳೆಯುವ ಯಂತ್ರ ಹಾಗೂ ಇನ್ನಿತರ ಕೃಷಿ ಯಂತ್ರೋಪಕರಣಗಳು ಪ್ರದರ್ಶನ ಹಾಗೂ ಮಾರಾಟದ ಸೇವೆಯಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮಾತ್ರವಲ್ಲ ಯಂತ್ರೋಪಕರಣಗಳನ್ನು ಖರೀದಿಸುವ ಗ್ರಾಹಕರಿಗೆ ಇಡ್ಕಿದು ಸೇವಾ ಸಹಕಾರಿ ಸಂಘದಿಂದ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಒದಗಿಸಿಕೊಡಲಾಯಿತು. ಮುಂದಿನ ದಿನಗಳಲ್ಲಿ ಯಂತ್ರೋಪಕರಣಗಳ ಖರೀದಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 8867258304, 08251-295588 ನಂಬರಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here