Puttur: ಕಲ್ಲಾರೆಯಲ್ಲಿ ರಸ್ತೆ ಮಧ್ಯೆ ಅಪಾಯವನ್ನು ಆಹ್ವಾನಿಸುತ್ತಿರುವ ಹೊಂಡ ಗುಂಡಿಗಳು..!

0

ಪುತ್ತೂರು: ಪುತ್ತೂರು-ದರ್ಬೆ ಮುಖ್ಯ ರಸ್ತೆಯ ಕಲ್ಲಾರೆಯಲ್ಲಿ ರಸ್ತೆ ಮಧ್ಯೆ ಬೃಹದಾಕಾರದ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು ವಾಹನ ಸವಾರರು ಪ್ರಯಾಸಪಟ್ಟು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ರಸ್ತೆ ಮಧ್ಯೆ ಮತ್ತು ಬದಿಯಲ್ಲಿ ಗುಂಡಿ ಇರುವುದರಿಂದ ಈಗಾಗಲೇ ಕೆಲವು ದ್ವಿಚಕ್ರ ವಾಹನ ಪಲ್ಟಿಯಾಗಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಮಳೆ ಬಂದು ರಸ್ತೆಯಲ್ಲಿರುವ ಗುಂಡಿಯಲ್ಲಿ ನೀರು ತುಂಬಿದ್ದು ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗಿದೆ.

ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ಹಿಂದಿನಿಂದ ಬರುವ ವಾಹನ ಡಿಕ್ಕಿಯಾಗುವ ಸಾಧ್ಯತೆಯೂ ನಿಶ್ಚಲವಾಗಿದೆ. ಒಟ್ಟಾರೆಯಾಗಿ ಕಲ್ಲಾರೆಯಲ್ಲಿ ರಸ್ತೆ ಮಧ್ಯೆ ಇರುವ ಹೊಂಡ ಗುಂಡಿಗಳು ಅಪಾಯವನ್ನು ಆಹ್ವಾನಿಸುತ್ತಿದ್ದು ಸಂಬಂಧಪಟ್ಟವರು ಇತ್ತ ಗಮನಹರಿಸಬೇಕೆನ್ನುವ ಆಗ್ರಹ ವಾಹನ ಸವಾರರಿಂದ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here